ಪ್ರಸ್ತುತ ಜೀವನಶೈಲಿಯಲ್ಲಿ ಕಳಪೆ ಆಹಾರ ಸೇವನೆಯಿಂದ ಹೆಚ್ಚಿನವರು ಮಲಬದ್ಧತೆ, ಅಸಿಡಿಟಿ, ಭೇದಿ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಗಂಜಿ, ಓಟ್ಸ್, ಸೂಪ್ ಇತ್ಯಾದಿಗಳಂತಹ ಲಘುವಾಗಿರುವ ಏನನ್ನಾದರೂ ಸೇವಿಸುವುದು ಉತ್ತಮ.(Recipe)
ಇದನ್ನು ಓದಿ: ಮನೆಯಲ್ಲೇ ಥಟ್ ಅಂಥಾ ಮಾಡಿ ರಾಜಸ್ಥಾನಿ ಮಿರ್ಚಿ ವಡಾ; ಇಲ್ಲಿದೆ ಸಿಂಪಲ್ ವಿಧಾನ | Recipe
ಹೊಟೇಲ್ಗೆ ಹೋದರೆ ಏನು ತಿನ್ನಬೇಕು ಎಂದು ನಿರ್ಧರಿಸುವುದರೊಳಗೆ ಮೊದಲು ಕೇಳುವುದೇ ಸೂಪ್. ಆರೋಗ್ಯಕರ ಸೂಪ್ ಅನ್ನು ಮನೆಯಲ್ಲಿಯೇ ಸಿದ್ಧಪಡಿಸುವುದು ಹೇಗೆ ಎಂದು ಆಲೋಚಿಸುತ್ತಿರುವವರಿಗೆ ಇಲ್ಲಿದೆ ರೆಸಿಪಿ. ಇಲ್ಲಿ ಹೆಸರು ಬೇಳೆ ಸೂಪ್ ಮನೆಯಲ್ಲೇ ಮಾಡುವುದೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಜತೆಗೆ ಇದು ರುಚಿಕರವೂ ಹೌದು. ಮನೆಯಲ್ಲಿಯೇ ಹೆಸರು ಬೇಳೆ ಸೂಪ್ ಮಾಡುವುದೇಗೆ ಇಲ್ಲಿದೆ ವಿಧಾನ.
ಹೆಸರು ಬೇಳೆ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
- ಹೆಸರು ಬೇಳೆ
- ಜೀರಿಗೆ
- ಹಸಿರು ಮೆಣಸಿನಕಾಯಿ
- ಶುಂಠಿ
- ಅರಿಶಿನ ಪುಡಿ
- ಚಿಲ್ಲಿ ಪೌಡರ್
- ಉಪ್ಪು
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
ಹೆಸರು ಬೇಳೆ ಸೂಪ್ ಮಾಡುವ ವಿಧಾನ
ಮೊದಲಿಗೆ ಒಂದು ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 40 ನಿಮಿಷಗಳ ಕಾಲ ನೆನೆಸಿಡಬೇಕು. ಬಳಿಕ ಕುಕ್ಕರ್ನಲ್ಲಿ ನೆನಸಿದ ಹೆಸರು ಕಾಳು, ಮೂರು ಕಪ್ ನೀರು, ಜೀರಿಗೆ, ಶುಂಠಿ, ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಚಿಲ್ಲಿ ಪೌಡರ್ ಹಾಕಿ ಪ್ರೆಶರ್ ಕುಕ್ಕರ್ ಮುಚ್ಚಳವನ್ನು ಮುಚ್ಚಿ. ಕನಿಷ್ಠ 3 ರಿಂದ 4 ಸೀಟಿಯವರೆಗೆ ಕಾಯಬೇಕು, ಬಳಿಕ ಗ್ಯಾಸ್ ಆಫ್ ಮಾಡಿ.
ಬಾಣಲೆಯಲ್ಲಿ ಅರ್ಧ ಚಮಚ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆಯನ್ನು ಹಾಕಿ ಫ್ರೈಮಾಡಿ. ಗೋಲ್ಡನ್ ಬಣ್ಣಕ್ಕೆ ಜೀರಿಗೆ ತಿರುಗಿದಾಗ ಕುಕ್ಕರನಲ್ಲಿರುವ ಬೇಯಿಸಿರುವ ಹೆಸರು ಬೇಳೆ ಮತ್ತು ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು 5 ನಿಮಿಷಗಳ ಕಾಲ ಕುದಿಸಿ. ಕುದಿಯುವಾಗ ಅದಕ್ಕೆ ಹಸಿರು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಈಗ ಗ್ಯಾಸ್ ಆಫ್ ಮಾಡಿ ಒಂದು ಬೌಲ್ ನಲ್ಲಿ ತೆಗೆದು ಸರ್ವ್ ಮಾಡಿ.
ಬೇಕಿದ್ದರೆ ಈ ಸೂಪ್‌ನಲ್ಲಿ ನಿಮ್ಮ ಆಯ್ಕೆಯ ಕೆಲವು ತರಕಾರಿಗಳಾದ ಈರುಳ್ಳಿ, ಟೊಮೆಟೊ, ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಬಹುದು. ನೀವು ಈ ಸೂಪ್ ಅನ್ನು ಹೆಚ್ಚು ರುಚಿಕರವಾಗಿ ಮಾಡಲು ಬಯಸಿದರೆ, ನೀವು ಅದಕ್ಕೆ ನಿಂಬೆ ರಸ ಅಥವಾ ಮೊಸರನ್ನು ಸೇರಿಸಬಹುದು.
ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ರುಚಿಕರ ಆಲೂಪೂರಿ; ಇಲ್ಲಿದೆ ಸುಲಭ ವಿಧಾನ | Recipe