ಬೃಹತ್ ಭಾವೈಕ್ಯ ಪಾದಯಾತ್ರೆ

ಬೀದರ್: ರೇಕುಳಗಿಯ ಶ್ರೀ ಶಂಭುಲಿಂಗೇಶ್ವರ ಹಾಗೂ ತಾಯಿ ಬಸಮ್ಮ ಅವರ 82ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಶುಕ್ರವಾರ ಔರಾದ್ ಸಿರ್ಸಿಯಿಂದ ರೇಕುಳಗಿವರೆಗೆ ಎನ್.ಬಿ.ರಡ್ಡಿ ಗುರೂಜಿ ನೇತೃತ್ವದಲ್ಲಿ ಬೃಹತ್ ಭಾವೈಕ್ಯ ಪಾದಯಾತ್ರೆ ಜರುಗಿತು.
ಗುರೂಜಿ ಅವರು ಶಂಭುಲಿಂಗೇಶ್ವರ ಮತ್ತು ತಾಯಿ ಬಸಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಲ್ಲಕ್ಕಿ ಮೆರವಣಿಗೆ ಮತ್ತು ಪಾದಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯು ಬಗದಲ್, ಬಾಪುರ, ಮನ್ನಾಎಖೇಳ್ಳಿ ಮೂಲಕ ರೇಕುಳಗಿ ಮಂದಿರಕ್ಕೆ ಬಂದು ಕೊನೆಗೊಂಡಿತು. ಪಾದಯಾತ್ರೆಯುದ್ದಕ್ಕೂ ಭಕ್ತರು ಭಜನೆ, ಕೀರ್ತನೆ ಮಾಡಿ ಭಕ್ತಿಭಾವ ಮೆರೆದರು. ಮಹಿಳೆಯರು ಹಾಡು ಹಾಡುತ್ತ ಸಾಗಿದರೆ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು. ಭಕ್ತರಿಗೆ ಅಲ್ಲಲ್ಲಿ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟಾಕಿ ಸುಡುತ್ತ ಶಂಭುಲಿಂಗೇಶ್ವರರ ಜೈಕಾರ ಹಾಕುತ್ತ ಸಹಸ್ರಾರು ಭಕ್ತರು ಹರ್ಷೋಲ್ಲಾಸದಿಂದ ಭಾಗವಹಿಸಿದ್ದರು.
ನಂತರ ಗುರೂಜಿ ನೇತೃತ್ವದಲ್ಲಿ ದೇವಸ್ಥಾನ ಗರ್ಭ ಗುಡಿಯಲ್ಲಿರುವ ಗದ್ದುಗೆಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿತು. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು, ಗಣ್ಯರು ದೇವರ ಮತ್ತು ಗುರೂಜಿ ದರ್ಶನ ಪಡೆದರು. 

ಸಂಭ್ರಮದ ಪುಣ್ಯ ಸ್ಮರಣೋತ್ಸವ: ರೇಕುಳಗಿಯಲ್ಲಿ ಶುಕ್ರವಾರ ಪವಾಡಪುರುಷ ಶ್ರೀ ಶಂಭುಲಿಂಗೇಶ್ವರ ಹಾಗೂ ಬಸಮ್ಮ ತಾಯಿ ಅವರ 82ನೇ ಪುಣ್ಯಸ್ಮರಣೆ ಸಂಭ್ರಮದಿಂದ ಜರುಗಿತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ನಡೆದವು. ಪ್ರವಚನ, ಭಜನೆ ಹಾಗೂ ಪ್ರಸಾದ ದಾಸೋಹ ಜರುಗಿದವು. ಅಪಾರ ಭಕ್ತರು ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿದರು. ದರ್ಶನಕ್ಕಾಗಿ ಆಗಮಿಸಿದ ಹಲವಾರು ಗಣ್ಯರು ಹಾಗೂ ಅಧಿಕಾರಿಗಳನ್ನು ದೇವಸ್ಥಾನ ಕಮಿಟಿ ಸತ್ಕರಿಸಿತು. ಅಲ್ಲದೆ ಗುರೂಜಿ ನೇತೃತ್ವದ ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು.

ಪಾದಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಪ್ರಸಕ್ತ ಯಾತ್ರೆಯಲ್ಲಿ ದೇಶದ ನಾನಾ ರಾಜ್ಯಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದು ವಿಶೇಷ. ಶಂಭುಲಿಂಗೇಶ್ವರ ನಂಬಿದವರ ಕೈ ಬಿಡುವುದಿಲ್ಲ. ಇವರು ಸಂಕಷ್ಟ ನಿವಾರಕ.
|ಎನ್.ಬಿ. ರಡ್ಡಿ ಗುರೂ

Leave a Reply

Your email address will not be published. Required fields are marked *