ಅಭಿವೃದ್ಧಿಗೆ ಮೀಸಲಾತಿ ಅಗತ್ಯ

ಮುಧೋಳ: ಸರ್ವ ಮತಗಳ ಜನರ ಓರೆಕೋರೆ ತಿದ್ದುವ ಜಂಗಮ ಸಮಾಜ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ನ್ಯಾಯ ಸಮ್ಮತ ಬೇಡಿಕೆ ತ್ವರಿತವಾಗಿ ಈಡೇರಲಿ ಎಂದು ನಗರದ ವಿರಕ್ತಮಠ ನಿಜಗುಣಿದೇವರು ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಾಲೂಕು ವೀರಶೈವ ಜಂಗಮ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿಗೆ ಜಾತಿ ಗುರು, ಹದಿನೆಂಟು ಜಾತಿಗೆ ಜಂಗಮ ಗುರುವಾಗಿ ವೀರಶೈವ ಸಮಾಜದ ಧಾರ್ವಿುಕ ಕಾರ್ಯಗಳನ್ನು ಮಾಡುತ್ತ ಧಾರ್ವಿುಕ ಭಿಕ್ಷುಕರಾಗಿ ಸಮಾಜದ ಒಳಿತಿಗಾಗಿ ಬಾಳುವ ಸಾಧು ಜೀವಿ ಈ ಜಂಗಮ. ಬೇಡುತ್ತ ಜೀವನ ಸಾಗಿಸುವುದರಿಂದ ಜಂಗಮರಿಗೆ ಬೇಡ-ಜಂಗಮ ಎಂದಾಗಿದೆ. ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಂಗಮ ಸಮಾಜಕ್ಕೆ ಸರ್ಕಾರ ಇತರರಿಗೆ ನಾವು ಪರಿಶಿಷ್ಟ ಜಾತಿ ಪಟ್ಟಿ 19ರಲ್ಲಿ ಇರುವಂತೆ ಸೌಲಭ್ಯ ನೀಡಬೇಕು ಎಂದು ಹೇಳಿದರು.

ಅಖಿಲ ಕರ್ನಾಟಕ ಬೇಡ-ಜಂಗಮ ಸಮಾಜದ ಅಧ್ಯಕ್ಷ ವೀರೇಂದ್ರ ಪಾಟೀಲ ಮಾತನಾಡಿ, ಸಮಾಜದ ಎಲ್ಲ ಬಾಂಧವರು ಒಗ್ಗಟ್ಟಿನಿಂದ ಹೋರಾಡಿದರೆ ಸೌಲಭ್ಯ ಪಡೆಯಬಹುದು ಎಂದರು.

ಗೌರವಾಧ್ಯಕ್ಷ ಸಿದ್ದಲಿಂಗಯ್ಯ ಕಂಬಿ ಮಾತನಾಡಿದರು. ಮಲ್ಲಿಕಾರ್ಜುನ ಹಿರೇಮಠ, ರಾಜ್ಯಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಿ.ಎಚ್. ಹಂಚನಾಳ, ಜಿಪಂ ಸದಸ್ಯೆ ಕವಿತಾ ತಿಮ್ಮಾಪುರ, ನಗರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು.

ಬಿ.ಸಿ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕಸಬಾ ಜಂಬಗಿಯ ಹಿರೇಮಠದ ರಾಜಶೇಖರ ದೇವರು, ಲೋಕಾಪುರದ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಬರಗಿ ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ, ಎಂ.ಎಂ. ವಿರಕ್ತಮಠ, ರಮೇಶ ಪಂಚಕಟ್ಟಿಮಠ, ಆರ್.ಕೆ. ಮಠದ, ಲೋಕೇಶ ಪೂಜಾರಿ, ಮಹಾಂತೇಶ ಹಿಟ್ಟಿನಮಠ. ಎಂ.ಜೆ. ಮನ್ನಯ್ಯನವರಮಠ, ಸಾತವೀರಯ್ಯ ಮನ್ನಯ್ಯನವರಮಠ, ಮಡಿವಾಳಯ್ಯ ಕಂಬಿ, ಚಂದ್ರಶೇಖರ ಗಣಾಚಾರಿ, ಶಿವಮೂರ್ತಯ್ಯ ಸೈದಾಪುರಮಠ, ಪುಟ್ಟು ಗಣಾಚಾರಿ, ರುದ್ರಯ್ಯ ಮಠದ, ಪ್ರಭು ಹಿರೇಮಠ, ವಿ.ಆರ್. ಕೋಣೂರಮಠ, ಶಿವಯ್ಯ ವಸ್ತ್ರದ, ಕುಮಾರ ಮಠದ, ಬಸವರಾಜ ಉಮಚಗಿಮಠ, ಅಲ್ಲಯ್ಯ ದೇವರಮನಿ ಇತರರಿದ್ದರು. ಮಲ್ಲಿಕಾರ್ಜನ ಗೋವಿಂದಪುರಮಠ ಸ್ವಾಗತಿಸಿ ದರು. ಜಿ.ಎಚ್. ಹಂಚನಾಳ ನಿರೂಪಿಸಿದರು. ಐ.ಸಿ. ಮಠಪತಿ ವಂದಿಸಿದರು.