ಕಾರವಾರ: ಬೈತಖೋಲ್ ಮಾರ್ಗವಾಗಿ ಬಸ್ (bus) ಓಡಿಸುವಂತೆ ಬೈತಖೋಲ್‌ನ ನಾಗರಿಕರು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ವಿಸ್ತರಣೆಯಾದ ಬಳಿಕ ಬಸ್‌ಗಳನ್ನು ಸುರಂಗ ಮಾರ್ಗದ ಮೂಲಕವೇ ಓಡಿಸಲಾಗುತ್ತಿದೆ. ಇದರಿಂದ ಬೈತಖೋಲ್ ದ್ವೀಪದಂತಾಗಿದ್ದು, ಯಾವುದೇ ಬಸ್‌ಗಳು ಹಾಗೂ ಇತರ ವಾಹನಗಳು ಮಾರ್ಗದಲ್ಲಿ ಓಡಾಡುತ್ತಿಲ್ಲ. ಇದರಿಂದ ಬೈತಖೋಲ್‌ನಿಂದ ಹುಬ್ಬಳ್ಳಿ, ಮಣಿಪಾಲ ಕಡೆಗೆ ಆಸ್ಪತ್ರೆಗೆ ತೆರಳುವವರು. ಬೇರೆ ಊರುಗಳಿಗೆ ಉದ್ಯೋಗಕ್ಕೆ ತೆರಳುವವರು, ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
bus ಓಡಾಡಲಿ
ಇದರಿಂದ ಬಸ್‌ಗಳು ಕಾರವಾರ-ಬೈತಖೋಲ್-ಬಿಣಗಾ ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ವಿಲ್ಸನ್ ಫರ್ನಾಂಡಿಸ್, ಕೃಷ್ಣಾನಂದ ಉಳ್ವೇಕರ್, ಅಭಿನವ ದುರ್ಗೇಕರ್, ಆದರ್ಶ ಹರಿಕಂತ್ರ, ಓಂಕಾರ ದುರ್ಗೇಕರ್, ವಿವೇಕ ಅಂಬಿಗ, ಆಯುಷ್ ದುರ್ಗೇಕರ್ ಇತರರು ಇದ್ದರು.
ಇದನ್ನೂ ಓದಿ
ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಸಮಾನ ಮನಸ್ಕರ ಸಭೆ 16ರಂದುhttps://www.vijayavani.net/a-like-minded-meeting-for-shirsi-separate-district-on-16th
https://www.facebook.com/share/p/15HKaw2UH2/