25.7 C
Bangalore
Sunday, December 15, 2019

ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ

Latest News

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

ಉಡುಪಿ: ತುಳು ಭಾಷಿಗ ತುಳು ಶಿವಳ್ಳಿ ಬ್ರಾಹ್ಮಣರು ಮಾತೃಭಾಷೆ ಮರೆಯುತ್ತಿದ್ದಾರೆ. ಅದು ಸಲ್ಲದು. ನಮ್ಮ ಸಂಸ್ಕೃತಿ-ಸಂಸ್ಕಾರಗಳ ಉಳಿವಿಗಾಗಿ ಶ್ರಮಿಸುವುದು ಗಾಯತ್ರಿ ಮಂತ್ರವನ್ನು ನಿತ್ಯವೂ...

ಕ್ರಿಕೆಟ್ ಪಂದ್ಯಾವಳಿ, ಡಿಎಆರ್ ಮೈದಾನದಲ್ಲಿ ಲಾಠಿಗೆ ಮಣಿದ ಲೇಖನಿ

ಬಳ್ಳಾರಿ: ಪೊಲೀಸ್ ವಾರ್ಷಿಕ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ಭಾನುವಾರ ಪೊಲೀಸರು ಮತ್ತು ಪತ್ರಕರ್ತರ ಮಧ್ಯೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ...

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಉಹಾಪೋಹ – ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಜಿಸಲಾಗುತ್ತಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಮುಂದಿನ ಸಚಿವ ಸಂಪುಟದ ವಿಸ್ತರಣೆ, ಬದಲಾವಣೆಯನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು...

ಎನ್.ಆರ್.ಪುರ: ತಾಲೂಕಿನಲ್ಲಿ ಹಿಂದೆಂದೂ ಕಾಣದಂತಹ ನೆರೆ ಬಂದು ಹಲವಾರು ಮನೆಗಳಿಗೆ ನೀರು ನುಗ್ಗಿ ಹಾನಿಗೊಂಡಿವೆ. ನೆರೆ ಬಂದಾಗ ಗದ್ದೆಗಳಲ್ಲಿ ಮರಳು ತುಂಬಿ ಹಾಳಾಗಿವೆ. ಆದರೆ ಬೆಳೆ ಹಾನಿ, ಮನೆ ಹಾನಿಯಾದ ಸಂತ್ರಸ್ತರಿಗೆ ಸರ್ಕಾರದಿಂದ ಸಿಕ್ಕಿರುವುದು ಬಿಡಿಗಾಸು.

ತಾಲೂಕಿನ ಕಸಬಾ ಹೋಬಳಿಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವುದೇ ಹೆಚ್ಚು. ಬಾಳೆಹೊನ್ನೂರು ಹೋಬಳಿಯ ಮಾಗುಂಡಿ ಗ್ರಾಪಂ ವ್ಯಾಪ್ತಿಯ ಮಹಲ್ಗೋಡಿನಲ್ಲಿ ಪ್ರವಾಹಕ್ಕೆ ಮನೆಗಳು ಜಲಾವೃತಗೊಂಡಿದ್ದವು. ಹೊಸದಾಗಿ ಮನೆಗಳನ್ನು ನಿರ್ವಿುಸುವುದಿರಲಿ ಹಾನಿಗೊಳಗಾದ ಮನೆ ಸಾಮಗ್ರಿಗಳನ್ನು ಇನ್ನೂ ತೆರವುಗೊಳಿಸಿಲ್ಲ. ಪ್ರತಿ ವರ್ಷ ಈ ಭಾಗದ ಸೇತುವೆಗಳ ಮೇಲೆ ನೀರು ಹರಿದು ಕೆಲ ಗಂಟೆಗಳ ಬಳಿಕ ಮಳೆ ಕಡಿಮೆಯಾದಾಗ ಸಂಚಾರಕ್ಕೆ ತೆರವಾಗುತ್ತಿತ್ತು. ಮನೆಯ ಛಾವಣಿ ಹಂತದವರೆಗೆ ಜಲಾವೃತಗೊಂಡಿರುವುದು ಇದೇ ಮೊದಲು ಎನ್ನ್ನುತ್ತಾರೆ ಮಾಗುಂಡಿ ಗ್ರಾಪಂ ಅಧ್ಯಕ್ಷ ಅಬ್ದುಲ್ ವಹೀದ್ ಅಹಮ್ಮದ್.

