More

    LIVE| ರಾಷ್ಟ್ರ ರಾಜಧಾನಿಯಲ್ಲಿ 73ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್​ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶನ

    ನವದೆಹಲಿ: ಕರೊನಾ ಬಿಕ್ಕಟ್ಟಿನ ನಡುವೆ ಸೀಮಿತ ಜನರ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇಂದು ಬೆಳಗ್ಗೆ 10.30ಕ್ಕೆ ರಾಜಪಥ್​ನಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಥಸಂಚಲನ ಆರಂಭವಾಗಿದ್ದು, ದೇಶದ ಸೇನಾ ಸಾಮರ್ಥ್ಯ ಪ್ರದರ್ಶನವಾಗುತ್ತಿದೆ. ಈ ವರ್ಷ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, 9 ಸಚಿವಾಲಯ ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳು ಪರೇಡ್​ನಲ್ಲಿ ಭಾಗವಹಿಸಿವೆ. ಗಣರಾಜ್ಯೋತ್ಸವದ ಕಾರ್ಯಕ್ರಮ ಕ್ಷಣ ಕ್ಷಣದ ಮಾಹಿತಿಯನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

    ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಾಯಕರು ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ಮೋದಿ, ರಕ್ಷಣ ಸಚಿವ ರಾಜನಾಥ್​ ಸಿಂಗ್​, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸೇರಿದಂತೆ ಅನೇಕ ಗಣ್ಯರು ಪಥಸಂಚಲನವನ್ನು ವೀಕ್ಷಿಸುತ್ತಿದ್ದಾರೆ.

    ಪಥಸಂಚಲನಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೇ ಭೇಟಿ ನೀಡಿದ ಪ್ರಧಾನಿ ಮೋದಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

    ಇಂದಿನ ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸರ್ಪಗಾವಲು ಹಾಕಲಾಗಿದೆ.

    ಕರೊನಾ ಕಾರಣ ಈ ವರ್ಷ ಕೂಡ ವಿದೇಶದ ಗಣ್ಯ ವ್ಯಕ್ತಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿಲ್ಲ. 2021ರಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ಗೆ ಆಹ್ವಾನ ನೀಡಲಾಗಿತ್ತು. ಅವರೂ ಒಪ್ಪಿದ್ದರು. ಆದರೆ, ಕೋವಿಡ್ ಸೋಂಕು ಹೆಚ್ಚಾದ ಕಾರಣ ಭೇಟಿಯನ್ನು ರದ್ದುಮಾಡಿದರು. 2020ರಲ್ಲಿ ಕಝಾಕಸ್ತಾನ್, ರ್ಕಿಗಿಸ್ತಾನ್, ತಜಕಿಸ್ತಾನ್, ತುರ್ಕಮೇನಿಸ್ತಾನ್, ಉಜ್ಬೇಕಿಸ್ತಾನ್​ಗಳ ನಾಯಕರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗಿಯಾಗಿದ್ದರು.

    ನವೀಕೃತ ರಾಜಪಥದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಖಚಹರೆಯ ಗುರುತು (ಫೇಸ್ ರೆಕಗ್ನಿಷನ್) ವ್ಯವಸ್ಥೆಯನ್ನು ಆರು ಪ್ರವೇಶ ಪಾಯಿಂಟ್, 16 ಬ್ರಿಡ್ಜ್​ಗಳು ಸೇರಿದಂತೆ 30 ಕಡೆ ಅಳವಡಿಸಲಾಗಿದೆ. ಶಂಕಿತರು ಇದರ ಸಮೀಪ ಸುಳಿದಾಡಿದರೆ ತಕ್ಷಣ ಕೆಂಪು ದೀಪದ ಸೂಚನೆ ದೊರೆಯುತ್ತದೆ. ಇದರ ಹೊರತಾಗಿ ಚಲನವಲನದ ಮೇಲೆ ನಿಗಾಇರಿಸಲು 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 30 ಸಾವಿರ ಪೊಲೀಸರು, ಅರೆಸೇನಾಪಡೆಯ 65 ಕಂಪನಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇವರಲ್ಲಿ 71 ಡಿಸಿಪಿ, 213 ಎಸಿಪಿ, 753 ಇನ್​ಸ್ಪೆಕ್ಟರ್​ಗಳು ಇರಲಿದ್ದಾರೆ.

    ಡ್ರೋನ್ ಹಾರಾಟ ಪ್ರತಿಬಂಧಿಸುವ ಏರ್ ಸ್ಪೇಸ್ ಮಾನಿಟರ್ ಸಹಿತ ಉಗ್ರರ ನಿಗ್ರಹಕ್ಕೆ ಸೂಚಿತವಾದ 26 ಮಾನದಂಡಗಳನ್ನು ಭದ್ರತೆಯಲ್ಲಿ ಅನುಸರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ 5ರಿಂದ 8 ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪ್ರವೇಶ ಇರುವುದಿಲ್ಲ. ಮೊದಲು 24 ಸಾವಿರ ಜನರಿಗೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಆದರೆ, ಒಮಿಕ್ರಾನ್ ಪ್ರಭೇದದ ನಂತರ ಸೋಂಕು ಹೆಚ್ಚಾದ ಕಾರಣ ಸಂಖ್ಯೆಯನ್ನು ಮಿತಗೊಳಿಸಲಾಗಿದೆ. 2021ರಲ್ಲಿ 25 ಸಾವಿರ ಜನರಿಗೆ ಭೌತಿಕವಾಗಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು.

    ಕರೊನಾ ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘನೆ

    ಸಿಕ್ಕಾಪಟ್ಟೆ ಟ್ರೋಲ್​ ಆದ ರಶ್ಮಿಕಾ: ಕಿರಿಕ್​ ಬ್ಯೂಟಿಯ ತುಂಡುಡುಗೆ ಹಿಂದಿನ ಉದ್ದೇಶ ಇದೆನಾ?

    ವೈಎಸ್​ವಿ ದತ್ತ ಕಾಂಗ್ರೆಸ್​ ಸೇರ್ಪಡೆ ಕುರಿತ ಸುದ್ದಿಗೆ ತೆರೆ ಎಳೆದ ಸಂಸದ ಪ್ರಜ್ವಲ್​ ರೇವಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts