ರೇಣುಕರ ಜಯಂತಿ ಸರ್ಕಾರ ಆಚರಿಸಲಿ

ಕಲಬುರಗಿ: ಸರ್ಕಾರವೇ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎಂದು ನಗರದಲ್ಲಿ ಜರುಗಿದ ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಠಾಧೀಶರು ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಜಯಂತ್ಯುತ್ಸವ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ, ಜಿಲ್ಲಾ ಯುವ ಜಂಗಮ ಸಂಘ, ಸಿದ್ಧಾಂತ ಶಿಖಾಮಣಿ, ಅರ್ಚಕರ ಸಂಘ, ಪುರೋಹಿತರ ಸಂಘ, ಪುರವಂತರ ಸಂಘ, ಜಿಲ್ಲಾ ಜಂಗಮ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ ಹಾಗೂ ಅಕ್ಕನ ಬಳಗ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡ ವಿವಿಧ ಮಠಾಧೀಶರು ಹಾಗೂ ಗಣ್ಯರು ರೇಣುಕರ ಜಯಂತಿ ಸರ್ಕಾರದಿಂದ ಆಚರಿಸಬೇಕು ಎಂದು ಒತ್ತಾಯಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಡಗಂಚಿ ಶಾಂತಲಿಂಗೇಶ್ವರ ಮಠದ ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಎರಡು ಒಂದೇಯಾಗಿದ್ದು, ಕೆಲವರು ತಮ್ಮ ಸ್ವ ಹಿತಾಸಕ್ತಿಗಾಗಿ ಲಿಂಗಾಯತ ಧರ್ಮ ಪ್ರತ್ಯೇಕ ಎಂದು ವಾದಿಸುತ್ತಿದ್ದಾರೆ. ರೇಣುಕಾಚಾರ್ಯರು ಒಂದೇ ಸಮಾಜಕ್ಕೆ ಸೀಮಿತವಾಗಿಲ್ಲ ಎಲ್ಲರೂ ಸೇರಿ ಜಯಂತಿ ಆಚರಿಸಬೇಕು ಎಂದು ಹೇಳಿದರು.
ಸೂಗೂರು ರುದ್ರ ಮುನೀಶ್ವರ ಮಠದ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ಮಾತನಾಡಿ, ವೀರಶೈವ ಲಿಂಗಾಯತ ಬೇರೆ ಎಂದು ನಮ್ಮನಮ್ಮಲ್ಲೇ ಜಗಳ ಹಚ್ಚುವವರು ಇದ್ದಾರೆ. ಅಂಥವರ ಮಾತು ಕೇಳಿ ಜಗಳ ಆಡೋದು ಬೇಡ ಎಂದು ಸಲಹೆ ನೀಡಿದರು.
ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ, ಶ್ರೀನಿವಾಸ ಸರಡಗಿಯ ಶ್ರೀ ರೇವಣಸಿದ್ದೇಶ್ವರ ಶ್ರೀ, ಪಾಳಾದ ಗುರುಮೂತರ್ಿ ಶ್ರೀ, ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಶ್ರೀ, ಚಿಣಮಗೇರಿಯ ಸಿದ್ದರಾಮ ಶಿವಾಚಾರ್ಯರು, ಟೆಂಗಳಿ ಡಾ. ಶಾಂತ ಸೋಮನಾಥ ಶ್ರೀ, ಕಾಳಗಿ ಹಿರೇಮಠದ ಶಿವಬಸವ ಶ್ರೀ, ಮಹಾಗಾಂವ ಕಳ್ಳಿಮಠದ ಗುರುನಾಥ ಸ್ವಾಮೀಜಿ, ಮಲಕೂಡದ ಗುರುಲಿಂಗ ಶಿವಾಚಾರ್ಯ, ವೆಂಕಟಬೇನೂರಿನ ಸಿದ್ಧರೇಣುಕ ಶ್ರೀ, ಚಂದನಕೇರಾದ ರಾಜೋಟೇಶ್ವರ ಶ್ರೀ, ದಿಗ್ಗಾವಿಯ ಸಿದ್ಧ ವೀರ ಶ್ರೀ, ಸೇಡಂ ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ, ಬೆಳಗುಂಪಾದ ಅಭಿನವ ಚರಂತೇಶ್ವರ ಶ್ರೀ, ಹಲಕಟರ್ಿಯ ವೀರಮುನೀಂದ್ರ ಶ್ರೀ, ಶ್ರೀನಿವಾಸ ಸರಡಗಿಯ ವೀರಭದ್ರ ಶ್ರೀ, ದಂಡಗುಂಡದ ಸಂಗಮೇಶ್ವರ ಶ್ರೀ, ಚಟ್ನಳ್ಳಿ ಶ್ರೀ, ಮಳಖೇಡ ಶ್ರೀ, ಕೋಡ್ಲಿ ಶ್ರೀ, ಕಲ್ಲಹಿಪ್ಪರಗಾ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಚಂದ್ರಶೇಖರ ಪುರಾಣಿಕ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಸ್.ಪಾಟೀಲ್ ಸ್ವಾಗತಿಸಿದರು. ಗುರುಬಸಯ್ಯ ಸಾಲಿಮಠ ನಿರೂಪಣೆ ಮಾಡಿದರು.
ಅದ್ದೂರಿ ಮೆರವಣಿಗೆ: ನಗರದ ಪೊಲೀಸ್ ಚೌಕ್ದಿಂದ ಆರಂಭವಾದ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆಗೆ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಚಾಲನೆ ನೀಡಿದರು. 1008 ಮುತೈದೆಯರಿಂದ ಕುಂಭ ಮೆರವಣಿಗೆ ಗಮನ ಸೆಳೆಯಿತು. ಡೊಳ್ಳು ಕುಣಿತ ವೀರಗಾಸೆ, ಪುರವಂತರ ಸೇವೆ ಸೇರಿ ವಿವಿಧ ಕಲಾ ದಂಡಗಳು ಮೆರವಣಿಗೆಗೆ ಮೆರಗು ತಂದವು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಡಾ. ಅಜಯಸಿಂಗ್, ಮಾಜಿ ಶಾಸಕರಾದ ಶಶೀಲ್ ನಮೋಶಿ, ಮಾಲೀಕಯ್ಯ ಗುತ್ತೇದಾರ ಮತ್ತು ಅಪಾರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವೀರಶೈವ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಿತು.
ಒಗ್ಗಟ್ಟಾದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ.

Leave a Reply

Your email address will not be published. Required fields are marked *