ತಾಲೂಕಿನಲ್ಲಿ ಪ್ರವಾಹದ ವೇಳೆ 215 ಮನೆಗಳು ಹಾನಿಗೊಂಡಿವೆ. 167 ಮನೆಗಳು ಹಾನಿಗೊಂಡಿರುವುದಾಗಿ ದಾಖಲಿಸಲಾಗಿದೆ. ಸೆಪ್ಟೆಂಬರ್​ನಿಂದ ಅಕ್ಟೋಬರ್​ವರೆಗೆ 35 ಮನೆಗಳು ಹಾನಿಯಾಗಿವೆ. 35 ಲಕ್ಷ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಪಡಿತರ ಚೀಟಿ ಒದಗಿಸದ ಕಾರಣ 13 ಮನೆಗಳನ್ನು ದಾಖಲೆಯಲ್ಲಿ ನಮೂದಿಸಿಲ್ಲ. 45 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. 57 ಮನೆಗಳು ಶೇ.25 ರಿಂದ ಶೇ.75ರಷ್ಟು ಹಾನಿಯಾಗಿವೆ. ಇವುಗಳಿಗೆ 14 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನುಳಿದಂತೆ 43 ಮನೆಗಳು ಶೇ.15 ರಿಂದ ಶೇ.20 ರಷ್ಟು ಹಾನಿಯಾಗಿವೆ. ಇವುಗಳಿಗೆ 10.75 ಲಕ್ಷ ರೂ. ಬಿಡುಗಡೆಯಾಗಿದೆ. ಸಂಪೂರ್ಣ ಮನೆ ಹಾನಿಯಾಗಿರುವ 45 ಮನೆಗಳಿಗೆ 45 ಲಕ್ಷ ರೂ. ಬಿಡುಗಡೆಯಾಗಿದೆ.

ಮಾಳೂರುದಿಣ್ಣೆ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಓರ್ವ ಮೃತಪಟ್ಟಿದ್ದು, ಮೆಸ್ಕಾಂನಿಂದ ಪರಿಹಾರ ಧನ ವಿತರಿಸಲಾಗಿದೆ. ಇನ್ನು 250 ಹೆಕ್ಟೇರ್ ಪ್ರದೇಶದ ಭತ್ತ ಹಾನಿಯಾಗಿದೆ. ಪರಿಹಾರ ಧನ ಸರ್ಕಾರದಿಂದಲೇ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಹೀಗಾಗಿ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳಿಗೆ ತಿಳಿದಿಲ್ಲ.

ಅಡಕೆ ಬೆಳೆ ನಾಶವಾಗಿರುವುದರಿಂದ ಅವರು ನೀಡುವ ಪರಿಹಾರದ ಧನ ದಾಖಲೆಗಳನ್ನು ಹೊಂದಿಸಲು ತಿರುಗಾಡಿದ ಖರ್ಚಿಗೂ ಸಾಕಾಗುವುದಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನೀರಿಗೆ ಕೊರತೆಯಿಲ್ಲ: ಉತ್ತಮ ಮಳೆಯಾಗಿರುವುದರಿಂದ ತಾಲೂಕಿನ ಎಲ್ಲ ಕೆರೆಗಳು ಭರ್ತಿಯಾಗಿವೆ. ಈ ಹಿಂದಿನ ವರ್ಷಗಳಲ್ಲಿ ಮಳೆ ಮುಗಿದ ಆರೇಳು ತಿಂಗಳಲ್ಲಿಯೇ ಭದ್ರಾ ಹಿನ್ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಈ ಬಾರಿ ಪೂರ್ಣವಾಗಿದೆ. ಬೋರ್​ವೆಲ್​ಗಳಲ್ಲಿಯೂ ನೀರಿನ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಕೃಷಿಗೆ ನೀರಿನ ಸಮಸ್ಯೆಯಿಲ್ಲ.

ಹಾನಿಗೊಂಡ ಸೇತುವೆ, ಕಾಲುಸಂಕಗಳು: ನೆರೆಯಿಂದ ತಾಲೂಕಿನ ಬಹುತೇಕ ಸೇತುವೆಗಳು, ಮೋರಿಗಳು ಹಾನಿಗೊಂಡಿವೆ. ಸೀತೂರು, ದಾವಣ, ಮೇಗರಮಕ್ಕಿ, ಬಾಳೆ, ಮಾವಿನ ಮನೆ, ಗಡಿಗೇಶ್ವರ, ಬೆಳ್ಳೂರು, ಹೆನ್ನಂಗಿ ಇನ್ನೂ ಅನೇಕ ಗ್ರಾಮಗಳಲ್ಲಿ ಸೇತುವೆ ಕೈಪಿಡಿಗಳು, ಮೋರಿಗಳು ಸಂಪೂರ್ಣ ಕುಸಿದು ಹೋಗಿವೆ. ಕುದ್ರೇಗುಂಡಿ ಹಾಗೂ ಮುತ್ತಿನಕೊಪ್ಪ ಶಂಕರಾಪುರದ ಸಂಪರ್ಕ ಸೇತುವೆಗಳ ಮೇಲೆ ನೀರು ಹರಿದು ಎರಡ್ಮೂರು ದಿನಗಳ ಕಾಲ ಸಂಪರ್ಕ ಕಡಿತಗೊಂಡಿತ್ತು. ಹಾನಿಗೊಂಡ ರಸ್ತೆ, ಸೇತುವೆಗಳ ದುರಸ್ತಿ ಆಗಬೇಕಿದೆ.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...