ನೀವು ‘ಕರೊನಾ ರೆಡ್​ ಝೋನ್​’ನಲ್ಲಿದ್ರೆ ಇದನ್ನೊಮ್ಮೆ ಓದಿಕೊಂಡು ಬಿಡಿ; ಕೇಂದ್ರದ ಖಡಕ್​ ನಿಯಮಗಳು ಇವು..ಮೀರೋ ಹಾಗಿಲ್ಲ..!

blank

ನವದೆಹಲಿ: ಕರೊನಾ ವೈರಸ್ ದಾಂಗುಡಿಯಿಂದ ಈಗಾಗಲೇ ಎರಡು ಹಂತಗಳ ಲಾಕ್​ಡೌನ್​ ಕಂಡಿರುವ ದೇಶದಲ್ಲಿ ಆರ್ಥಿಕ ಚಟುವಟಿಕೆ ಪೂರ್ತಿ ಕುಸಿದಿದೆ. ಈಗ ಮೂರನೇ ಹಂತಕ್ಕೆ, ಅಂದರೆ ಮೇ 17ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆಯಾಗಿದೆ.

ಕರೊನಾ ವೈರಸ್​ಗೆ ಸಂಬಂಧಪಟ್ಟಂತೆ ದೇಶವನ್ನು ಮೂರು ವಲಯಗಳನ್ನಾಗಿ ವಿಭಜಿಸಲಾಗಿದ್ದು ಹಸಿರು ವಲಯದಲ್ಲಿ ಲಾಕ್​ಡೌನ್​ ಸಡಿಲಿಕೆಗೆ ಕೇಂದ್ರ ಅವಕಾಶ ಕೊಟ್ಟಿದೆ. ಅದೂ ಕೆಲವು ಷರತ್ತುಗಳು ಅನ್ವಯ ಆಗುತ್ತವೆ ಮತ್ತು ಕಡ್ಡಾಯವಾಗಿ ಸಾಮಾಜಿಕ ಅಂತರ, ಸುರಕ್ಷತಾ ಕ್ರಮಗಳ ಪಾಲನೆ ಆಗಬೇಕು ಎಂದಿದೆ. ಆಯಾ ಜಿಲ್ಲೆಗಳ, ಸ್ಥಳೀಯ ಆಡಳಿತಕ್ಕೆ ಜವಾಬ್ದಾರಿ ವಹಿಸಿಕೊಡಲಾಗಿದೆ.

ಆದರೆ ಕರೊನಾ ಸೋಂಕು ಹೆಚ್ಚಾಗಿ ಕಂಡುಬಂದಿರುವ ರೆಡ್​ ಝೋನ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕಡ್ಡಾಯ. ದೇಶಾದ್ಯಂತ ವಿಧಿಸಿರುವ ನಿರ್ಬಂಧದ ಜತೆಗೆ ಇನ್ನೂ ಕೆಲವು ಹೆಚ್ಚುವರಿ ನಿಷೇಧಗಳು ಇಲ್ಲಿರುತ್ತವೆ.
ಹಾಟ್​ಸ್ಫಾಟ್ ಎನಿಸಿಕೊಂಡಿರುವ ಪ್ರದೇಶಗಳಲ್ಲಿ ಸೈಕಲ್​ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್​ಗಳ ಚಾಲನೆ ಮಾಡುವಂತಿಲ್ಲ. ಹಾಗೇ ಬಸ್​ ಸಂಚಾರವೂ ಇರುವುದಿಲ್ಲ. ಕೌರಿಕ ಅಂಗಡಿಗಳು, ಸಲೂನ್​ಗಳು, ಸ್ಪಾಗಳು ತೆರೆಯುವಂತಿಲ್ಲ.

ಕಾರಿನಲ್ಲಿ ಮೂರೇ ಜನರಿಗೆ ಅವಕಾಶ: ಇನ್ನು ಈ ರೆಡ್​ ಝೋನ್​ಗಳಲ್ಲಿ ಕೆಲವು ಚಟುವಟಿಕೆಗಳಿಗೆ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ. ಪಾಸ್​ ಹೊಂದಿರುವವರು, ಅನುಮತಿ ಪಡೆದವರು ಸಂಚಾರ ಮಾಡಬಹುದು. ಅದರಲ್ಲೂ ಕಾರು ಸೇರಿ ನಾಲ್ಕು ಚಕ್ರದ ವಾಹನಗಳಲ್ಲಿ ಡ್ರೈವರ್​ ಹೊರತು ಪಡಿಸಿ, ಇನ್ನಿಬ್ಬರು (ಒಟ್ಟು ಮೂವರು) ಮಾತ್ರ ಪ್ರಯಾಣ ಮಾಡಬಹುದು. ಬೈಕ್​ನಲ್ಲಿ ಇಬ್ಬರು ಸಂಚಾರ ಮಾಡುವಂತಿಲ್ಲ.

ಆರ್ಥಿಕ ಚಟುವಟಿಕೆ ಪ್ರಾರಂಭ, ನಿಯಮ ಪಾಲನೆ ಕಡ್ಡಾಯ: ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಉದ್ಯಮಗಳು, ವಿಶೇಷ ಆರ್ಥಿಕ ವಲಯಗಳು, ರಫ್ತು ಆಧಾರಿತ ಘಟಕಗಳು, ಇಂಡಸ್ಟ್ರಿಯಲ್​ ಎಸ್ಟೇಟ್​ಗಳು ಕಾರ್ಯ ಆರಂಭ ಮಾಡಬಹುದು. ಆದರೆ ಇಲ್ಲಿ ನಿಯಮಗಳ ಪಾಲನೆ ಕಡ್ಡಾಯ. ಕಾರ್ಮಿಕರು ಸೇರಿ ಹೊರಗಿನವರ ಪ್ರವೇಶದಲ್ಲಿ ನಿಯಂತ್ರಣ ಇರಬೇಕು.

ಹಾಗೇ, ನಗರ ಪ್ರದೇಶಗಳಲ್ಲಿರುವ ಅಗತ್ಯ ವಸ್ತುಗಳ ತಯಾರಿಕಾ ಕಾರ್ಖಾನೆಗಳು ಕೆಲಸ ಶುರು ಮಾಡಬಹುದು. ಔಷಧ, ವೈದ್ಯಕೀಯ ಸಾಧನಗಳು, ಅವುಗಳ ಕಚ್ಚಾ ವಸ್ತು ಪೂರೈಕೆ ಉದ್ಯಮಗಳು, ಹಾಗೇ ಉತ್ಪಾದನಾ ಘಟಕಗಳು, ಐಟಿ ಹಾರ್ಡ್​ವೇರ್​ ತಯಾರಿಕಾ ಘಟಕಗಳು, ಸೆಣಬು ಕಾರ್ಖಾನೆಗಳನ್ನೂ ತೆರೆಯಲು ಅವಕಾಶ ಇದೆ.
ಇಲ್ಲಿ ಕೆಲಸಗಾರರು ಒಂದೇ ಬಾರಿ ಎಲ್ಲರೂ ಬರುವಂತಿಲ್ಲ. ಸ್ವಲ್ಪ ಜನರ ಶಿಫ್ಟ್ ಮಾಡಬೇಕು. ಸಾಮಾಜಿಕ ಅಂತರ ಪಾಲನೆಯ ನಿಯಮ ಕಡ್ಡಾಯವಾಗಿ ಪಾಲನೆ ಆಗಬೇಕು.

ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳನ್ನೂ ಶುರು ಮಾಡಬಹುದು. ಆದರೆ ಹೊರಗಿನಿಂದ ಯಾವುದೇ ಕೆಲಸಗಾರರನ್ನು ಕರೆತರುವಂತಿಲ್ಲ. ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನೇ ತೊಡಗಿಸಿಕೊಳ್ಳಬೇಕು. ಉಳಿದಂತೆ ಅಗತ್ಯವಿಲ್ಲದ ವಸ್ತುಗಳ ಅಂಗಡಿಗಳು ತೆರೆಯುವಂತಿಲ್ಲ. ಮಾಲ್​ಗಳು, ಮಾರ್ಕೆಟ್​ಗಳು, ಮಾರುಕಟ್ಟೆ ಸಂಕೀರ್ಣಗಳಿಗೆ ಅವಕಾಶವಿಲ್ಲ.

ನಗರ ಪ್ರದೇಶಗಳ ಕಾಲನಿಗಳಲ್ಲಿ ಇರುವ, ಅಗತ್ಯ ವಸ್ತುಗಳ, ಅನಿವಾರ್ಯವಲ್ಲ ವಸ್ತುಗಳ ಮತ್ತು ಇ-ಕಾಮರ್ಸ್​ಗೆ ಸಂಬಂಧಪಟ್ಟ ಚಿಕ್ಕಪುಟ್ಟ ಅಂಗಡಿಗಳು, ವಸತಿ ಸಂಕೀರ್ಣದ ಒಳಗೆ ಇರುವ ಶಾಪ್​ಗಳನ್ನು ತೆರೆಯಬಹುದು.

ಇನ್ನುಳಿದ ಹಸಿರು ಮತ್ತು ಆರೆಂಜ್​ ವಲಯಗಳಲ್ಲಿ ಸಡಿಲಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ಸಂಬಂಧಪಟ್ಟ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ. ಶೀಘ್ರವೇ ಅದನ್ನೂ ಬಿಡುಗಡೆ ಮಾಡುವುದಾಗಿ ತಿಳಿಸಿದೆ.  (ಏಜೆನ್ಸೀಸ್​)

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…