ಸೆ. 5ರಿಂದ ಜಿಯೋ ಗಿಗಾಫೈಬರ್ ಸೇವೆ ಆರಂಭ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್​ನ ಅಧ್ಯಕ್ಷ ಮುಕೇಶ್ ಅಂಬಾನಿ ಸೋಮವಾರ ಕಂಪನಿಯ ವಾರ್ಷಿಕ ಸಭೆ ನಡೆಸಿದ್ದು, ಹಲವು ಯೋಜನೆಗಳ ಘೋಷಣೆ ಮಾಡಿದ್ದಾರೆ. ಬ್ರಾಡ್​ಬ್ಯಾಂಡ್ ಸರ್ವೀಸ್ ಜಿಯೋ ಗಿಗಾ ಫೈಬರ್​ಗೆ ಸೆಪ್ಟೆಂಬರ್ 5ರಂದು ಅಧಿಕೃತ ಚಾಲನೆ ಸಿಗಲಿದೆ ಎಂದು ಅವರು ಘೋಷಿಸಿದ್ದಾರೆ. ಇದರ ಜತೆಗೆ ಮಿಕ್ಸ್

ಡ್ ರಿಯಾಲಿಟಿ, ಸೆಟ್ ಟಾಪ್ ಬಾಕ್ಸ್ ಮುಂತಾದ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ರಿಲಯನ್ಸ್ ಜಿಯೋ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, ಪ್ರತಿ ತಿಂಗಳು 1 ಕೋಟಿ ಗ್ರಾಹಕರು ಸೇರ್ಪಡೆಯಾಗುತ್ತಿದ್ದಾರೆ. ಕನೆಕ್ಟಿವಿಟಿಗಾಗಿ ನಾಲ್ಕು ಹೊಸ ಇಂಜಿನ್ ಆರಂಭಿಸಲಾಗುತ್ತಿದೆ ಎಂದೂ ತಿಳಿಸಿದರು.

ಜಿಯೋ ಗಿಗಾಫೈಬರ್: ಸೆ. 5ರಂದು ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಜಿಯೋ ಗಿಗಾಫೈಬರ್​ನ ಪ್ಲಾನ್ 700 ರೂ.ನಿಂದ ಆರಂಭವಾಗಿ 10,000 ರೂ.ವರೆಗೂ ಇರಲಿದೆ. ಗಿಗಾಫೈಬರ್​ನ ಬೇಸಿಕ್ ಪ್ಲಾನ್ ಸ್ಟೀಡ್ 100 ಎಂಬಿಪಿಎಸ್ ಆಗಿರಲಿದೆ. ಇದರ ಪ್ರೀಮಿಯಂ ಹೆಚ್ಚುತ್ತ ಹೋದಂತೆ ಡೇಟಾ ಸ್ಪೀಡ್ ಕೂಡ ಹೆಚ್ಚಾಗಲಿದ್ದು, 1 ಜಿಬಿಪಿಎಸ್​ವರೆಗೂ ಏರಿಕೆಯಾಗಲಿದೆ. ಸದ್ಯ ಭಾರತದಲ್ಲಿರುವ ಫಿಕ್ಸ್್ಡ ಬ್ರಾಡ್​ಬ್ಯಾಂಡ್ ಕನೆಕ್ಷನ್​ನ ಡೌನ್​ಲೋಡ್ ವೇಗ 26.46 ಎಂಬಿಪಿಎಸ್ ಆಗಿದ್ದರೆ, ಅಪ್​ಲೋಡ್ ವೇಗ 21.91 ಎಂಬಿಪಿಎಸ್ ಆಗಿದೆ.

ಮಿಕ್ಸ್ ್ಡ ರಿಯಾಲಿಟಿ

ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಮಿಕ್ಸ್ ್ಡ ರಿಯಾಲಿಟಿ ಡಿವೈಸ್​ನ್ನು ಪರಿಚಯಿಸಿದರು. ಇದನ್ನು ಕಂಪನಿಯ ಎಂಆರ್ ಲ್ಯಾಬ್​ನಲ್ಲಿ ಅಭಿವೃದ್ಧಿಪಡಿಸ ಲಾಗಿದ್ದು, ಇದರಿಂದ ಮನರಂಜನೆ ಅನುಭವ ಉತ್ತಮವಾಗಲಿದೆ ಎಂದು ಕಂಪನಿ ಹೇಳಿದೆ.

