More

    ಒಳಮೀಸಲಾತಿಗೆ ಕಾಂಗ್ರೆಸ್ ನಿರ್ಲಕ್ಷ್ಯ- ಗೋವಿಂದ ಕಾರಜೋಳ

    ಸಂಡೂರು: ಒಳ ಮೀಸಲಾತಿ ಹೆಚ್ಚಳ ಕುರಿತು ದಲಿತರು ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್ ಕಡೆಗಣಿಸುತ್ತ ಬಂದಿತ್ತು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.

    ಸಂಡೂರಲ್ಲಿ ರೋಡ್ ಶೋ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿ ಮಾಡಲು ಬಿಜೆಪಿಯೇ ಬರಬೇಕಾಯಿತು. ಹಲವು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅತ್ತ ಕಣ್ಣೆತ್ತಿಯೂ ನೋಡಲಿಲ್ಲ ಎಂದು ದೂರಿದರು.

    ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳಮೀಸಲಾತಿ ರದ್ದುಗೊಳಿಸಲು ಪ್ರತಿಭಟನೆ

    ಇದೀಗ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ತೆಗೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಮುಂತಾದ ದಲಿತ ನಾಯಕರನ್ನು ಮೋಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ ಎಂದರು.

    ರಾಷ್ಟ್ರೀಯ ಒಬಿಸಿ ಅಧ್ಯಕ್ಷ ಲಕ್ಷಣ, ಪಕ್ಷದ ಅಭ್ಯರ್ಥಿ ಶೀಲ್ಪಾ ಪಾಟೀಲ್ ರಾಘವೇಂದ್ರ ಮಾತನಾಡಿದರು. ಬಜೆಪಿ ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ, ಸಫಾಯಿ ಕರ್ಮಚಾರಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಏಪ್.ಕುಮಾರನಾಯ್ಕ, ತಾಲೂಕು ಚುನಾವಣೆ ಉಸ್ತುವಾರಿ ಅಜಯ್ ಮಂದಾನ, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಒಬಳೇಶ್, ಮಾಜಿ ಪುರಸಭೆ ಅಧ್ಯಕ್ಷ ಡಿ.ಕೃಷ್ಣಪ್ಪ, ಡಿ.ಪ್ರಹ್ಲಾದ, ದರೋಜಿ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts