ಬಾಗೂರು: ಬಾಗೂರು ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್ ಕಾರ್ಡ್, ಬಯೋಮೆಟ್ರಿಕ್ ನೀಡಿ ರೈತರು ನೋಂದಣಿ ಮಾಡಿಸಿಕೊಳ್ಳಿ ಎಂದು ಬಾಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಚ್.ಶಿವಣ್ಣ ತಿಳಿಸಿದರು.
ಬಾಗೂರು ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರಾಗಿ ಖರೀದಿ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು, 1 ಎಕರೆ ಪಹಣಿ ಹೊಂದಿರುವ ರೈತರಿಂದ 10 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ಜ.2ರಿಂದ ಮಾರ್ಚ್ 31ರವರೆಗೆ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಬಸವರಾಜ್, ರೈತ ಸಂಪರ್ಕ ಕೇಂದ್ರದ ರಜನಿ, ವೀಣಾ, ಇತರರು ಹಾಜರಿದ್ದರು.
TAGGED:ರಾಗಿ ಖರೀದಿ ನೋಂದಣಿಗೆ ಚಾಲನೆ