More

  ದೇವರ ಸ್ಮರಣೆಯಿಂದ ನೆಮ್ಮದಿ ಜೀವನ

  ವಿಜಯವಾಣಿ ಸುದ್ದಿಜಾಲ ನಂದಗುಡಿ
  ಆಧ್ಯಾತ್ಮಿಕ ದಾರಿಯಲ್ಲಿ ನಡೆದರೆ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಟಿ.ಎಸ್.ರಾಜಶೇಖರ್ ಹೇಳಿದರು.
  ಹೋಬಳಿಯ ತಾವರೆಕೆರೆ ಗ್ರಾಪಂನ ಕಾಳಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
  ದೇವರ ಸ್ಮರಣೆಯಿಂದ ಮಾತ್ರ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಆಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಚಂಚಲವಾಗಿದ್ದು, ಏಕಗ್ರತೆಯಿಂದ ಎಲ್ಲರೂ ದೈವಭಕ್ತಿ ಅನುಸರಿಸಬೇಕು ಎಂದರು.
  ತಾವರೆಕೆರೆ ಗ್ರಾಪಂ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಯಾವುದೇ ಕ್ಷೇತ್ರಗಳಲ್ಲಿದ್ದರೂ ದೈವಾನುಗ್ರಹ ಪಡೆಯಲೇಬೇಕು. ಹುಟ್ಟು, ಸಾವಿನ ಮಧ್ಯೆ ಜೀವನದಲ್ಲಿ ಮಾಡುವ ಸತ್ಕಾರ್ಯಗಳೇ ಸ್ವರ್ಗಕ್ಕೆ ದಾರಿ. ಇದನ್ನು ಪ್ರತಿಯೊಬ್ಬರೂ ಅರಿತು ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts