More

    ಚೀನಿ ಮೊಬೈಲ್​ಗೆ ನಿರ್ಬಂಧ?; ಅಗ್ಗದ ಸ್ಮಾರ್ಟ್​ಫೋನ್ ಮಾರಾಟ ನಿಯಂತ್ರಣಕ್ಕೆ ಕೇಂದ್ರ ಪ್ಲ್ಯಾನ್​

    ನವದೆಹಲಿ: ಹನ್ನೆರಡು ಸಾವಿರ ರೂ. ಗಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಚೀನಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಈ ಕ್ರಮ ಜಾರಿಯಾದರೆ ಷಿಯೋಮಿ, ಒಪ್ಪೊ, ರಿಯಲ್ ಮಿ ಸೇರಿ ಚೀನಾದ ಪ್ರಮುಖ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ ಎಂದು ಬ್ಲೂಮ್​ಗ್ ವರದಿ ತಿಳಿಸಿದೆ. ಈ ಕ್ರಮವು ಹೆಚ್ಚು ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುವ ಆಪಲ್ ಮತ್ತು ಸ್ಯಾಮಸಂಗ್ ಎಲೆಕ್ಟ್ರಾನಿಕ್ ಕಂಪನಿಗಳಿಗೆ ಅನ್ವಯಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಿಂದ ಚೀನಾದ ದೈತ್ಯ ಮೊಬೈಲ್ ಕಂಪನಿಗಳನ್ನು ಹೊರಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.

    ಭಾರತದಲ್ಲಿ ಹೆಚ್ಚು ಲಾಭ: ಕೋವಿಡ್ ಲಾಕ್​ಡೌನ್ ನಿಯಮಗಳಿಂದಾಗಿ ಚೀನಾದ ಮೊಬೈಲ್ ಕಂಪನಿಗಳು ತಮ್ಮ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ವ್ಯವಹಾರ ನಡೆಸಲು ಸಾಧ್ಯವಾಗದೆ ನಷ್ಟಕ್ಕೀಡಾಗಿದ್ದವು. ಆದರೆ, ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದ್ದು, ಅತ್ಯಧಿಕ ಲಾಭ ಮಾಡಿಕೊಂಡಿವೆ. 2022ರ ಮೊದಲ ತ್ರೖೆಮಾಸಿಕದಲ್ಲಿ, 12 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಮಾರಾಟವಾಗಿವೆ. ಚೀನಾದ ಕಂಪನಿಗಳು ಭಾರತದಲ್ಲಿ ಶೇ.80 ಮೊಬೈಲ್ ಪೂರೈಕೆ ಮಾಡುತ್ತಿವೆ. ಚೀನಾ ಕಂಪನಿಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಯಾವುದಾದರೂ ನೀತಿಯನ್ನು ಘೋಷಿಸಲಿದೆಯೇ ಅಥವಾ ಚೀನಾದ ಕಂಪನಿಗಳಿಗೆ ತನ್ನ ಆದ್ಯತೆ ತಿಳಿಸಲು ಅನೌಪಚಾರಿಕ ಮಾರ್ಗಗಳನ್ನು ಬಳಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಮಾರಾಟ ಕುಸಿತ ನಿರೀಕ್ಷೆ: ಭಾರತವು ಚೀನಾ ನಿರ್ವಿುತ 12 ಸಾವಿರ ರೂ.ಕೆಳಗಿನ ಮೊಬೈಲ್ ಫೋನ್​ಗಳಿಗೆ ನಿಷೇಧ ಹೇರಿದರೆ ಷಿಯೋಮಿ ಕಂಪನಿಯ ಸ್ಮಾರ್ಟ್​ಫೋನ್ ಮಾರಾಟ ವರ್ಷಕ್ಕೆ ಶೇ.11-14 ಕಡಿಮೆಯಾಗಬಹುದು. ಪ್ರಮುಖ ಸಾಗರೋತ್ತರ ಮಾರುಕಟ್ಟೆಯಾಗಿ ರುವ ಭಾರತದಲ್ಲಿ ಷಿಯೋಮಿಯು ಶೇ.25ರಷ್ಟು ಪಾಲನ್ನು ಹೊಂದಿದೆ.

    ಕೇಂದ್ರದಿಂದ ಹೆಚ್ಚಿನ ನಿಗಾ: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಪ್ರಮುಖ ಮೊಬೈಲ್ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಹೆಚ್ಚಿನ ನಿಗಾ ವಹಿಸಿದೆ. ಷಿಯೋಮಿ, ಒಪ್ಪೊ ಮತ್ತು ವಿವೊ ಕಂಪನಿಗಳು ತೆರಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದು, ಜಾರಿ ನಿರ್ದೇಶನಾಲಯದ ಪರಿಶೀಲನೆಗೆ ಒಳಪಟ್ಟಿವೆ. ಕೇಂದ್ರ ಸರ್ಕಾರ ಈ ಹಿಂದೆ ಹುವಾವೇ ಟೆಕ್ನಾಲಜಿಸ್ ಲಿಮಿಟೆಡ್ ಮತ್ತು ಝೆಡ್​ಟಿಇ ಕಾರ್ಪ್ ಟೆಲಿಕಾಂ ಎಕ್ವಿಪ್​ವೆುಂಟ್ ಕಂಪನಿಗಳನ್ನು ನಿಷೇಧಿಸಲು ಅನಧಿಕೃತ ವಿಧಾನ ಬಳಸಿತ್ತು. ಚೀನಾ ಕಂಪನಿಗಳ ಅಗ್ಗದ ಹಾಗೂ ಹೆಚ್ಚು ಫೀಚರ್ ಹೊಂದಿರುವ ಮೊಬೈಲ್​ಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರ ಇತರ ಕಂಪನಿಗಳ ಮೊಬೈಲ್​ಗಳ ಮಾರಾಟ ಕುಂಠಿತಗೊಂಡಿದೆ. ಹೀಗಾಗಿ ದೇಶೀಯ ಮೊಬೈಲ್ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts