More

    ಬರವಿದ್ದರೂ ಸಾಲು ಹಬ್ಬಗಳ ಆಚರಣೆ

    ಕೊಂಡ್ಲಹಳ್ಳಿ: ಸತತ ಮಳೆಯ ಅಭಾವದಲ್ಲೂ ಕೊಂಡ್ಲಹಳ್ಳಿ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದಲೂ ಹಬ್ಬದ ವಾತಾವರಣವಿದೆ.

    ಸೋಮವಾರ ನಾಗರಪಂಚಮಿ, ಮಂಗಳವಾರ ಗೌರಸಮುದ್ರದ ಮಾರಮ್ಮದೇವಿ ಜಾತ್ರೆ, ಬುಧವಾರ ಕೋನಸಾಗರ, ಮಾರಮ್ಮನಹಳ್ಳಿ, ಬಿ.ಜಿ.ಕೆರೆ, ಮೊಗಲಹಳ್ಳಿ, ಓಬಣ್ಣನಹಳ್ಳಿ ಗ್ರಾಮಗಳಲ್ಲಿ ದೇವಿ ಆಚರಣೆ ನಡೆಯುತ್ತಿದೆ.

    ಗೌರಸಮುದ್ರದ ಮಾರಮ್ಮ ದೇವಿ ಜಾತ್ರೆಯ ಮಾರನೆಯ ದಿನದಿಂದ ಸುತ್ತಮುತ್ತಲ ಗ್ರಾಮಗಳ ಮಾರಿ ಹಬ್ಬ ಶುರುವಾಗಲಿದೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

    ಗುರುವಾರ ಕೊಂಡ್ಲಹಳ್ಳಿಯ ಮಾರಮ್ಮನ ಜಾತ್ರಾ ಮಹೋತ್ಸವ ನಡೆಯಿತು. ಶ್ರೀಮಾರಿ ಮಹೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನ ದೇವಸ್ಥಾನಕ್ಕೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು.

    ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಅಮ್ಮನಿಗೆ ತುಲಾಭಾರ ಸೇರಿ ವಿವಿಧ ಹರಕೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts