ಶಿವಮೊಗ್ಗ: ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಭಾವಿಸುವ ನಾವು ಸಂಸ್ಕೃತವನ್ನು ಪ್ರೀತಿಸಿ ಹಿಂದಿಯನ್ನು ದ್ವೇಷಿಸುವುದು ಸರಿಯಲ್ಲ. ಭಾಷೆಗೆ ತಾಯಿಯ ಸ್ಥಾನ ನೀಡುವುದಾದರೆ, ನಮ್ಮ ತಾಯಿಯನ್ನು ಪ್ರೀತಿಸಿ ಬೇರೆಯವರ ತಾಯಿಯನ್ನೂ ಗೌರವಿಸಬೇಕು ಎಂದು ಪಿಇಎಸ್ ಪಬ್ಲಿಕ್ ಶಾಲೆಯ ಹಿಂದಿ ಶಿಕ್ಷಕಿ ಅನಿತಾ ಹೇಳಿದರು.
ಹಿಂದಿ ಭಾಷೆ ದಿನಾಚರಣೆ ಅಂಗವಾಗಿ ಶನಿವಾರ ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಲ್ಲೇ ಅತಿ ಹೆಚ್ಚು ಮಾತನಾಡಲಾಗುವ ಭಾಷೆಗಳ ಪೈಕಿ ಹಿಂದಿಗೆ ಮೂರನೇ ಸ್ಥಾನವಿದೆ. ಹಿಂದಿ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಭಾಷೆಯು ಹರಿಯುವ ನೀರಿನಂತೆ ಪರಿಶುದ್ಧವಾಗಿರಲು ಎಲ್ಲ ಭಾಷೆಗಳನ್ನು ಗೌರವಿಸಬೇಕು. ಮುಂದಿನ ಪೀಳಿಗೆಗೆ ಭಾಷೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಶಾಲೆಯ ಉಪ ಪ್ರಾಚಾರ್ಯ ಶಂಕರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.