ಬಿಜೆಪಿ ಆಡಳಿತಕ್ಕೆ ಜನರಿಂದ ಸಿಕ್ಕ ಮನ್ನಣೆ

blank

ಮೂಡಿಗೆರೆ: ಬಿಜೆಪಿ ಆಡಳಿತದಲ್ಲಿ ದೇಶ ಬಲಿಷ್ಠವಾಗಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ದುರಾಡಳಿತ ಹಾಗೂ 70 ವರ್ಷ ದೇಶಶವನ್ನು ಆಳಿದ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕೃರಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ರಘು ಹೇಳಿದರು.
ದೆಹಲಿಯಲ್ಲಿ ಬಿಜೆಪಿ ಗೆಲುವಿನ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಲು ಕಾಂಗ್ರೆಸ್ ಸೋಲಿನ ಭಯದಿಂದ ಹಿಂದೇಟು ಹಾಕುತ್ತಿದೆ. ನ್ಯಾಯಾಲಯದ ನಿರ್ದೇಶನದಂತೆ ಜಿಪಂ, ತಾಪಂ ಚುನಾವಣೆ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆ ನಡೆದರೆ ಬಿಜೆಪಿ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ತಿಳಿಸಿದರು.
ಪಪಂ ಸದಸ್ಯೆ ಕಮಲಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಮುಖಂಡರಾದ ಪರೀಕ್ಷಿತ್ ಜಾವಳಿ, ಕೊಣಗೆರೆ ಸುಂದರೇಶ್, ಪ್ರಶಾಂತ್, ಶಶಿ, ರಂಗನಾಥ್, ಸುನಿಲ್, ಸಾಗರ್, ಮೋಹನ್,ಶ್ರೀಜಿತ್, ಪದ್ಮಣ್ಣ, ರಾಕೇಶ್ ಇತರರಿದ್ದರು.

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…