More

    ಮನೆಯಲ್ಲೇ ಮಾಡಿ ರೆಸ್ಟೋರೆಂಟ್​ ಶೈಲಿಯ ಪನ್ನೀರ್​ ಟಿಕ್ಕಾ; ತಿಂದರೆ ಒನ್​ ಮೋರ್​ ಒನ್​ ಮೋರ್​ ಅಂತಿರಾ!

    Easy Paneer Tikka Recipe | Restaurant Style | Easy & Quick Instant Food Recipe

    ಬೇಕಾಗುವ ಪದಾರ್ಥಗಳು

    ಪನ್ನೀರು – 200 ಗ್ರಾಂ
    ಮೊಸರು – 1/2 ಕಪ್​
    ಶುಂಠಿಬೆಳುಳ್ಳಿ ಪೇಸ್ಟ್​ – 1ಚಮಚ
    ಅಚ್ಚಖಾರದ ಪುಡಿ – 2 ಚಮಚ
    ಅರಿಶಿನ – 1/2 ಚಮಚ
    ಗರಂ ಮಸಾಲ – 1/2 ಚಮಚ
    ಜೀರಿಗೆ ಪುಡಿ -1/2 ಚಮಚ
    ಚಾಟ್​ ಮಸಾಲ – 1/2 ಚಮಚ
    ಪೆಪ್ಪರ್​ – 1/2 ಚಮಚ
    ನಿಂಬೆಹಣ್ಣಿನ ರಸ – 1 ಚಮಚ
    ಕಸ್ತೂರಿ ಮೆಂತ್ಯೆ – 1/2 ಚಮಚ
    ಕಡ್ಲೆಹಿಟ್ಟು – 1 ಚಮಚ
    ಉಪ್ಪು ರುಚಿಗೆ ತಕ್ಕಷ್ಟು

    ಇದನ್ನೂ ಓದಿ: ಬಾಯಿ ಕೆಟ್ಟು ರುಚಿ ಇಲ್ಲದಂತಾದಾಗ ಈ ರೆಸಿಪಿ ಮಾಡಿ ನೋಡಿ! ಒಂದು ತುತ್ತು ಹೆಚ್ಚಿಗೆ ಊಟ ಮಾಡ್ತೀರಾ

