ಭರದಿಂದ ಸಾಗಿದ ವ್ಯಾಸರಾಯರ ನವವೃಂದಾವನದ ನಿರ್ಮಾಣ ಕಾರ್ಯ, ರಾಜ್ಯದ ಹಲವೆಡೆ ಪ್ರತಿಭಟನೆ

ಗಂಗಾವತಿ: ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದ ವ್ಯಾಸರಾಯರ ನವವೃಂದಾನವನ ನಿರ್ಮಾಣ ಕಾರ್ಯ ಶೇಕಡ 25 ರಷ್ಟು ಪೂರ್ಣಗೊಂಡಿದೆ.

ತಮಿಳುನಾಡಿನ ವೇಲೂರಿನ ರಾಘವಪ್ರಭ ತಂಡದಿಂದ ಕಾಮಗಾರಿ ನಡೆಯುತ್ತಿದ್ದು, ವೃಂದಾವನದ ಕಲಾಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ವಾಸ್ತುಶಿಲ್ಪಿ ನೀರಜ್​​​ ಅವರೊಂದಿಗೆ ಪುರಾತತ್ವ ಇಲಾಖೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಕಾಮಗಾರಿ ಸ್ಥಳದಲ್ಲಿ ವ್ಯಾಸರಾಜ್ ಮಠಾಧೀಶರಾದ ವಿದ್ಯಾಶ್ರೀಶ ತೀರ್ಥರು, ತಂಬಿಹಳ್ಳಿ ಮಠದ ಮಧ್ವಾಚಾರ್ಯ ಪೀಠದ ವಿದ್ಯಾಸಾಗರ ಮಾಧವ ತೀರ್ಥರು ಉಪಸ್ಥಿತರಿದ್ದಾರೆ.

ಘಟನೆಯನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆ
ನವವೃಂದಾವನ ಧ್ವಂಸವನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಕೊಪ್ಪಳ, ಹೊಸಪೇಟೆ, ರಾಯಚೂರು, ಬೆಳಗಾವಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಲವು ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸರ್ಕಾರವನ್ನು ಅಗ್ರಹಿಸಿವೆ.

ವೃಂದಾವನ ಗಡ್ಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದು ಅಗ್ರಹಿಸಿದ್ದಾರೆ. ಅಲ್ಲದೇ ರಾಯಚೂರು ‌ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ನಡೆಸಿ. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)