ದಾಖಲೆ ಬರೆದ ಕೆಂಪೇಗೌಡ ಏರ್​ಪೋರ್ಟ್

ಬೆಂಗಳೂರು: ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಹೊಸ ದಾಖಲೆ ಬರೆದಿದೆ. 2018-19ನೇ ಆರ್ಥಿಕ ವರ್ಷದಲ್ಲಿ ಕೆಐಎ ಮೂಲಕ 3.33 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

2017-18ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2018-19ರಲ್ಲಿ ಪ್ರಯಾಣಿಕರ ಸಂಖ್ಯೆ ಶೇ.23.8 ವೃದ್ಧಿಸಿದ್ದು, ಕಳೆದ ವರ್ಷ 2.69 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರು. ಒಟ್ಟು 3.32 ಕೋಟಿ ಪ್ರಯಾಣಿಕರ ಪೈಕಿ 2.88 ಕೋಟಿ ದೇಶೀಯ (ಡೊಮೆಸ್ಟಿಕ್), 44.82 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಿದ್ದಾರೆ. 2019ರ ಜ.20ರಂದು ಕೆಐಎ ಮುಖಾಂತರ 1,09,174 ಜನ ಪ್ರಯಾಣಿಸಿರುವುದು ಹೊಸ ದಾಖಲೆಯಾಗಿದೆ.

2017-18ರಲ್ಲಿ 2.30 ಕೋಟಿ ದೇಶೀಯ ಹಾಗೂ 38.14 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಕೆಐಎ ಮುಖಾಂತರ ಪ್ರಯಾಣಿಸಿದ್ದರು. ಪ್ರಸ್ತುತ ಕೆಐಎಯಿಂದ 37 ಪ್ರಯಾಣಿಕ ಏರ್​ಲೈನ್ಸ್ ಮತ್ತು 12 ಸರಕು

ಏರ್​ಲೈನ್ಸ್ ಕಾರ್ಯನಿರ್ವಹಿಸುತ್ತಿವೆ. 2018-19ರಲ್ಲಿ ಒಟ್ಟು 2,40,251 ವಿಮಾನ ಭೂಸ್ಪರ್ಶ ಮತ್ತು ಹಾರಾಟ ದಾಖಲಾಗಿದೆ. 2017-18ರಲ್ಲಿ 1,97,330 ಭೂಸ್ಪರ್ಶ ಮತ್ತು ಹಾರಾಟ ದಾಖಲಾಗಿತ್ತು. ಹೀಗೆ ಏರ್ ಟ್ರಾಫಿಕ್ ಮೂವ್​ವೆುಂಟ್ ಶೇ.21.8 ಏರಿಕೆಯಾಗಿದೆ. ನಿತ್ಯ ಸರಾಸರಿ 658 ಭೂಸ್ಪರ್ಶ ಮತ್ತು ಹಾರಾಟಗಳನ್ನು ಕೆಐಎ ನಿರ್ವಹಿಸಿದೆ. 2019 ಜ.11ರಂದು ಒಂದೇ ದಿನ 750 ವಿಮಾನ ಭೂಸ್ಪರ್ಶ ಮತ್ತು ಹಾರಾಟ ದಾಖಲಾಗಿದೆ.

ಸರಕು ಸಾಗಣೆ ಪ್ರಮಾಣ ಹೆಚ್ಚಳ: 2018-19ನೇ ಆರ್ಥಿಕ ವರ್ಷದಲ್ಲಿ ಕೆಐಎ ಮುಖಾಂತರ 3,86,780 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿದೆ. 2017-18ರಲ್ಲಿ 3,48,403 ಮೆಟ್ರಿಕ್ ಟನ್ ಸರಕು ಸಾಗಣೆಯಾಗಿತ್ತು. ಸರಕು ಸಾಗಣೆ ಶೇ.11 ವೃದ್ಧಿಸಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ತಿಳಿಸಿದೆ.

ಶೀಘ್ರ ಟರ್ವಿುನಲ್ 2 ಕಾಮಗಾರಿ

2028ರ ವೇಳೆಗೆ ಕೆಐಎ ಮುಖಾಂತರ 8 ಕೋಟಿ ಪ್ರಯಾಣಿಕರು ಪ್ರಯಾಣಿಸಲಿದ್ದಾರೆ ಎಂದು ಊಹಿಸಲಾಗಿದೆ. ಇದಕ್ಕೆ ಪೂರಕವಾಗಿ ಹೊಸ ರನ್​ವೇ ಮತ್ತು ಟರ್ವಿುನಲ್ 2 ನಿರ್ವಣವಾಗುತ್ತಿದೆ. ವರ್ಷಾಂತ್ಯದಿಂದ ಹೊಸ ರನ್​ವೇ ವಿಮಾನಗಳ ಕಾರ್ಯಾಚರಣೆಗೆ ಮುಕ್ತವಾಗಲಿದೆ. ಪ್ರಸ್ತುತ ಇರುವ ಟರ್ವಿುನಲ್ ಪಕ್ಕದಲ್ಲೇ ಅಂದಾಜು 2.55 ಲಕ್ಷ ಚದರ ಮೀ. ಜಾಗದಲ್ಲಿ 3,035.9 ಕೋಟಿ ರೂ.ವೆಚ್ಚದಲ್ಲಿ 2ನೇ ಟರ್ವಿುನಲ್ ನಿರ್ವಣವಾಗಲಿದೆ. ವಾರ್ಷಿಕ 4.5 ಕೋಟಿ ಪ್ರಯಾಣಿಕರ ನಿರ್ವಹಿಸುವ ಸಾಮರ್ಥ್ಯವನ್ನು ಈ ಟರ್ವಿುನಲ್ ಹೊಂದಿರಲಿದ್ದು, 2021 ಮಾರ್ಚ್​ಗೆ ಎರಡನೇ ಟರ್ವಿುನಲ್ ಮೊದಲ ಹಂತ ಪೂರ್ಣಗೊಳ್ಳಲಿದೆ.

ಒಟ್ಟು 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೆಐಎನಲ್ಲಿ ಎರಡನೇ ಟರ್ವಿುನಲ್, ರನ್​ವೇ ಸೇರಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಲಿದ್ದು, ಸೂಕ್ತ ಸೌಕರ್ಯ ಒದಗಿಸಲು ಬಿಐಎಎಲ್ ಬದ್ಧವಾಗಿದೆ.

| ಹರಿ ಮರಾರ್, ವ್ಯವಸ್ಥಾಪಕ ನಿರ್ದೇಶಕ, ಬಿಐಎಎಲ್ ಸಿಇಒ

Leave a Reply

Your email address will not be published. Required fields are marked *