1.80 ಲಕ್ಷ ರೂ.ಗೆ ಅಮೃತ್ ಮಹಲ್ ಹೋರಿ ಹರಾಜು

ಬೀರೂರು: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ಅಮೃತ್​ವುಹಲ್ ಗಂಡು ಕರುಗಳ ಬಹಿರಂಗ ಹರಾಜಿನಲ್ಲಿ ಲಿಂಗದಹಳ್ಳಿ ಹಾಲುಮಜ್ಜನಿ, ಓಬಳಾದೇವಿ ತಳಿ 1.80 ಲಕ್ಷ ರೂ. ದಾಖಲೆ ಬೆಲೆಗೆ ಮಾರಾಟವಾಗಿವೆ.

180 ಅಮೃತ್​ವುಹಲ್ ಕ್ಷೇತ್ರದ ಹೋರಿಕರುಗಳು, 7 ಬೀಜದ ಹೋರಿಗಳು ಮತ್ತು 3 ಎತ್ತುಗಳನ್ನು ಹರಾಜಿನಲ್ಲಿ ಇಡಲಾಗಿತ್ತು. ಲಿಂಗದಹಳ್ಳಿ ಕೇಂದ್ರದ ಹಾಲುಮಜ್ಜನಿ ಮತ್ತು ಓಬಳಾದೇವಿ ತಳಿ ಜೋಡಿ ರಾಸುಗಳನ್ನು ಚಳ್ಳಕೆರೆ ತಾಲೂಕಿನ ನಂದಿವಾಳ ಗ್ರಾಮದ ಓಬಯ್ಯ 1.80 ಲಕ್ಷ ರೂ. ನೀಡಿ ಪಡೆದುಕೊಂಡರು. ರಾಮಗಿರಿಯ ಮೆಣಸಿ ಮತ್ತು ಕರಿಯಕ್ಕ ಜೋಡಿಯನ್ನು ಶಿಕಾರಿಪುರದ ಮಳವಳ್ಳಿ ಪರಮೇಶ್ವರ 1.55 ಲಕ್ಷ ರೂ, ಹಾಗೂ ಸೊರಬ ತಾಲೂಕಿನ ಇಂಡುವಳ್ಳಿಯ ಪರಶುರಾಮ್.40 ಲಕ್ಷ ರೂ. ನೀಡಿ ನಾಮಧಾರಿ ಮತ್ತು ಓಬಳಾದೇವಿಯನ್ನು ಪಡೆದುಕೊಂಡರು.

ಹರಾಜು ಪ್ರಕ್ರಿಯೆಯಲ್ಲಿ 300 ಬಿಡ್ಡುದಾರರು ಪಾಲ್ಗೊಂಡಿದ್ದರು. ಹಾಸನ, ಮೈಸೂರು, ಅರಸೀಕೆರೆ, ರಾಣಿಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ ಸೇರಿದಂತೆ ರಾಜ್ಯದ ನಾನಾ ಭಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.