ರೆನಾಲ್ಟ್ ಹೊಸ ಕಾರುಗಳು ಮಾರುಕಟ್ಟೆಗೆ

ಬೆಂಗಳೂರು: ಭಾರತದ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಅಧಿಪತ್ಯ ಸಾಧಿಸುತ್ತಿರುವ ರೆನಾಲ್ಟ್ ಕಾರು ತಯಾರಿಕಾ ಕಂಪನಿಯು ಅತಿಕಡಿಮೆ ಅವಧಿಯಲ್ಲೇ 5 ಲಕ್ಷ ಕಾರು ಮಾರಾಟ ಮಾಡಿದೆ. ಈ ಹಿನ್ನೆಲೆಯಲ್ಲಿ ರೆನಾಲ್ಟ್ ಸಂಸ್ಥೆಯು ವಿವಿಧ ಶ್ರೇಣಿಯ ಹೊಸ ಡಸ್ಟರ್, ಕ್ಯಾಪ್ಚರ್ ಮತ್ತು ಕ್ವಿಡ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪೆಟ್ರೋಲ್ ಮತ್ತು ಆಟೋಮ್ಯಾಟಿಕ್ ಎಸ್​ಯುುವಿ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಮಾದರಿಯ ವಾಹನಗಳ ಬಿಡುಗಡೆಗೆ ಒತ್ತು ನೀಡಲಾಗಿದೆ. ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಎರಡು ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಡಸ್ಟರ್ ಕಾರು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯಿದೆ. ರೆನಾಲ್ಟ್ ಡಸ್ಟರ್ ಶ್ರೇಣಿ ವಿಸ್ತಾರವಾಗಿದ್ದು, ಡೀಸೆಲ್ ಮ್ಯಾನ್ಯುಯಲ್ (85 ಪಿಎಸ್ ಮತ್ತು 110 ಪಿಎಸ್), ಡೀಸೆಲ್ ಎಎಂಟಿ, ಪೆಟ್ರೋಲ್ ಮ್ಯಾನ್ಯುಯಲ್ ಮತ್ತು ಪೆಟ್ರೋಲ್ ಸಿವಿಟಿ ಮಾದರಿಗಳು ಲಭ್ಯ ಇವೆ.

ರೆನಾಲ್ಟ್ ಹಿನ್ನೆಲೆ: ಫ್ರಾನ್ಸ್ ಮೂಲದ ರೆನಾಲ್ಟ್ ಕಾರು ತಯಾರಿಕ ಕಂಪನಿಯು ಚೆನ್ನೈನಲ್ಲಿ ಉತ್ಪಾದನಾ ಘಟಕ ಹೊಂದಿದೆ. ಪ್ರತಿವರ್ಷ ಆಂದಾಜು 4.80 ಲಕ್ಷ ಕಾರು ತಯಾರಿಸಿ ಮಾರಾಟ ಮಾಡುತ್ತಿದೆ. ದೇಶಾದ್ಯಂತ 350 ಕಾರು ಮಾರಾಟ ಮತ್ತು 264 ಸರ್ವೀಸ್ ಕೇಂದ್ರಗಳನ್ನು ಹೊಂದಿದೆ. ರೆನಾಲ್ಟ್ ಇಂಡಿಯಾ ಉತ್ಪನ್ನಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಗ್ರಾಹಕರನ್ನು ಹೆಚ್ಚಿಸಿ ಕೊಳ್ಳುತ್ತಿದೆ. ಜತೆಗೆ ವರ್ಷದಲ್ಲೇ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ರೆನಾಲ್ಟ್ ತನ್ನದಾಗಿಸಿಕೊಂಡಿದೆ. ವರ್ಷದ ಅತ್ಯುತ್ತಮ ಕಾರು ರೆನಾಲ್ಟ್ ಕ್ವಿಡ್ ಕಾರು ಒಟ್ಟು 32 ಪ್ರಶಸ್ತಿಗಳಿಗೆ ಭಾಜನವಾಗಿವೆ.

ಶೇ.1.5 ದರ ಏರಿಕೆ

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರೆನಾಲ್ಟ್ ಕ್ಯಾಪ್ಟರ್ ಕಾರು ಎಸ್​ಯುುವಿ ವರ್ಗದಲ್ಲೇ ಅತಿಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ. 50ಕ್ಕೂ ಹೆಚ್ಚು ಪ್ರೀಮಿಯಂ ಮತ್ತು ಕ್ಲಾಸ್ ಲೀಡಿಂಗ್ ಫೀಚರ್ ಸೌಲಭ್ಯ ಪಡೆದಿದೆ. ಹೊಸ ಕಾರುಗಳು ಮೈಲೇಜ್​ನಲ್ಲೂ ಉತ್ತಮವಾಗಿವೆ. ಉತ್ಪನ್ನ ಮತ್ತು ವಿದೇಶಿ ವಿನಿಮಯ ದರದಲ್ಲಿ ಏರಿಳಿತವಾಗುತ್ತಿರುವ ಹಿನ್ನೆಲೆಯಲ್ಲಿ 2018ರ ಜನವರಿಂದಲೇ ರೆನಾಲ್ಟ್​ನ ಎಲ್ಲ ಶ್ರೇಣಿಯ ಕಾರುಗಳ ಬೆಲೆ ಶೇ.1.5 ಏರಿಕೆಯಾಗಿದೆ. ಹೊರ ಕಾರುಗಳಿಗೆ 4 ವರ್ಷ ವಾರಂಟಿ ಮತ್ತು 1 ಲಕ್ಷ ಕಿ.ಮೀ.ವರೆಗೆ ಕಾರಿಗೆ ಉಚಿತ ಸರ್ವೀಸ್ ಸೌಲಭ್ಯ ದೊರೆಯುತ್ತದೆ.