ಭಾರತ ಮಾರುಕಟ್ಟೆಗೆ ರೆನಾಲ್ಟ್ ಟ್ರೖೆಬರ್

ಬೆಂಗಳೂರು: ಭಾರತದ ನಂಬರ್ 1 ಯೂರೋಪಿಯನ್ ಬ್ರಾಂಡ್​ ರೆನಾಲ್ಟ್, ತನ್ನ ಬಹುನಿರೀಕ್ಷಿತ ‘ಟ್ರೖೆಬರ್’ ಅನ್ನು ಭಾರತದ ಮಾರುಟ್ಟೆಗೆ ಬಿಡುಗಡೆಗೊಳಿಸಿದೆ. 4.95 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ನೂತನ ಕಾರು ಗ್ರಾಹಕರಿಗೆ ಲಭ್ಯವಿದೆ.

ಆರ್​ಎಕ್ಸ್​ಇ, ಆರ್​ಎಕ್ಸ್​ಎಲ್, ಆರ್​ಎಕ್ಸ್​ಟಿ ಹಾಗೂ ಆರ್​ಎಕ್ಸ್​ಝುಡ್ ಎಂಬ ನಾಲ್ಕು ಆವೃತ್ತಿಗಳಲ್ಲಿ ಲಭ್ಯವಿರುವ ರೆನಾಲ್ಟ್ ಟ್ರೖೆಬರ್, ನಿರ್ದಿಷ್ಟವಾಗಿ ಭಾರತೀಯ ಮಾರುಕಟ್ಟೆಗೆಂದೇ ವಿನ್ಯಾಸಗೊಳಿಸಲಾಗಿದೆ. ವಿಶಾಲ, ಅಲ್ಟ್ರಾ ಮಾಡ್ಯುಲರ್, ಉತ್ತಮ ಇಂಧನ ಸಾಮರ್ಥ್ಯ ಹಾಗೂ ಆಕರ್ಷಕ ಒಳಾಂಗಣ ಹೊಂದಿರುವ ಟ್ರೖೆಬರ್, ನಾಲ್ಕು ಮೀಟರ್​ಗೂ ಕಡಿಮೆ ಸ್ಥಳಾವಕಾಶದಲ್ಲಿ ಅನೇಕ ಆಧುನಿಕ ಹಾಗೂ ಪ್ರಾಯೋಗಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ರೆನಾಲ್ಟ್ ಟ್ರೖೆಬರ್ ಬಿಡುಗಡೆಯೊಂದಿಗೆ ನಾವು ಭಾರತೀಯ ವಾಹನ ಮಾರುಕಟ್ಟೆಯ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ವಿಭಾಗವನ್ನು ಪ್ರವೇಶಿಸಿದ್ದೇವೆ. ಸ್ಥಳಾವಕಾಶ ಹಾಗೂ ಮಾಡ್ಯುಲಾರಿಟಿ ಹೊಂದಿರುವ ರೆನಾಲ್ಟ್ ಟ್ರೖೆಬರ್, ಬಿ-ಸೆಗ್ಮೆಂಟ್​ಗಳ ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡು ವಿನ್ಯಾಸ ಗೊಳಿಸಲಾಗಿದೆ ಎಂದು ರೆನಾಲ್ಟ್ ಇಂಡಿಯಾ ಆಪರೇಷನ್ಸ್ ವಿಭಾಗದ ಸಿಇಒ ಹಾಗೂ ಎಂಡಿ ವೆಂಕಟರಾಮ್ ಮಮಿಲ್ಲಪಲ್ಲೆ ತಿಳಿಸಿದ್ದಾರೆ.

ಆಕರ್ಷಕ ಬೆಲೆಯಲ್ಲಿ ಲಭ್ಯವಿರುವ ಟ್ರೖೆಬರ್, ಕಾರು ಖರೀದಿ ನಿರ್ಧಾರದಲ್ಲಿ ಮೌಲ್ಯ ಪ್ರತಿಪಾದನೆಗೆ ಒತ್ತು ನೀಡುವ ಗ್ರಾಹಕರಿಗೆ ಸೂಕ್ತವಾಗಿದೆ ಎಂದಿದ್ದಾರೆ.

