ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವಬೃಂದಾವನದ ಮರು ನಿರ್ಮಾಣ

ಕೊಪ್ಪಳ: ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡಿಯಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ವ್ಯಾಸರಾಯರ ಬೃಂದಾವನವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ.

ಘಟನೆ ಹಿನ್ನೆಲೆಯಲ್ಲಿ ರಾಘವೇಂದ್ರ ಮಠ, ಉತ್ತರಾಧಿಮಠ ಹಾಗೂ ವ್ಯಾಸರಾಯ ಮಠದ ಶ್ರೀಗಳು ಸ್ಥಳಕ್ಕೆ ಆಗಮಿಸಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಧ್ವಂಸಗೊಂಡ ಬೃಂದಾವನವನ್ನು ಪುನರ್ ನಿರ್ಮಾಣ ಮಾಡಲು‌ ಮುಂದಾಗಿದ್ದು, ಪೂಜೆ, ನೈವೇದ್ಯ ನಡೆಸುವವರೆಗೂ ಅನ್ನ, ನೀರು ಸೇವಿಸುವುದಿಲ್ಲವೆಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕೃತ್ಯ ಎಸಗಿದವರ ಪತ್ತೆಗೆ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ.

ನಿಧಿ ಆಸೆಗಾಗಿ ಬುಧವಾರ ರಾತ್ರೋರಾತ್ರಿ ವ್ಯಾಸರಾಯರ ಬೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದರು. ಈ ದುಷ್ಕೃತ್ಯವನ್ನು ನಟ ನವರಸನಾಯಕ ಜಗ್ಗೇಶ್​ ಟ್ವೀಟ್​​ ಮೂಲಕ ತೀವ್ರವಾಗಿ ಖಂಡಿಸಿದ್ದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *