ಪಿಂಚಣಿ ಹಣಕ್ಕಾಗಿ ಜೆಸ್ಕಾಂ ಕಚೇರಿ ಮುಂದೆ ನಿವೃತ್ತ ನೌಕರ ಭಿಕ್ಷಾಟನೆ

blank

ಬಳ್ಳಾರಿ : ಪಿಂಚಣಿ ಹಣಕ್ಕಾಗಿ ನಿವೃತ್ತ ನೌಕರೊಬ್ಬರು ಬಳ್ಳಾರಿ ನಗರದ ಜೆಸ್ಕಾಂ ಕಚೇರಿ ಗೇಟ್ ಮುಂದೆ ಕುಳಿತು ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರೆ ಗ್ರಾಮದ ನಿಜಲಿಂಗಪ್ಪ (61) ಅವರು 2022ರಲ್ಲಿ ನಿವೃತ್ತಿ ಹೊಂದಿದ್ದು ಎರಡು ವರ್ಷದಿಂದ ಪಿಂಚಣಿ ಹಣಕ್ಕಾಗಿ ಜೆಸ್ಕಾ ಕಚೇರಿ ಅಲೆಯುತ್ತಿದ್ದಾರೆ.

ನಿಜಲಿಂಗಪ್ಪ ಎಂಬುವವರಿಗೆ 2 ವರ್ಷದಿಂದ ಪಿಂಚಣಿ ಹಣ ಬಂದಿಲ್ಲ. ಹೀಗಾಗಿ ಅವರು ಪಿಂಚಣಿ ಬರ್ತಿಲ್ಲ, ಜೀವನ ಮಾಡೋಕೆ ಆಗ್ತಿಲ್ಲ. ಪಿಂಚಣಿ ನೀಡಿ ಎಂದು ಕಣ್ಣೀರು ಹಾಕಿದ್ದಾರೆ. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರೆ ಗ್ರಾಮದ ನಿಜಲಿಂಗಪ್ಪ ಅವರು 2022ರಲ್ಲಿ ನಿವೃತ್ತಿ ಹೊಂದಿದ್ದರು.

ನಿವೃತ್ತ ನೌಕರರ ನಿಜಲಿಂಗಪ್ಪ ಎಂಬುವವರು 1997 ರಲ್ಲಿ ದಿನಗೂಲಿ ನೌಕರನಾಗಿ ಪವರ್‌ಮನ್ ಕೆಲಸಕ್ಕೆ ಸೇರಿದ್ದರು. 2008ರಲ್ಲಿ ಕೆಲಸ ಕಾಯಂ ಆಗಿತ್ತು.ಕಳೆದ ಎರಡು ವರ್ಷದ ಹಿಂದೆ ನಿವೃತ್ತಿ ಆಗಿದ್ದರಿಂದ ಪಿಂಚಣಿ ಹಣಕ್ಕಾಗಿ ಅಲೆದಾಡುತ್ತಿದ್ದರು. ಆದರೂ ಅಧಿಕಾರಿಗಳು ನಿರ್ಲಕ್ಷೃವಹಿಸುತ್ತಿದ್ದರು. ಅದಕ್ಕೆ ಬೇಸತ್ತು ಮಂಗಳವಾರ ಬಳ್ಳಾರಿ ಜೆಸ್ಕಾಂ ಕಚೇರಿ ಮುಂದೆ ಭಿಕ್ಷಾಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆ ವರೆಗೆ ಕಚೇರಿ ಮುಂದೆ ಕುಳಿತು ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಗಮನಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

TAGGED:
Share This Article

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…