ಟ್ರೖೆಬರ್ ವಿಶೇಷತೆ

1ಆರ್​ಎಕ್ಸ್​ಇ, ಆರ್​ಎಕ್ಸ್​ಎಲ್, ಆರ್​ಎಕ್ಸ್​ಟಿ ಹಾಗೂ ಆರ್​ಎಕ್ಸ್​ಝುಡ್ ನಾಲ್ಕು ಮಾದರಿಗಳಲ್ಲೂ ಗುಣಮಟ್ಟದ ಸಾಧನಗಳನ್ನೊಳಗೊಂಡ 20ಕ್ಕೂ ಅಧಿಕ ವೈಶಿಷ್ಟ್ಯತೆಗಳು.

2ಈಜಿ ಫಿಕ್ಸ್ ಸೀಟುಗಳು, ಎಸ್​ಯುುವಿ ಸ್ಕಿಡ್ ಪ್ಲೇಟ್​ಗಳು, ಎಲ್​ಇಡಿ ಇನ್​ಸ್ಟು›ಮೆಂಟ್ ಕ್ಲಸ್ಟರ್, 2 ಮತ್ತು 3ನೇ ಸಾಲಿನಲ್ಲಿ ಟ್ವಿನ್ ಎಸಿ ದ್ವಾರಗಳು, 182 ಎಂಎಂ ಎತ್ತರದ ಗ್ರೌಂಡ್ ಕ್ಲಿಯರೆನ್ಸ್, 8 ಇಂಚಿನ ಟಚ್​ಸ್ಕ್ರೀನ್ ಮೀಡಿಯಾನಾವ್ ಎವಲ್ಯೂಷನ್ ಸಿಸ್ಟಮ್ ಸೇರಿ 30ಕ್ಕೂ ಅಧಿಕ ಪ್ರಮುಖ ಫೀಚರ್ಸ್.

31.0-ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಸಲ್ಪಟ್ಟ ಟ್ರೖೆಬರ್, ಕಡಿಮೆ ವೆಚ್ಚದ ನಿರ್ವಹಣೆಯಿಂದ ಕಾರ್ಯಕ್ಷಮತೆ ಮತ್ತು ಇಂಧನ ಬಳಕೆಯ ನಡುವೆ ಉತ್ತಮ ಸಮತೋಲನ ಕಾಪಾಡಲಿದೆ.

4ಸುಲಭ ನಿರ್ವಹಣಾ ವೆಚ್ಚದಲ್ಲಿ ಎಕ್ಸ್ ಟೆಂಡೆಡ್ ವಾರಂಟಿ ಪ್ಯಾಕೇಜ್ ಮತ್ತು ವಾರ್ಷಿಕ ನಿರ್ವಹಣೆ ಪ್ಯಾಕೇಜ್​ಗಳೊಂದಿಗೆ ಲಭ್ಯ.

ತಾಂತ್ರಿಕ ವಿಶೇಷತೆ

ಉದ್ದ3,990 ಮಿ.ಮೀ. ಅಗಲ-1,739 ಮಿ.ಮೀ. ಎತ್ತರ-1,643 ಮಿ.ಮೀ. ವ್ಹೀಲ್​ಬೇಸ್-2,636 ಮಿ.ಮೀ. ಖಾಲಿ ಕಾರಿನ ತೂಕ-947 ಕೆ.ಜಿ. ಇಂಜಿನ್ ಟೈಪ್-1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಇಂಜಿನ್. ಡಿಸ್ಪೇಸ್ಮೆಂಟ್-999 ಸಿಸಿ. ಕಾನ್ಪಿಗರೇಷನ್-3 ಸಿಲಿಂಡರ್ಸ್. ಗೇರ್ ಬಾಕ್ಸ್-5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್. ಪವರ್-72. ಪಿಎಸ್ 6250 ಆರ್​ಪಿಎಂ. ಟಾರ್ಕ್- 96ಎನ್​ಎಂ 3500 ಆರ್​ಪಿಎಂ. ಇಂಧನ ದಕ್ಷತೆ-20ಕೆಎಂಪಿಎಲ್. ಗ್ರೌಂಡ್​ ಕ್ಲಿಯರೆನ್ಸ್-182 ಎಂಎಂ. ಫ್ಯುಯೆಲ್ ಟ್ಯಾಂಕ್ ವಾಲ್ಯೂಮ್40 ಲೀಟರ್

Leave a Reply

Your email address will not be published. Required fields are marked *