ಭಾಷಾ ಅಧ್ಯಯನ ಕೇಂದ್ರ ಧಾರವಾಡಕ್ಕೆ ಸ್ಥಳಾಂತರಿಸಿ

blank

ನರಗುಂದ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ಸುದೀರ್ಘ 12 ವರ್ಷಗಳು ಗತಿಸಿವೆ. ಮೈಸೂರಿನಲ್ಲಿರುವ ಭಾಷಾ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ರಾಜ್ಯದ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದು ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರ ವರ್ತಲದಲ್ಲಿ ತಾಲೂಕಾಡಳಿತ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಿತ್ಯೋತ್ಸವವನ್ನಾಗಿ ಆಚರಣೆ ಮಾಡಬೇಕು. ಏಕೀಕರಣಕ್ಕೆ ಶ್ರಮಿಸಿರುವ ಎಲ್ಲ ಮಹನೀಯರನ್ನು ಸ್ಮರಿಸುವಂತಾಗಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆಯಾಗಬೇಕು ಎಂದರು.

ಉಪನ್ಯಾಸಕ ಎಸ್.ಜಿ. ಮಣ್ಣೂರಮಠ ಮಾತನಾಡಿ, ಕನ್ನಡಕ್ಕಾಗಿ ನಾಡಿನ ಅನೇಕ ಶರಣರು, ಸಂತರು, ಸಾಹಿತಿಗಳು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ವೈವಿಧ್ಯಮಯ ಸಾಹಿತ್ಯವನ್ನು ಕನ್ನಡ ಭಾಷೆ ಹೊಂದಿರುವುದರಿಂದ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ರಾಜಾರಾಂ ಹಾಗೂ ಸರೋಜಿನಿ ಮಹಿಷಿಯವರ ವರದಿಯಂತೆ ಸರ್ಕಾರವು ಕನ್ನಡ ಭಾಷಾ ಕಲಿಕೆಯನ್ನು 1 ರಿಂದ 7ನೇ ತರಗತಿವರೆಗೆ ಕಡ್ಡಾಯಗೊಳಿಸಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ. 25ರಷ್ಟು ಮೀಸಲಾತಿ ನೀಡಬೇಕು. ಕನ್ನಡ ಭಾಷೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿರುವ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಹುಯಿಲಗೋಳ ನಾರಾಯಣರಾವ್ ಅವರನ್ನು ಸರ್ಕಾರ ಸ್ಮರಿಸುವಂತಾಗಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಎ.ಎಚ್.ಮಹೇಂದ್ರ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ಎಎಸ್​ಐ ವಿ.ಜಿ. ಪವಾರ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ನಭೀಸಾಬ ಕಿಲ್ಲೇದಾರ, ರವಿ ಚಿಂತಾಲ, ಚನ್ನಬಸಪ್ಪ ಕಂಠಿ, ಮಂಗಳ ಪಾಟೀಲ, ಶಿಕ್ಷಕ ಅರವಿಂದ ಮೇಗೂರ, ಮುತ್ತು ರಾಯರಡ್ಡಿ, ಕನ್ನಡ ರಕ್ಷಣಾ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ಎಸ್.ಎಂ. ಮರಿಗೌಡ್ರ, ಆನಂದ ಬನಪ್ಪನವರ, ವೈ.ಪಿ. ಕೊಣ್ಣೂರ, ಎಂ.ಎಚ್. ಚೂರಿ, ಎಚ್.ಎಸ್. ದಾಸರ, ಲಕ್ಷ್ಮೀಬಾಯಿ ಗಾಯಕವಾಡ, ಚನ್ನು ನಂದಿ, ಹನುಮಂತ ಮಜ್ಜಿಗುಡ್ಡ, ಮಾಲಾ ಪಾಟೀಲ, ವೀರೇಶ ರೋಣದ, ಉಪಸ್ಥಿತರಿದ್ದರು.

Share This Article

ಬೇಸಿಗೆಯ ಆರೋಗ್ಯಕ್ಕಾಗಿ ಇವುಗಳಿಗೆ ವಿದಾಯ ಹೇಳಿ! ಇಲ್ಲದಿದ್ದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ Summer Foods

Summer Foods : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದ್ದರಿಂದ ದೇಹವನ್ನು…

ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನೆಯ ಶಾಂತಿ, ನೆಮ್ಮದಿ ಕೆಡಿಸುತ್ತವೆ! ಹುಷಾರ್​…Vastu Tips

Vastu Tips:  ನಮ್ಮ ದೈನಂದಿನ ಅಭ್ಯಾಸಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಹ ನಮ್ಮ ಮನೆಯ ವಾಸ್ತುಗೆ…

ರಾತ್ರಿ ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಇಂದೇ ಈ ಅಭ್ಯಾಸ ಬಿಟ್ಟು ಬಿಡಿ.. Sleeping Disorder

Sleeping Disorder : ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೆಲವರಿಗೆ  ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಇರುತ್ತದೆ.…