ರಜೆ ಮುಗಿಸಿ ಹಿಂದಿರುಗುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ಸಾವು

ಘಾಜಿಯಾಬಾದ್​/ನೊಯ್ಡಾ: ಬಾಗ್​ಪತ್​ನ ಘಜಿಯಾಬಾದ್ ಗಡಿಯ ಬಳಿಯ ಈಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್​ ಹೈವೆಯಲ್ಲಿ ಕಾರೊಂದು ನಿಯಂತ್ರಣ ಕಳೆದುಕೊಂಡು ಸಣ್ಣ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೆಹಲಿ ಮೂಲದ ಕರೀಷ್ಮಾ ಧಿಂಗ್ರಾ , ಲೂಧಿಯಾನದ ಕಾಂತ್​ ಧಿಂಗ್ರಾ, ಉತ್ತರಪ್ರದೇಶ್​ ಮೂಲದ ಶೋಯಬ್​, ರಾಜಸ್ಥಾನ್​ ಮೂಲದ ಅಭಿಷೇಕ್​ ಸೋನಿ ಮೃತರು. ಮೊರದಾಬಾದ್​ ಮೂಲದ ಅನ್ಚಲ್ ರಾಣಾ ಎಂಬ ವಿದ್ಯಾರ್ಥಿ ಗಾಯಗೊಂಡಿದ್ದು, ಇವರ ತಂದೆ ರಾಮ್​ಪುರದಲ್ಲಿ ಅಪರಾಧ ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.​

ಐವರು ವಿದ್ಯಾರ್ಥಿಗಳು ಶಾರದಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು. ಇವರೆಲ್ಲರೂ ರಜೆ ನಿಮಿತ್ತ ಹಿಮಾಚಲ್​ಪ್ರದೇಶಕ್ಕೆ ತೆರಳಿ ಹಿಂದಿರುಗುವ ವೇಳೆ ಪಶ್ಚಿಮ ಉತ್ತರ ಪ್ರದೇಶದ ಬಾಗ್ಪಾತ್ ಜಿಲ್ಲೆಯ ಬಳಿ ಬರುವ ವೇಳೆ ಈ ಅವಘಡ ನಡೆದಿದೆ.

ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲಾಗಿದ್ದ ಸಣ್ಣ ಲಾರಿಯನ್ನು ನೋಡಿದ ತಕ್ಷಣ ಚಾಲಕ 50 ಮೀಟರ್​ ದೂರದಲ್ಲೇ ಬ್ರೇಕ್​ ಹಾಕಿದ್ದಾನೆಯಾದರೂ ನಿಯಂತ್ರಣಕ್ಕೆ ಬಾರದೆ ವಾಹನ ಜಾರಿ ಬಂದು ಲಾರಿಗೆ ಹೊಡೆದಿದ್ದು, ಕಾರಿಗೆ ತೀವ್ರ ಹಾನಿಯಾದ್ದರಿಂದ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ. ಅಪಘಾತಕ್ಕೂ ಮುನ್ನ 120 ರಿಂದ 130 ಕಿ.ಮೀ. ವೇಗದಲ್ಲಿ ತೆರಳುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಬಳಿಕ ಲಾರಿ ಚಾಲಕ ಸ್ಥಳದಿಂದ ಓಡಿಹೋಗಿದ್ದು, ಲಾರಿ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *