ಎಎನ್​-32 ಯುದ್ಧವಿಮಾನದ ಅವಶೇಷ ತಲುಪಲು ದುರ್ಗಮ ಹಾದಿ ಸವೆಸಲು ಕಷ್ಟ: ಗುರುವಾರ ಸ್ಥಳ ತಲುಪುವ ಸಾಧ್ಯತೆ

ನವದೆಹಲಿ: ಭಾರತೀಯ ವಾಯುಪಡೆಯ ಎಎನ್​-32 ಯುದ್ಧವಿಮಾನ ಅಪಘಾತಕ್ಕೀಡಾಗಿರುವ ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ 16 ಕಿ.ಮೀ. ದೂರದ ಪ್ರದೇಶವನ್ನು ತಲುಪಲು ವಾಯುಪಡೆಯ 9 ಮಂದಿ ಸೇರಿ ಒಟ್ಟು 15 ಪರ್ವತಾರೋಹಿಗಳು ಹರಸಾಹಸ ಪಡುತ್ತಿದ್ದಾರೆ.

ವಿಮಾನ ಅಪಘಾತಕ್ಕೀಡಾಗಿರುವ ಪ್ರದೇಶ ಅತ್ಯಂತ ದುರ್ಗಮವಾಗಿದ್ದು, ದಟ್ಟ ಕಾನನದಿಂದ ಆವರಿಸಲ್ಪಟ್ಟಿದೆ. ಈ ಪ್ರದೇಶವನ್ನು ಕಾಲ್ನಡಿಗೆಯಲ್ಲಿಯೇ ತಲುಪಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವ ತಂಡಕ್ಕೆ ತುಂಬಾ ಕಷ್ಟವಾಗುತ್ತಿದೆ. ಆದ್ದರಿಂದ, ತಂಡಕ್ಕೆ ಅಪಘಾತ ಸ್ಥಳವನ್ನು ಬುಧವಾರವೇ ತಲುಪಲು ಸಾಧ್ಯವಾಗಿಲ್ಲ ಎಂದು ವಾಯುಪಡೆ ಮೂಲಗಳು ತಿಳಿಸಿವೆ.

ಸದ್ಯ ಪರ್ವತಾರೋಹಿಗಳ ತಂಡ ಸಮತಟ್ಟಾದ ಪ್ರದೇಶದಲ್ಲಿ ತಂಗಿದೆ. ಅಲ್ಲಿ ಬೆಳಗಿನವರೆಗೆ ವಿಶ್ರಾಂತಿ ಪಡೆದು, ನಂತರ ಕಾಲ್ನಡಿಗೆ ಮೂಲಕ ಅಪಘಾತ ಸ್ಥಳವನ್ನು ತಲುಪಲು ಪ್ರಯತ್ನಿಸಲಿದೆ. ಬಹುಶಃ ಗುರುವಾರ ಅಪಘಾತ ಸ್ಥಳವನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಿವೆ. (ಏಜೆನ್ಸೀಸ್​)

 

Leave a Reply

Your email address will not be published. Required fields are marked *