ಚಿಕ್ಕೋಡಿ: ಕಾರ್ಗಿಲ್ ವಿಜಯ ಸೈನಿಕರ ತ್ಯಾಗ, ಪರಾಕ್ರಮ ಮತ್ತು ಬಲಿದಾನದ ಮಹತ್ತರ ಅಧ್ಯಾಯವಾಗಿದೆ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಹೇಳಿದರು.
ಪಟ್ಟಣದ ವೀರಯೋಧ ಸ್ಮಾರಕ ಬಳಿ ಮಾಜಿ ಸೈನಿಕರ ಸಮನ್ವಯ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಸಮಾರಂಭದಲ್ಲಿ ಮಾತನಾಡಿ, ಯಾವ ದೇಶ ತನ್ನ ಹುತಾತ್ಮರನ್ನು ಸ್ಮರಿಸುವುದಿಲ್ಲವೋ ಆ ದೇಶಕ್ಕೆ ಭವಿಷ್ಯವಿಲ್ಲ. ಹೋರಾಟ ಮತ್ತು ಶಕ್ತಿ ಶಾಂತಿಯನ್ನು ಕಾಪಾಡಬಲ್ಲದು ಎಂಬುದನ್ನು ಕಾರ್ಗಿಲ್ ವಿಜಯ ನಮಗೆ ತಿಳಿಸಿಕೊಡುತ್ತದೆ ಎಂದರು.
ಅಜಿತ ಸಂಗ್ರೊಳ್ಳಿ, ನಿವೃತ್ತಿ ಮಾನೆ, ರಾಜೇಂದ್ರ ಚೌಗಲೆ, ರಾಜು ಸುಣಗಾರ, ರಮೇಶ ಬಸ್ತವಾಡೆ, ಗುಂಡು ಕುರಾಡೆ, ತಿಪ್ಪಣ್ಣ ಗಾರಗೋಟಿ, ಕಲ್ಲಪ್ಪ ವಠಾರೆ, ಬಸು ಮುರಚಿಟ್ಟೆ, ರಜಾಕ್ ಸುತಾರ, ಸುಭ ಕೋಟಬಾಗಿ ಹಾಗೂ ಮಾಜಿ ಸೈನಿಕರು ಇದ್ದರು.