ನಿವೃತ್ತರಾದರೂ ಜೀವನೋತ್ಸಾಹ ಮಾದರಿಯಾಗಬೇಕು

ಡೂರು: ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಜೀವನೋತ್ಸಾಹ ಯುವ ಜನತೆಗೆ ಮಾದರಿಯಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ನಿವೃತ್ತ ನೌಕರರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ. ಸಂಘಕ್ಕೆ ನಿವೇಶನ ದೊರಕಿಸಿಕೊಡಲು ಪುರಸಭೆಯೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ನಮ್ಮನ್ನು ಸಾಕಿ ಸಲಹಿ ಜೀವನಕ್ಕೆ ದಾರಿ ತೋರಿದ ತಂದೆ, ತಾಯಿಯನ್ನು ಅವರ ಇಳಿವಯಸ್ಸಿನಲ್ಲಿ ಚೆನ್ನಾಗಿ ಪಾಲನೆ ಮಾಡಬೇಕು. ವೃದ್ಧಾಶ್ರಮ ನಿರ್ಮಿಸುವುದ ದೊಡ್ಡದಲ್ಲ. ಆದರೆ ಆ ಕಾರ್ಯ ಮಾಡುವ ಅವಕಾಶ ಸೃಷ್ಟಿಯಾಗಬಾರದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿವೃತ್ತ ನೌಕರರ ಸಂಘಕ್ಕೆ ಪಟ್ಟಣದಲ್ಲಿ ಸೂಕ್ತ ನಿವೇಶನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ವೃದ್ಧಾಪ್ಯ ದಿನಗಳಲ್ಲಿ ನೆಮ್ಮದಿಯ ಬದುಕು ಅಗತ್ಯ ಎಂದರು.
ನೂತನ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ಸಂಘದ ಸದಸ್ಯರ ಆರೋಗ್ಯದ ಕಾಳಜಿಗೆ ಹೆಚ್ಚು ಶಿಬಿರಗಳ ಆಯೋಜಿಸುವ ಚಿಂತನೆ ನಡೆಸಲಾಗಿದೆ ಎಂದರು.
ಸಂಘಟನಾ ಕಾರ್ಯದರ್ಶಿ ಗುರುರಾಜ ಹಾಲ್ಮಠ್ ಅವರು, ಇತ್ತೀಚೆಗೆ ನಿವೃತ್ತರಾದ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳಲ್ಲಿ ವ್ಯತ್ಯಾಸವಾಗಿದೆ. ಇದನ್ನು ಸರಿಪಡಿಸಲು ಶಾಸಕರು ಸಹಮತ ತೋರಬೇಕು ಎಂದು ಸಂಘದಿಂದ ಮನವಿ ಸಲ್ಲಿಸಿದರು.
ಕೋಶಾಧ್ಯಕ್ಷ ನಂಜುಂಡಾರಾಧ್ಯ, ಜಿಲ್ಲಾಧ್ಯಕ್ಷ ಕೆ.ಎ.ಗೋಪಾಲಕೃಷ್ಣ, ಜಿಲ್ಲಾ ಖಜಾಂಚಿ ಕಾಳಯ್ಯ, ಕೃಷ್ಣಮೂರ್ತಿ, ಎಚ್.ಸಿ.ರೇವಣಸಿದ್ದಪ್ಪ, ಜಿ.ಬಿ.ಆನಂದಮೂರ್ತಿ, ಶಾಂತಪ್ಪ, ಡಾ. ಸಿ.ಎಸ್.ರವಿಕುಮಾರ್, ಅನಂತ್ ಗುರೂಜಿ ಇತರರಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…