More

  ಹಾಸ್ಟೆಲ್ ಅಡುಗೆ ಸಿಬ್ಬಂದಿಗೆ ಪುನಶ್ಚೇತನ ಕಾರ್ಯಾಗಾರ

  ಮೈಸೂರು: ಹಾಸ್ಟೆಲ್‌ನಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರ ಜತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಅವರು ಅಡುಗೆ ಸಿಬ್ಬಂದಿಗೆ ಸೂಚಿಸಿದರು.
  ರಾಘವೇಂದ್ರ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ಹಾಸ್ಟೆಲ್‌ನಲ್ಲಿ ಅಡುಗೆ ಸಿಬ್ಬಂದಿಗೆ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
  ಇಲಾಖೆಯಿಂದ ಬರುವ ಧಾನ್ಯ, ತರಕಾರಿಗಳನ್ನು ಅಡುಗೆ ಸಿಬ್ಬಂದಿ ಸ್ವಚ್ಛಗೊಳಿಸಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಊಟ ನೀಡಬೇಕು. ಸಂಪು ಮತ್ತು ವಾಟರ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಸರಿಯಾದ ಸಮಯಕ್ಕೆ ಹಾಸ್ಟೆಲ್‌ಗೆ ಬರಬೇಕು ಎಂದು ತಿಳಿಸಿದರು.
  ತಾಲೂಕು ಕಲ್ಯಾಣಾಧಿಕಾರಿ ವಿಶ್ವನಾಥ್, ವಿಸ್ತರಣಾಧಿಕಾರಿ ಸತೀಶ್, ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ, ಕೆ.ಸಿ.ಮಂಜುಳಾ, ಮಲ್ಲಣ್ಣ, ವಿವಿಧ ನಿಲಯ ಪಾಲಕರಾದ ಪರಶುರಾಂ, ಜಗದೀಶ್ ಕೋರಿ, ಯಶವಂತ್, ರಮ್ಯಾ, ಪೂರ್ಣಿಮಾ, ತೇಜಸ್ವಿನಿ, ಭಾಗ್ಯಲಕ್ಷ್ಮೀ, ಸುಶೀಲಮ್ಮ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts