ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್ ರಾಜೀನಾಮೆ

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ ಗವರ್ನರ್​ ಊರ್ಜಿತ್​ ಪಟೇಲ್​ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.

ವೈಯಕ್ತಿಕ ಕಾರಣಗಳಿಂದ ನಾನು ನನ್ನ ವೃತ್ತಿಯಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದೇನೆ. ಹಲವು ವರ್ಷಗಳ ಕಾಲ ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದ್ದು ನನ್ನ ಭಾಗ್ಯ, ಗೌರವದಿಂದ ನನ್ನ ಕಾರ್ಯವನ್ನು ನಿಭಾಯಿಸಿದ್ದೇನೆ ಎಂದು ಊರ್ಜಿತ್​ ಪಟೇಲ್​ ತಿಳಿಸಿದರು.

ಆರ್​ಬಿಐನ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೆಂಬಲ ಹಾಗೂ ಪರಿಶ್ರಮದಿಂದ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್​ ಗಣನೀಯ ಸಾಧನೆ ಮಾಡಿದೆ. ನನ್ನ ರಾಜೀನಾಮೆ ಜತೆಗೆ ನನ್ನ ಸಹೋದ್ಯೋಗಿಗಳು ಹಾಗೂ ಆರ್​ಬಿಐನ ಸೆಂಟ್ರಲ್ ಬೋರ್ಡ್ ನಿರ್ದೇಶಕರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಆರ್​ಬಿಐ ಮುಖ್ಯಸ್ಥ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ ಸಾಧ್ಯತೆ