ಮುಂದೆ ಬೇಕಾಗಬಹುದು ಎಂದು ರೆಸಾರ್ಟ್​ಗೆ ಹೋಗಿದ್ದೆ: ಶಾಸಕ ಸತೀಶ್​ ಜಾರಕಿಹೊಳಿ

ಬೆಳಗಾವಿ: ನಾನು ನಿನ್ನೆ ರೆಸಾರ್ಟ್​ಗೆ ಹೋಗಿಬಂದಿದ್ದು ನಿಜ. ಮುಂಜಾಗ್ರತೆಯಿಂದ ಹೋಗಿದ್ದೆ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

ನಿನ್ನೆ ರೆಸಾರ್ಟ್​ಗೆ ಭೇಟಿ ನೀಡಿದ್ದ ಸತೀಶ್​ ಜಾರಕಿಹೊಳಿ ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿ, ಖಾನಾಪುರ ಬಳಿಯ ಕಣಕುಂಬಿ ಕಾರ್ಯಕರ್ತನ ಮದುವೆಗೆ ಹೋಗಿದ್ದಾಗ ಸಮೀಪವೇ ಇರುವ ಸಾತೇವಾರಿ ರೆಸಾರ್ಟ್​ಗೆ ಭೇಟಿ ನೀಡಿದ್ದೆ. ಮುಂದೆ ಶಾಸಕರನ್ನು ಕರೆದುಕೊಂಡು ಹೋಗಲು ಬೇಕಾಗಬಹುದು ಎಂದು ಭೇಟಿ ನೀಡಿದ್ದೆ ಎಂದಿದ್ದಾರೆ.

ಜಾರಕಿಹೊಳಿಯ ಹೇಳಿಕೆ ಸಾರ್ವಜನಿಕ ಹಾಗೂ ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.