blank

ಒಳ ಮೀಸಲು ನಮೂದಿಸಲು ಹಿಂದೇಟು: ಮಾಜಿ ಮೇಯರ್ ಪುರುಷೋತ್ತಮ

ಮೈಸೂರು: ಜಾತಿ ಜನ ಗಣತಿ ವೇಳೆ ಬಲಗೈ ನವರು ತಮ್ಮ ಒಳ ಮೀಸಲು ನಮೂದಿಸಲು ಹಿಂದೇಟು ಹಾಕಿ ಅಸಹಕಾರ ತೋರುತ್ತಿದ್ದಾರೆ. ಇದರಿಂದ ಮುಂದೆ ಜನಾಂಗ ಸೌಲಭ್ಯ ವಂಚಿತವಾಗಬಹುದು ಎಂದು ಮಾಜಿ ಮೇಯರ್ ಪುರುಷೋತ್ತಮ ಹೇಳಿದರು.
ಒಳ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ. ಆದರೆ ಬಲಗೈ ಸಮುದಾಯ ಜಾತಿ ಬರೆಯಿಸಲು ಹಿಂದೇಟು ಹಾಕುತ್ತಿದ್ದಾರೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ ಎಂದು ಹೇಳಿದರು.
ಇದಲ್ಲದೇ ಪಡಿತರ ಕಾರ್ಡ್‌ನಲ್ಲಿ ಹೆಸರು ಇಲ್ಲದವರನ್ನು ಕೈ ಬಿಡಲಾಗುತ್ತಿದೆ. ಹಾಗಾಗಿ ಪಡಿತರದಲ್ಲಿ ಹೆಸರು ಇಲ್ಲದಿದ್ದರೂ ಮದುವೆಯಾಗಿ ಬಂದವರು, ಹೆಸರು ಬಿಟ್ಟು ಹೋದವರ, ಕೆಲಸಕ್ಕಾಗಿ ವಲಸೆ ಹೋದವರ ಹೆಸರನ್ನು ಗಣತಿಯಲ್ಲಿ ಸೇರಿಸಬೇಕು ಎಂದು ಕೋರಿದರು.
ಸಮೀಕ್ಷೆಗೆ ಬಂದವರು ಕೂಡ ಇದನ್ನು ದಾಖಲಿಸುತ್ತಿಲ್ಲ. ಹೀಗಾಗಿ ಸಮುದಾಯದ ನಿಖರ ಜನಸಂಖ್ಯೆ ಮಾಹಿತಿ ದೊರೆಯವುದಿಲ್ಲ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧರಿಸಿ ಮೀಸಲಾತಿ ಸೌಲಭ್ಯ ನೀಡಬೇಕಾಗಿ ಬಂದಾಗ ಸೌಲಭ್ಯ ವಂಚಿತರಾಗಬೇಕಾಗುತ್ತದೆ ಎಂದರು
ಇದಲ್ಲದೆ ಸಮೀಕ್ಷೆ ನಡೆಸುವವರಿಗೆ ಸರ್ಕಾರ ಮೊದಲೇ ಸೂಕ್ತ ತರಬೇತಿ ಸಹ ನೀಡದೇ ಕೆಲಸಕ್ಕೆ ನಿಯೋಜಿಸಿದೆ. ಇದರಿಂದಾಗಿ ಹಲವೆಡೆ ಸಮರ್ಪಕವಾಗಿ ನಡೆದಿಲ್ಲ. ಇಂತಹ ಲೋಪಗಳನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡ ಸೋಮಯ್ಯ ಮಲೆಯೂರು, ಇತರರು ಇದ್ದರು.

Share This Article

ಚಿಕ್ಕ ಮಕ್ಕಳು ಹಗಲಲ್ಲಿ ಅಧಿಕ ನಿದ್ರಿಸಲು ಇದೇ ಕಾರಣವಂತೆ! ವೈದ್ಯರು ಹೇಳೊದೇನು? | Children Sleep

Children Sleep: ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ, ಮಕ್ಕಳು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಎಚ್ಚರಗೊಳ್ಳುತ್ತಾರೆ…

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…