ಮುಂಡರಗಿ: ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಶನಿವಾರ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಸಮುದಾಯ ಭವನ ಕಟ್ಟಿಸಿಕೊಳ್ಳಲು ನಿವೇಶನ ನೀಡುವುದರ ಜತೆಗೆ ಸಂಘದ ಕಾರ್ಯಚಟುವಟಿಕೆ ನಡೆಸಲು ಪುರಸಭೆ ಸುಪರ್ದಿಯಲ್ಲಿರುವ ಹಾಲ್ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್‌ರಫಿ ಮುಲ್ಲಾ ಹಾಗೂ ಸಿಬ್ಬಂದಿ ಮನವಿ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಆರ್.ಬಿ. ಹಕ್ಕಂಡಿ, ಉಪಾಧ್ಯಕ್ಷ ಈಶ್ವರಪ್ಪ ಹಂಚಿನಾಳ, ಕಾರ್ಯದರ್ಶಿ ಎಸ್.ಡಿ. ಗಡೇದ, ಎಸ್.ಎನ್. ಪಾಟೀಲ, ಎಚ್.ವೈ. ಬಾರಕೇರ, ಆರ್.ಬಿ. ಮುಳ್ಳಳ್ಳಿ, ಎನ್.ಎಸ್. ಶೇಡದ, ಬಿ.ವಿ. ಮುದ್ದಿ, ದೇವೇಂದ್ರಪ್ಪ ರಾಮೇನಹಳ್ಳಿ, ಪಿ.ಐ. ಅಬ್ಬಿಗೇರಿ, ಎಚ್.ಜೆ. ಗೌಡರ, ಎಸ್.ಎ. ಹುಬ್ಬಳ್ಳಿ, ಬಿ.ಟಿ. ಗುಗ್ಗರಿ, ಕಾಶೀನಾಥ ಶಿರಬಡಗಿ, ದೊಡ್ಡಪ್ಪ ಅಂಗಡಿ, ಎನ್.ಸಿ. ಟಿಕಾರೆ, ಎಸ್.ವಿ. ಕುಲಕರ್ಣಿ, ವಿ.ಎಂ. ಹೂಗಾರ, ಪಿ.ಎಸ್. ಕಾಮಣ್ಣವರ ಇತರರು ಇದ್ದರು.