    ಮಾಡುವ ವಿಧಾನ: ಮೊದಲಿಗೆ ಒಂದು ಸಣ್ಣ ತಪ್ಪಲೆಗೆ ಅರ್ಧ ಕಪ್​ ಮೊಸರು, ಶುಂಠಿ ಬೆಳುಳ್ಳಿ ಪೇಸ್ಟ್​, ಖಾರದ ಪುಡಿ, ಅರಿಶಿನ, ಗರಂ ಮಸಾಲ, ಜೀರಿಗೆ ಪುಡಿ, ಚಾಟ್​ ಮಸಾಲ, ಪೆಪ್ಪರ್, ​ನಿಂಬೆಹಣ್ಣಿನ ರಸ, ಕಸ್ತೂರಿ ಮೆಂತ್ಯೆ, ಕಡ್ಲೆಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದೆಡೆ ಪನ್ನಿರನ್ನು ತುಂಡು ತುಂಡಾಗಿ ಚೌಕಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ತದನಂತರ ಈ ಮೇಲಿನ ಮಸಾಲೆ ಮಿಶ್ರಣಕ್ಕೆ ತುಂಡು ಮಾಡಿಟ್ಟುಕೊಂಡಿರುವ ಪನ್ನೀರನ್ನು ಹಾಕಿ ಸರಿಯಾಗಿ ಕಲಸಿ. ಪನ್ನೀರ್​ ಮಸಾಲೆಯೊಂದಿಗೆ ಸರಿಯಾಗಿ ಮಿಕ್ಸ್​ ಆಗಬೇಕು. ಹೀಗೆ ಮಾಡಿದ ನಂತರ ಆ ತಪ್ಪಲೆಯನ್ನು ಒಂದು ಮುಚ್ಚಳ ಅಥವಾ ತಟ್ಟೆಯಿಂದ ಮುಚ್ಚಿಡಿ. ಹೀಗೆ 10 ರಿಂದ 15 ನಿಮಿಷಗಳ ಕಾಲ ಮುಚ್ಚಿಡಬೇಕು. ತದನಂತರ ಗ್ಯಾಸಿನ ಮೇಲೆ ದೋಸೆ ಕಾವಲಿಯನ್ನು ಇಟ್ಟು ಬಿಸಿ ಮಾಡಿಕೊಳ್ಳಿ. ಅದಕ್ಕೆ ಎಣ್ಣೆ ಸವರಿ ಈ ಪನ್ನೀರ್​ ತುಂಡುಗಳನ್ನು ಒಂದೊದಾಗಿ ಇಡಿ. ಪನ್ನೀರನ್ನು ಎರಡೂ ಬದಿಗಳಲ್ಲಿ ಬೇಯುವ ಹಾಗೆ ದೋಸೆಯಂತೆ ಒಮ್ಮೆ ಮಗಚಿ ಹಾಕಿ. ಹೀಗೆ ಮಾಡುವುದರಿಂದ ಪನ್ನೀರ್​ ಚೆನ್ನಾಗಿ ಫ್ರೈ ಆಗಿ ಟಿಕ್ಕಾ ರೆಡಿಯಾಗುತ್ತೆ. ಫ್ರೈ ಆದ ಪನ್ನೀರ್​ ಟಿಕ್ಕಾವನ್ನು ಟೊಮ್ಯಾಟೋ ಕೆಚಪ್​ ಅಥವಾ ಮಯೋನಿಸ್​ ಜತೆ ಬೆರೆಸಿ ತಿನ್ನುತ್ತಾ ಇದ್ರೆ ಖಂಡಿತಾ ನೀವು ಒನ್​ ಮೋರ್​ ಒನ್​ ಮೋರ್​ ಅಂತಿರಾ…

    ಸರಳ ಟಿಪ್ಸ್​: ಈ ಟಿಕ್ಕಾ ಮಾಡುವಾಗ ನಿಮ್ಮ ಬಳಿ ಈ ಮೇಲೆ ಹೇಳಿರುವ ಕಸ್ತೂರಿ ಮೆಂತ್ಯೆ, ಚಾಟ್​ ಮಸಾಲ, ಕಡ್ಲೆಹಿಟ್ಟು ಇಲ್ಲದಿದ್ದರೂ ಕೇವಲ ಉಳಿದ ಪದಾರ್ಥಗಳನ್ನೇ ಬಳಸಿ ಮಾಡಬಹುದು. ಒಂದು ವೇಳೆ ದೋಸೆ ಕಾವಲಿಯಲ್ಲಿ ಮಾಡಲು ಇಷ್ಟವಿಲ್ಲವಾದಲ್ಲಿ ಸ್ಟಿಕ್​ಗೆ ಪನ್ನೀರ್​ ತುಂಡುಗಳನ್ನು ಹಾಕಿ ಗ್ರಿಲ್​ ಮಾಡಿಕೊಳ್ಳಬಹುದು. ಪನ್ನೀರ್​ ಜತೆ ಸ್ವಲ್ಪ ಈರುಳ್ಳಿ ಹಾಗೂ ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬೆರೆಸಿದರೆ ಬಹಳ ರುಚಿಯಾಗಿರುತ್ತದೆ.

    ನಿಮ್ಮ ಮನೆಯಲ್ಲಿ ತರಕಾರಿ ಖಾಲಿಯಾಗಿದ್ರೆ ದಿಢೀರೆಂದು ಮಾಡಿ ಈ ‘ಫಟಾಫಟ್​ ರೈಸ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts