ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊದಲಬಾರಿಗೆ ಪಾಲಿಕೆ ಪೌರಕಾರ್ವಿುಕರು ಪಥ ಸಂಚಲನ ನಡೆಸಲಿದ್ದಾರೆ.
2 ಸಾವಿರ ಮಕ್ಕಳು 3 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡ ನಾಡಗೀತೆ ಮತ್ತು ರೈತಗೀತೆ ಹಾಡಲಿದೆ. ತಾವರೆಕೆರೆಯ ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲಾ ಮಕ್ಕಳು ಹಮಾರ ಭಾರತ್ ಮಹಾನ್, ಚಾಮರಾಜಪೇಟೆಯ ಬಿಬಿಎಂಪಿ ಪ್ರೌಢಶಾಲೆಯಿಂದ ಕಲ್ಯಾಣ ಕ್ರಾಂತಿ, ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಭಾರತ ಭಾಗ್ಯವಿಧಾತ, ಡಿ ಆರ್ವಿು ಸರ್ವಿಸ್ ಕಾರ್ಪ್ಸನ 20 ಸದಸ್ಯರು ಡಿ ಟೋರ್ನಾಡಸ್, ಗರುಡ ಪಡೆಯಿಂದ ಬಸ್ ಇಂಟರ್ವೆನ್ಷನ್ ಕಲ್ಪಿತ ಪ್ರದರ್ಶನ ಏರ್ಪಾಡಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್ ಅನಿಲ್ಕುಮಾರ್ ವಿವರಿಸಿದರು.
ನಗರಾಡಳಿತ ಸಕಲ ಸಜ್ಜು: ಜ.22ರಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೂರ್ವಭಾವಿ ತಾಲೀಮು ನಡೆದಿದೆ. ಪಥಸಂಚಲನದಲ್ಲಿ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ಸ್ ಗೈಡ್ಸ್ ಸೇರಿ 44 ತುಕಡಿಗಳಲ್ಲಿ 1,750 ಮಂದಿ ಭಾಗವಹಿಸಲಿದ್ದಾರೆ ಎಂದು ಪಾಲಿಕೆ ಆಯುಕ್ತ ಅನಿಲ್ಕುಮಾರ್ ತಿಳಿಸಿದರು.