ನಿವೃತ್ತ ಡಿಜಿಪಿ ಸಿ.ದಿನಕರನ್​ ನಿಧನ

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಿವೃತ್ತ ಡಿಜಿಪಿ ಸಿ.ದಿನಕರನ್​ (77) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಇಂದಿರಾ ನಗರದ ಕಲ್ಲಪಳ್ಳಿ ರುದ್ರಭೂಮಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ದಿನಕರನ್​ ಅವರು ಕಾನೂನು ಹೋರಾಟದ ಮೂಲಕ ಡಿಜಿಪಿ ಹುದ್ದೆ ಗಿಟ್ಟಿಸಿಕೊಂಡಿದ್ದರು. ವೀರಪ್ಪನ್​ನಿಂದ ಡಾ.ರಾಜ್​ಕುಮಾರ್ ಅಪಹರಣ ಸಂಬಂಧ ಕುರಿತು ಪುಸ್ತಕ ಬರೆದಿದ್ದ ಅವರು, ಡಾ. ರಾಜ್ ಬಿಡುಗಡೆ ವಿಷಯದಲ್ಲಿ ಸರ್ಕಾರದ ಪಾತ್ರ ಏನಾಗಿತ್ತು ಎಂಬುದನ್ನು ವಿವರಿಸಿದ್ದರು. ಪುಸ್ತಕ ವಿವಾದಕ್ಕೂ ಕಾರಣವಾಗಿತ್ತು.