More

  LIVE| 71ನೇ ಗಣರಾಜ್ಯೋತ್ಸವ ಸಂಭ್ರಮ: ಪರೇಡ್​ ಮುಗಿದ ಬಳಿಕ ರಾಜಪಥ್​ನಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಪ್ರಧಾನಿ ಮೋದಿ ಶುಭಾಶಯ

  ನವದೆಹಲಿ: ದೇಶವು ಇಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಈ ಸುದಿನದಂದು ರಾಷ್ಟ್ರದ ಜನತೆ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಪ್ರೇಮವನ್ನು ಮೆರೆಯುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ. ದೇಶದ ಗಮನ ಸೆಳೆದಿರುವ ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಈ ಬಾರಿ ಮುಖ್ಯ ಅತಿಥಿಯಾಗಿ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನರೋ ಭಾಗವಹಿಸಿದ್ದಾರೆ.

  11:45 AM: ಗಣರಾಜ್ಯೋತ್ಸವ ಪರೇಡ್​ ಮುಗಿದ ಬಳಿಕ ರಾಜಪಥ್​ನಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ.

  11:40 AM: ಪರೇಡ್​ ಮುಗಿಸಿ ಹೊರಟ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮತ್ತು ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನರೋ.

  11:28 AM: ವಿವಿಧ ಯುದ್ಧ ವಿಮಾನಗಳಿಂದ ಆಗಸದಲ್ಲಿ ಶಕ್ತಿ ಪ್ರದರ್ಶನ.

  11:26 AM: ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಅನಿತಾ ಕುಮಾರಿ ವಿವಿ ನೇತೃತ್ವದಲ್ಲಿ ಐದು ಮೋಟರ್​ಬೈಕ್​ ಸಹಾಯದಿಂದ 21 ಮಹಿಳೆಯರಿಂದ ಮಾನವ ಪಿರಾಮಿಡ್​ ನಿರ್ಮಾಣ.

  11:24 AM: ಪ್ರಧಾನ ಮಂತ್ರಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2020 ವಿಜೇತರು ಪರೇಡ್​ನಲ್ಲಿ ಭಾಗವಹಿಸಿರುವುದು. 18 ಹುಡುಗಿಯರು ಮತ್ತು 31 ಹುಡುಗರು ಸೇರಿದಂತೆ ಒಟ್ಟು 49 ಮಕ್ಕಳು ಪರೇಡ್​ನಲ್ಲಿ ಭಾಗಿ.

  11:22 AM: ಗುಜರಾತ್​ನ ಜಾನಪದ ನೃತ್ಯ ಪ್ರಕಾರ ಗಾರ್ಬ ನೃತ್ಯವನ್ನು ಕಣ್ತುಂಬಿಕೊಂಡ ಪ್ರಧಾನಿ ನರೇಂದ್ರ ಮೋದಿ. ಗುಜರಾತ್​ನ ವಿವಿಧ ಶಾಲೆಯ ಸುಮಾರು 150 ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ.

  11:19 AM: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಸಿಪಿಡಬ್ಲ್ಯೂಡಿ ತೋಟಗಾರಿಕೆ ಸ್ತಬ್ಧ ಚಿತ್ರ ಪ್ರದರ್ಶನ.

  11:10 AM: ಪರೇಡ್​ನಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ತಬ್ಧ ಚಿತ್ರ ಪ್ರದರ್ಶನ. ಸ್ತಬ್ಧ ಚಿತ್ರದಲ್ಲಿ ಕೇಂದ್ರಾಡಳಿತ ಪ್ರದೇಶದ ಮರಳಿ ಹಳ್ಳಿಗೆ ಕಾರ್ಯಕ್ರಮ ಸಂದೇಶವಿದೆ.

  11:06 AM: ಕರ್ನಾಟಕದಿಂದ ಬಸವಣ್ಣನವರ ಅನುಭವ ಮಂಟಪ ಸೇರಿದಂತೆ ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದ ಸ್ತಬ್ಧ ಚಿತ್ರಗಳು ಭಾಗಿಯಾಗಿರುವುದು.

  11:04 AM: ಒಡಿಶಾದ ಲಿಂಗರಾಜ ದೇವರಿನ ರುಕಾನಾ ರಥ ಯಾತ್ರೆಯ ಸ್ತಬ್ಧ ಚಿತ್ರ ಪ್ರದರ್ಶನ.

  11:02 AM: ಹಿಮಾಚಲ ಪ್ರದೇಶದ ಕುಲು ದಸರಾ ಹಬ್ಬ ಮತ್ತು ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಮ್ಯೂಸಿಯಂನ ಸ್ತಬ್ಧ ಚಿತ್ರಗಳು.

  10:59 AM: ತೆಲಂಗಾಣದ ಹೂವಿನ ಹಬ್ಬ ಬಥುಕಮ್ಮ ಪ್ರತಿಬಿಂಬಿಸುವ ಹಾಗೂ ಬಿದಿರು ಮತ್ತು ಕಬ್ಬಿನ ಕರಕುಶಲ ವಸ್ತುಗಳನ್ನು ಸಾರುವ ಅಸ್ಸಾಂನ ಸ್ತಬ್ಧ ಚಿತ್ರಗಳು.

  10:57 AM: ರಾಜಸ್ಥಾನ ರಾಜಧಾನಿ ಜೈಪುರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ ಸಾರುವ ಸ್ತಬ್ಧ ಚಿತ್ರ ಪರೇಡ್​ನಲ್ಲಿ ಭಾಗಿ.

  10:56 AM: ರಾಜಪಥ್​ ಪರೇಡ್​ನಲ್ಲಿ ಕೋಲ್ಕತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿಯಾಗಿರುವುದು.

  10:53 AM: ಹಿರಿಯ ಅಧಿಕಾರಿ ಚಾರು ಶರ್ಮಾ ನೇತೃತ್ವದಲ್ಲಿ ಬಿರ್ಲಾ ಬಾಲಿಕ ವಿದ್ಯಾಪೀಠದಿಂದ ಪಿಲಾನಿ ಬ್ಯಾಂಡ್​ ಪ್ರದರ್ಶನ. 56 ವರ್ಷಗಳಿಂದ ಈ ಶಾಲೆಯು ಗಣರಾಜ್ಯೋತ್ಸವ ಪರೇಡ್​ನಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ.

  10:51 AM: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಹಿರಿಯ ಬಿಜೆಪಿ ನಾಯಕ ಎಲ್​.ಕೆ. ಅಡ್ವಾಣಿ ಮತ್ತು ಪುತ್ರಿ ಪ್ರತಿಭಾ ಅಡ್ವಾಣಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್​ ನಾಯಕ ಗುಲಾಂ ನಬಿ ಅಜಾದ್​ ಮತ್ತ ಇತರ ನಾಯಕರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಸಾಕ್ಷಿಯಾಗಿರುವುದು.

  10:49 AM: ಡೆಪ್ಯೂಟಿ ಕಮಾಂಡೆಂಟ್​ ಘನಶ್ಯಾಮ್​ ಸಿಂಗ್​ ಕಮಾಂಡ್​ ಅಡಿಯಲ್ಲಿ ಗಡಿ ಭದ್ರತಾ ಪಡೆಯ ಒಂಟೆ ಪಡೆಯಿಂದ ಪಥಸಂಚಲನ. ಬಿಎಸ್​ಎಫ್​ ಧ್ಯೇಯೋಕ್ತಿ “ಸಾಯುವವರೆಗೂ ಕರ್ತ್ಯವ್ಯ ನಿರ್ವಹಿಸು” ಎಂಬುದು.

  10:46 AM: ಏರ್​ ಡಿಫೆನ್ಸ್​ ರೆಜಿಮೆಂಟ್​ನ ಲೆಫ್ಟಿನೆಂಟ್​ ವಿವೇಕ್​ ವಿಜಯ್​ ನೇತೃತ್ವದಲ್ಲಿ ರಾಜಪಥ್​ ಪರೇಡ್​ನಲ್ಲಿ ಏರ್​ ಡಿಫೆನ್ಸ್​ನ ಟ್ಯಾಕ್ಟಿಕಲ್​ ಕಂಟ್ರೋಲ್​ ರಾಡರ್​ ವಾಹನ ಪ್ರದರ್ಶನ.

  10:43 AM: ಸಹಾಯಕ ಕಮಾಂಡೆಂಟ್​ ಅಮಿತ್​ ಯಾದವ್​ ನೇತೃತ್ವದಲ್ಲಿ ಇಂಡೋ ಟಿಬೆಟನ್​ ಬಾರ್ಡರ್​ ಪೊಲೀಸ್​ ಪಥಸಂಚಲನ ತಂಡ ಪರೇಡ್​ನಲ್ಲಿ ಪಾಲ್ಗೊಂಡಿರುವುದು.

  10:42 AM: ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮತ್ತು ಕೇಂದ್ರ ರಾಜ್ಯ ವಿತ್ತಸಚಿವ ಅನುರಾಗ್​ ಠಾಕೂರ್​ ಪರೇಡ್​ನಲ್ಲಿ ಭಾಗಿಯಾಗಿರುವುದು.

  10:40 AM: ಬೋಯಿಂಗ್​ ಪಿ81 ಲಾಂಗ್​ ರೇಂಜ್​ ಕಡಲ ಗಸ್ತು ವಿಮಾನ ಮತ್ತು ಕೋಲ್ಕತದ ಕ್ಲಾಸ್​ ಡೆಸ್ಟ್ರೋಯರ್​ ಹಾಗೂ ಕಲ್ವಾರಿ ಕ್ಲಾಸ್ ಜಲಾಂತರ್ಗಾಮಿಯಂತಹ ಪ್ರಮುಖ ನೌಕಾಪಡೆಯ ಆಸ್ತಿಗಳನ್ನು ಭಾರತೀಯ ನೌಕಾಪಡೆ ಪರೇಡ್​ನಲ್ಲಿ ಪ್ರದರ್ಶಿಸಿತು.​

  10:36 AM: ರಾಜಪಥ್​ ಪರೇಡ್​ನಲ್ಲಿ ನಾವಲ್​ ಬ್ರಾಸ್​ ಬ್ರ್ಯಾಂಡ್ ಪ್ರದರ್ಶನ.​

  10:33 AM: ನಾಲ್ಕನೇ ತಲೆಮಾರಿನ ಸೇನಾಧಿಕಾರಿ ಕ್ಯಾಪ್ಟನ್​ ತಾನ್ಯ ಶೆರ್ಗಿಲ್​ ನೇತೃತ್ವದಲ್ಲಿ ಕಾರ್ಪ್ಸ್​ ಆಫ್​ ಸಿಗ್ನಲ್​ ತಂಡ ಪರೇಡ್​ನಲ್ಲಿ ಭಾಗವಹಿಸಿತು.

  10:30 AM: ಸಿಖ್​ ಲೈಟ್​ ಇನ್​ಫ್ಯಾಂಟ್ರಿ ರೆಜಿಮೆಂಟ್​ನ 6ನೇ ಬೆಟಾಲಿಯನ್​ನ ಮೇಜರ್​ ಅಂಜುಮ್​ ಗೋರ್ಕಾ ಅವರ ನೇತೃತ್ವದಲ್ಲಿ ಸಿಖ್​ ಲೈಟ್​ ಇನ್​ಫ್ಯಾಂಟ್ರಿ ರೆಜಿಮೆಂಟ್​ನಿಂದ ಪಥಸಂಚಲನ.

  10:25 AM: 269 ಮಧ್ಯಮ ರೆಜಿಮೆಂಟ್​ನ ಕ್ಯಾಪ್ಟನ್​ ಅಭಿನವ್​ ಸಾಹು ಅವರ ಕಮಾಂಡಿಂಗ್​​ನಲ್ಲಿ ಕೆ-9-ವಜ್ರ-ಟಿ ಯುದ್ಧ ಟ್ಯಾಂಕರ್​ ಪರೇಡ್​ನಲ್ಲಿ ಭಾಗಿ.

  10:23 AM: ರಾಜಪಥ್​ನ ಪರೇಡ್​ನಲ್ಲಿ ಭಾಗಿಯಾದ 86 ಆರ್ಮರ್ಡ್​ ರೆಜಿಮೆಂಟ್​ನ ಟಿ-90 ಭೀಷ್ಮಾ ಯುದ್ಧ ಟ್ಯಾಂಕರ್​.

  10:20 AM: ಅತ್ಯುನ್ನತ ಪ್ರಶಸ್ತಿಗಳಾದ ಶೌರ್ಯ ಪ್ರಶಸ್ತಿ, ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಪುರಷ್ಕೃತರು.

  10:12 AM: ದೆಹಲಿಯಲ್ಲಿರುವ ಮುಖ್ಯ ಕಚೇರಿಗಳಾದ ಅತಿ ವಿಶಿಷ್ಟ್​ ಸೇವಾ ಮೆಡಲ್​, ಸೇನಾ ಮೆಡಲ್​, ವಿಶಿಷ್ಟ ಸೇವಾ ಮೆಡಲ್​​, ಜನರಲ್​ ಆಫೀಸರ್​ ಕಮಾಂಡಿಂಗ್​ನ ಪರೇಡ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಅಸಿತ್​ ಮಿಸ್ತ್ರಿ ಅವರು ಈ ವರ್ಷದ ಗಣರಾಜ್ಯೋತ್ಸವದ ಪರೇಡ್​ನ ನೇತೃತ್ವ ವಹಿಸಿದ್ದಾರೆ.

  10:11 AM: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಪತ್ನಿ ಗುರ್ಶರನ್​ ಕೌರ್​, ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಮತ್ತು ಇತರೆ ಗಣ್ಯರು ರಾಜಪಥದಲ್ಲಿ ಉಪಸ್ಥಿತರಿರುವುದು.

  10:08 AM: ಲೆಫ್ಟಿನೆಂಟ್​ ಕರ್ನಲ್ ಸಿ ಸಂದೀಪ್​ ಕಮ್ಯಾಂಡ್​ ಅಡಿಯಲ್ಲಿ 2233 ಫೀಲ್ಡ್​ ಬ್ಯಾಟರಿಯಿಂದ 21 ಗನ್​ ಸೆಲ್ಯೂಟ್​ ಗೌರವ.

  10:04 AM: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಂದ 71ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಧ್ವಜಾರೋಹಣ.

  10:00 AM: ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರಿಂದ ರಾಷ್ಟ್ರಗೀತೆಗೆ ಗೌರವ.

  9:59 AM: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರೊಂದಿಗೆ ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನರೋ ಅವರು ರಾಜಪಥಕ್ಕೆ ಆಗಮನ.

  9:55 AM: ರಾಜಪಥಕ್ಕೆ ಪ್ರಧಾನಿ ಮೋದಿ ಆಗಮನ. ಇನ್ನು ಕೆಲವೇ ಕ್ಷಣಗಳಲ್ಲಿ ಗಣರಾಜ್ಯೋತ್ಸವ ಪರೇಡ್​ ಆರಂಭ.

  9:49 AM: ರಾಷ್ಟ್ರಪತಿ ಭವನದಿಂದ ರಾಜಪಥಕ್ಕೆ ಹೊರಟ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮತ್ತು ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನರೋ.

  9:45 AM: ಯುದ್ಧ ಸ್ಮಾರಕದ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ರಿಂದ ನಮನ. ಮೂರು ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥ ಜನರಲ್​ ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಮತ್ತು ವಾಯುಪಡೆಯ ಮುಖ್ಯಸ್ಥ ಏರ್​ ಮಾರ್ಷಲ್​ ಆರ್​.ಕೆ.ಎಸ್​ ಭದುರಿಯಾರ ಉಪಸ್ಥಿತಿ.

  9:40 AM: ಮೂರು ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥ ಜನರಲ್​ ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಮತ್ತು ವಾಯುಪಡೆಯ ಮುಖ್ಯಸ್ಥ ಏರ್​ ಮಾರ್ಷಲ್​ ಆರ್​.ಕೆ.ಎಸ್​ ಭದುರಿಯಾರಿಂದ ಪ್ರಧಾನಿ ಮೋದಿಗೆ ಸ್ವಾಗತ

  9:36 AM: ಇಂಡಿಯಾ ಗೇಟ್​ನಲ್ಲಿರುವ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆಗಮನ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts