ಬೆಳಗಾವಿ: ಕನ್ನಡ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ದೀಪಸ್ತಂಭದಂತೆ ಇರುವ ಹಿರಿಯ ಸಾಧಕರನ್ನು ಗುರುತಿಸಿ, ಗೌರವಿಸುವ ಕೆಲಸ ನಡೆಯಬೇಕು ಎಂದು ಸಾಹಿತಿ ಬಿ.ಎಸ್.ಗವಿಮಠ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳು ನಿರಂತರವಾಗಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಸಂಘಟಿಸಬೇಕು. ಕನ್ನಡಿಗರು ಜೀವಂತರಾಗಿದ್ದೇವೆ. ಕನ್ನಡ ಭಾಷೆ ಬೆಳೆಯುತ್ತಿದೆ ಎಂಬುದನ್ನು ಸಕ್ರಿಯವಾಗಿ ತೋರಿಸಬೇಕು ಎಂದರು.
ವಕೀಲ ಎಸ್.ಎಂ.ಕುಲಕರ್ಣಿ ಮಾತನಾಡಿ, ಸನದಿ ಪ್ರತಿಷ್ಠಾನ ಸಾಧಕರಿಗೆ ಹಾಗೂ ಉದಯೋನ್ಮುಖ ಬರಹಗಾರರಿಗೆ ಒಂದೇ ವೇದಿಕೆಯ ಮೇಲೆ ಪ್ರಶಸ್ತಿ ನೀಡಿ ಎರಡು ತಲೆಮಾರುಗಳನ್ನು ಪ್ರತಿನಿಧಿಸುತ್ತಿದೆ. ಎರಡೂ ಪೀಳಿಗೆಯನ್ನು ಪ್ರೋತ್ಸಾಹಿಸುತ್ತಿರುವ ಸೇತುವೆಯಾಗಿ ಒಳ್ಳೆಯ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಡಾ.ರಾಮಕೃಷ್ಣ ಮರಾಠೆ, ಆರ್. ಬಿ. ಬನಶಂಕರಿ, ಡಾ ಪಿ.ಜಿ. ಕೆಂಪಣ್ಣವರ, ಆಶಾ ಯಮಕನಮರಡಿ, ಆರ್.ಎ.ಭಜಂತ್ರಿ, ಇಂದಿರಾ ಮೋಟೆಬೆನ್ನೂರ, ಶಿವಾನಂದ ತಲ್ಲೂರ, ಹೇಮಾ ಸೋನೊಳ್ಳಿ, ಹಮೀದಾ ದೇಸಾಯಿ, ಸುನಿತಾ ಪಾಟೀಲ, ದಿಲೀಪ ಹೆಗಡೆ ಇತರರಿದ್ದರು.
ಹಿರಿಯ ಸಾಧಕರನ್ನು ಗುರುತಿಸಿ, ಗೌರವಿಸಲಿ
ನಿಮ್ಮ ಸ್ಮಾರ್ಟ್ಫೋನ್ ನಿಮ್ಮ ಫಿಟ್ನೆಸ್ ಕೋಚ್… ಆಶ್ಚರ್ಯವಾಯಿತೇ? ಇಲ್ಲಿದೆ ಅಚ್ಚರಿ ಮಾಹಿತಿ… Smartphone
Smartphone : ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ, 2040ರ…
ಈ ದಿನಾಂಕಗಳಂದು ಜನಿಸಿದವರು ತಮ್ಮ ಬುದ್ಧಿವಂತಿಕೆಯಿಂದಾಗಿ ರಾಯಲ್ ಲೈಫ್ ನಡೆಸುತ್ತಾರೆ! Numerology
Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ…
ನೀವು ಬೆಳಿಗ್ಗೆ ತಿಂಡಿಯನ್ನು ತಡವಾಗಿ ತಿನ್ನುತ್ತೀರಾ? ಎಚ್ಚರ..ಈ ಕಾಯಿಲೆ ಬರೋದು ಪಕ್ಕಾ… breakfast
breakfast: ಬೆಳಗಿನ ಉಪಾಹಾರವು ದೇಹಕ್ಕೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಉಪಹಾರವನ್ನು ಬಿಡಬಾರದು. ತಡವಾಗಿ ತಿನ್ನುವುದು…