ರಾಣೆಬೆನ್ನೂರ: ನಿವೃತ್ತರು ಆಶಾವಾದಿಗಳಾಗಿ ತಮ್ಮ ಮುಂದಿನ ಬದುಕನ್ನು ಸಾಗಿಸಬೇಕು ಎಂದು ಎಸ್ಬಿಐ ವ್ಯವಸ್ಥಾಪಕ ಸಿ. ನಾಗೇಂದ್ರರಾವ್ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪಿಂಚಣಿದಾರರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿಜಿಟಲ್ ಬ್ಯಾಂಕಿಂಗ್ ಪ್ರಾರಂಭವಾದ ಮೇಲೆ ಬ್ಯಾಂಕ್ಗಳಲ್ಲಿ ಜನ ಸಮೂಹ ಕಡಿಮೆಯಾಗಿದೆ. ನಿವೃತ್ತ ನೌಕರರಿಂದ ಬ್ಯಾಂಕ್ನಲ್ಲಿ ಹೆಚ್ಚಿನ ಜನರನ್ನು ಕಾಣುವಂತಾಗಿದೆ. ನಮ್ಮ ಬ್ಯಾಂಕಿನಲ್ಲಿ ಏನೇ ಸಮಸ್ಯೆಗಳಿದ್ದರೂ ನಿವೃತ್ತ ನೌಕರರು ನನ್ನನ್ನು ಭೇಟಿಯಾದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತೇನೆ ಎಂದರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಅಣ್ಣಿಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. 150ಕ್ಕೂ ಅಧಿಕ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು.
ಪ್ರಮುಖರಾದ ಎಸ್.ಎಂ. ಸಂಕಮ್ಮನವರ, ಎಸ್.ಬಿ. ಕೊಪ್ಪದ, ಬಿ.ಎಸ್. ಮಾಸಣಗಿ, ಎನ್.ಎಸ್. ಪಾಟೀಲ, ಬಿ.ಬಿ. ಗೌಡರ, ಟಿ.ಎನ್. ಮುತ್ತಳ್ಳಿ, ಎಸ್.ಕೆ. ನೇಶ್ವಿ, ಎಂ.ಪಿ. ಮುದ್ದಿ, ಎಂ.ಬಿ. ಬೆನಕಣ್ಣವರ, ಜಿ.ಜಿ. ಮಹಾಂತಶೆಟ್ಟರ, ನಾಗರತ್ನಮ್ಮ, ಶಕುಂತಲಾ ಯಕನಹಳ್ಳಿ, ಸುಂದ್ರಾ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತರು ಆಶಾವಾದಿಗಳಾಗಿ ಬದುಕು ಸಾಗಿಸಬೇಕು; ನಾಗೇಂದ್ರರಾವ್

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips
Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…
ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd
bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…
ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips
Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…