ಸ್ವಾತಂತ್ರ್ಯ ಹೋರಾಟಕ್ಕೆ, ಪ್ರಧಾನಿಯಾಗಿ ದೇಶಕ್ಕೆ ನೆಹರು ನೀಡಿದ ಕೊಡುಗೆ ಸ್ಮರಿಸುತ್ತೇವೆ: ಮೋದಿ ಟ್ವೀಟ್​

ನವದೆಹಲಿ: ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಹಲವು ನಾಯಕರು ಸ್ಮರಿಸಿದ್ದಾರೆ.

” ರಾಷ್ಟ್ರದ ಮೊಲದ ಪ್ರಧಾನ ಮಂತ್ರಿ ಪಂಡಿತ್​ ಜವಾಹರಲಾಲ್​ ನೆಹರು ಅವರನ್ನು ಅವರ ಜನ್ಮದಿನದ ಈ ದಿವಸ ನೆನೆಯುತ್ತೇವೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ದೇಶದ ಮೊದಲ ಪ್ರಧಾನಿಯಾಗಿ ಅವರು ಭಾರತಕ್ಕೆ ನೀಡಿದ ಕೊಡುಗೆಯನ್ನು ಈ ದಿನ ಸ್ಮರಿಸುತ್ತೇವೆ,” ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರೂ ನೆಹರು ಅವರನ್ನು ಸ್ಮರಿಸಿದ್ದಾರೆ. ” ನಮ್ಮ ದೇಶದ ಮೊದಲ ಪ್ರಧಾನಿಗಳಾದ ಜವಾಹರಲಾಲ್​ ನೆಹರು ಅವರ ಜನ್ಮದಿನವಾದ ಇಂದು ಅವರನ್ನು ಸ್ಮರಿಸುತ್ತೇವೆ,” ಎಂದು ಅವರು ಟ್ವೀಟ್​ ಮಾಡಿದ್ದಾರೆ.