ಅತಿದೊಡ್ಡ ವಿದೇಶಿ ಹೂಡಿಕೆ

ಸೌದಿ ಅರಬ್​ನ ಸರ್ಕಾರಿ ತೈಲ ಕಂಪನಿ ಸೌದಿ ಅರ್​ವುಕೋಗೆ ರಿಲಯನ್ಸ್​ನ ಒ2ಸಿಯ ಶೇ. 20 ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ರಿಲಯನ್ಸ್ ಇತಿಹಾಸದಲ್ಲೇ ಅತಿದೊಡ್ಡ ವಿದೇಶಿ ಹೂಡಿಕೆ ಇದಾಗಿದೆ. ಎರಡು ಕಂಪನಿಗಳ ನಡುವೆ 5.3 ಲಕ್ಷ ಕೋಟಿ ರೂ.ಗಳ ಒಪ್ಪಂದ ನಡೆಯಲಿದೆ. ಸೌದಿ ಅರ್​ವುಕೋ ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿದೆ.

ಜಮ್ಮುವಿನಲ್ಲಿ ಹೂಡಿಕೆ

ಜಮ್ಮು- ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ರಿಲಯನ್ಸ್ ಗ್ರೂಪ್ ಚಿಂತನೆ ನಡೆಸಿದೆ. ಇದಕ್ಕಾಗಿಯೇ ವಿಶೇಷ ಕಾರ್ಯಪಡೆ ರೂಪಿಸಲಿದ್ದು, ಅದರ ಅಧ್ಯಯನವನ್ನು ಆಧರಿಸಿ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎನ್ನುವ ಬಗ್ಗೆ ನಿರ್ಧರಿಸಲಾಗುವುದೆಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ಹೇಳಿದ್ದಾರೆ.

ಉಚಿತ ಎಲ್​ಇಡಿ ಟಿವಿ

ಜಿಯೋ ಗಿಗಾಫೈಬರ್​ನ ವಾರ್ಷಿಕ ಪ್ಯಾಕೇಜ್ ತೆಗೆದುಕೊಳ್ಳುವವರಿಗೆ ಎಚ್​ಡಿ/4ಕೆ ಎಲ್​ಇಡಿ ಟೆಲಿವಿಷನ್ ಸೆಟ್ ಮತ್ತು 4ಕೆ ಸೆಟ್​ಆಪ್ ಬಾಕ್ಸ್ ಉಚಿತವಾಗಿ ಸಿಗಲಿದೆ. ಇದರ ಬೇಸಿಕ್ ಪ್ಯಾಕೇಜ್ ಹಾಕಿಕೊಳ್ಳುವವರಿಗೆ ಜೀವಿತಾವಧಿಯ ಫ್ರೀ ವಾಯ್್ಸ ಕಾಲ್, ಹೈಸ್ಪೀಡ್ ಇಂಟರ್ನೆಟ್, ಫ್ರಿ ಎಚ್​ಡಿ ಟಿವಿ ಮತ್ತು ಸೆಟ್​ಅಪ್ ಬಾಕ್ಸ್ ಸಿಗಲಿದೆ. ಬಳಕೆದಾರರು ಡೇಟಾಗೆ ಹಣ ಪಾವತಿ ಮಾಡಬೇಕೇ ವಿನಃ ವಾಯ್್ಸ ಕಾಲ್ ಉಚಿತವಾಗಿ ಇರಲಿದೆ. ಸೆಟ್​ಆಪ್ ಬಾಕ್ಸ್​ನಿಂದ ವಿಡಿಯೋ ಕಾಲ್ ಮಾಡುವ ಅವಕಾಶವೂ ಇರಲಿದೆ. ಗಿಗಾಫೈಬರ್ ಮೂಲಕ ಹೊಸ ಚಿತ್ರಗಳ ರಿಲೀಸ್ ಕೂಡ ನಡೆಯಲಿದ್ದು, ಮನೆಯಲ್ಲಿದ್ದುಕೊಂಡೆ ‘ಫಸ್ಟ್ ಡೇ ಫಸ್ಟ್ ಶೋ’ ನೋಡಬಹುದು. ಈ ಸೇವೆ 2020ರ ಮಧ್ಯಂತರದಲ್ಲಿ ಆರಂಭವಾಗಲಿದೆ.

Leave a Reply

Your email address will not be published. Required fields are marked *