RESOURCESAT-2A ಉಪಗ್ರಹ ಯಶಸ್ವಿ ಉಡಾವಣೆ

czdgng5w8aiwteu czdgng7xeaa3ry8

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಾಣದ ಪೊಲಾರ್ ಉಪಗ್ರಹ ಉಡಾವಣೆ ರಾಕೆಟ್ (ಪಿಎಸ್ಎಲ್ವಿ – ಸಿ36) ಬುಧವಾರ ಬೆಳಗ್ಗೆ ಶ್ರೀಹರಿಕೋಟಾದಿಂದ 10.25ರ ಸುಮಾರಿಗೆ ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿದೆ. 1235 ಕಿಲೋಗ್ರಾಂ ತೂಕದ ದೂರಸಂವೇದಿ ಕಾರ್ಯನಿರ್ವಹಣೆಯ RESOURCESAT-2A ಉಪಗ್ರಹವನ್ನು ಪಿಎಸ್ಎಲ್ವಿ – ಸಿ36 ಹೊತ್ತೊಯ್ದಿದೆ.

ಪಿಎಸ್ಎಲ್ವಿ ಸರಣಿಯ 38ನೇ ಯಶಸ್ವಿ ಉಡಾವಣೆ ಇದಾಗಿದ್ದು, ಇಸ್ರೋ ಈ ಮೂಲಕ ಇನ್ನೊಂದು ಯಶಸ್ವಿ ಹೆಜ್ಜೆಯನ್ನು ಇಟ್ಟಿರುವುದು ಗಮನಾರ್ಹ. ದೂರಸಂವೇದಿ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸುವ ಉಪಗ್ರಹ ಇದಾಗಿದೆ ಎಂದು ಇಸ್ರೋ ತಿಳಿಸಿದೆ. ಇಸ್ರೋ ಈ ಮೊದಲು 2003ರಲ್ಲಿ ಮತ್ತು 2011ರಲ್ಲಿ ಎರಡು ದೂರಸಂವೇದಿ ಉಪಗ್ರಹವನ್ನು ಉಡಾವಣೆ ಮಾಡಿದ್ದು, ಇದೀಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ RESOURCESAT-2A ಉಪಗ್ರಹವನ್ನು ಉಡಾವಣೆ ಮಾಡಿದೆ.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *