ನಿರಾಶ್ರಿತರ ವಸತಿ ಸಮಸ್ಯೆಗೆ ಶೀಘ್ರ ಪರಿಹಾರ : ಚಳ್ಳಕೆರೆ ತಹಸೀಲ್ದಾರ್‌ಗೆ ಎಡಿಸಿ ಕುಮಾರಸ್ವಾಮಿ ಸೂಚನೆ

ಚಳ್ಳಕೆರೆ: ಗಂಜಿಗುಂಟೆ ಗ್ರಾಮದ ನಿರಾಶ್ರಿತರ ವಸತಿ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ತಹಸೀಲ್ದಾರ್ ರೆಹಾನ್ ಪಾಷಾಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಮಾತನಾಡಿದರು. ಎಡಿಸಿ ಅವರ ಬಳಿ ಅಳಲು ತೋಡಿಕೊಂಡ ನಿರಾಶ್ರಿತರು, ಒಂದು ಕುಟುಂಬದಲ್ಲಿ ಎರಡು-ಮೂರು ಸಂಸಾರಗಳು ಒಟ್ಟಿಗೆ ಜೀವನ ಮಾಡುವ ಪರಿಸ್ಥಿತಿ ಇದೆ. ಕಳೆದ 10 ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಗ್ರಾಮ ಸಮೀಪದಲ್ಲಿ ಆಶ್ರಯ ನಿವೇಶನಕ್ಕೆ 5 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಆದರೆ, ಇತರ ಸಮುದಾಯಗಳ ಸಮನ್ವಯತೆಯಲ್ಲಿ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಅಧಿಕೃತ ಹಕ್ಕುಪತ್ರ ವಿತರಣೆ ಮಾಡಬೇಕು. ಶಾಸಕ ಟಿ.ರಘುಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿದರು.

ಎಡಿಸಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಎಂಟು ದಿನಗಳ ಕಾಲಾವಧಿಯಲ್ಲಿ ವಸತಿ ಸೌಕರ್ಯ ಸಮಸ್ಯೆ ಬಗೆಹರಿಸಲಾಗುವುದು. ಧರಣಿಯನ್ನು ಹಿಂಪಡೆಯಿರಿ ಎಂದು ಮನವೊಲಿಸಿದರು.

2017ರಲ್ಲಿ ನಿವೇಶನಕ್ಕಾಗಿ ಭೂಮಿಯನ್ನು ಮಂಜೂರಾತಿ ಮಾಡಿ ತಾಲೂಕು ಪಂಚಾಯಿತಿ ಇಒ ಅವರ ಸುಪರ್ದಿಗೆ ನೀಡಲಾಗಿದೆ. ಇದನ್ನು ವಸತಿ ಸೌಕರ್ಯಕ್ಕೆ ಪರಿವರ್ತನೆ ಮಾಡಲು ಕ್ರಮ ವಹಿಸಬೇಕು. ಒಂದು ವೇಳೆ ಯಾರಾದರೂ ಮನೆ ಕಟ್ಟಿಕೊಂಡಿದ್ದಲ್ಲಿ 20/30 ಅಳತೆ ಹೊರತುಪಡಿಸಿ, ಉಳಿದ ಜಮೀನನ್ನು ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಭೂಮಿ ಅತಿಕ್ರಮಣ ಮಾಡಿದ್ದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನ್ಯಾಯ, ತಾರತಮ್ಯ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಬೇಕು, ಸ್ಥಳೀಯ ಗ್ರಾಪಂ ವತಿಯಿಂದ ವಸತಿ ಸೌಕರ್ಯಕ್ಕೆ ಅರ್ಹರಿಂದ ಅರ್ಜಿ ಸ್ವೀಕಾರ ಮಾಡಬೇಕು, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಸೌಕರ್ಯಕ್ಕೆ ಕಲ್ಪಿಸಲು ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರ್ ರೆಹಾನ್ ಪಾಷಾ, ತಾಪಂ ಇಒ ಎಚ್.ಶಶಿಧರ್ ಅವರಿಗೆ ಸೂಚಿಸಿದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…