ವಾರಾಂತ್ಯದಲ್ಲಿ ಏನಾದರೂ ವಿಶೇಷವಾಗಿ ತಿಂಡಿ ತಯಾರಿಸಬೇಕು ಆದರೆ ಏನು ಮಾಡೋದು.. ಅತಿಥಿಗಳು ಬಂದಾಗ ಥಟ್ ಅಂಥಾ ಯಾವ ಅಡುಗೆ ಮಾಡೋದು. ಟೇಸ್ಟಿಯಾಗಿ ಸ್ಪೈಸಿಯಾಗಿ ಇರಬೇಕು ಅಂಥಾ ಆಲೋಚನೆ ಮಾಡ್ತಿದ್ದೀರಾ ನಿಮಗಾಗಿಯೇ ಈ ರೆಸಿಪಿ(Recipe).
ಇದನ್ನು ಓದಿ: ಮನೆಯಲ್ಲೇ ಮಾಡಿ ಸ್ಪೈಸಿ ಟೇಸ್ಟಿ ಸಮೋಸಾ; ಇಲ್ಲಿದೆ ತಯಾರಿಸುವ ವಿಧಾನ | Recipe
ಮನೆಯಲ್ಲಿ ಚಿಕ್ಕವರಿಂದ ಹಿರಿಯರವರೆಗೆ ಖುಷಿ ಖುಷಿಯಾಗಿ ತಿನ್ನುವಂತಾ ತಿಂಡಿ, ವೆಜ್ ಪ್ರಿಯರು ಮಿಸ್ ಮಾಡ್ದೆ ಮನೆಯಲ್ಲೆ ಮಾಡುಬಹುದಾದ ಹೆಸರುಕಾಳಿನ ಕಬಾಬ್. 15 ರಿಂದ 20 ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಮೊಸರು ಅಥವಾ ಗ್ರೀನ್ ಚಟ್ನಿಯೊಂದಿಗೆ ಈ ಹೆಸರುಕಾಳಿನ ಕಬಾಬ್ ಸವಿದರೆ ಎಷ್ಟು ರುಚಿಕರವಾಗಿರುತ್ತದೆ ಗೊತ್ತಾ. ಮನೆಮಂದಿ ನೆನೆಪಿಸಿಕೊಂಡು ಮತ್ತೆ ಮತ್ತೆ ಮಾಡುವಂತೆ ಕೇಳುತ್ತಾರೆ. ಹಾಗಾದ್ರೆ ಹೆಸರುಕಾಳಿನ ಕಬಾಬ್ ಮಾಡುವುದೇಗೆ ಎಂಬ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಹೆಸರುಕಾಳಿನ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳು
- ಒಂದು ಬಟ್ಟಲು ಹೆಸರುಕಾಳು
- ಅರ್ಧ ಕಪ್ ಕತ್ತರಿಸಿದ ಪಾಲಕ್
- ಪುದೀನ ಮತ್ತು ಕೊತ್ತಂಬರಿ ಸೊಪ್ಪು
- ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ
- ಒಂದು ಚಮಚ ಹುರಿದ ಜೀರಿಗೆ
- ಅರ್ಧ ಚಮಚ ಚಿಲ್ಲಿ ಪೌಡರ್
- ಗರಂ ಮಸಾಲ ಪುಡಿ
- ಒಂದು ಚಮಚ ಧನಿಯಾ
- ಒಂದು ಚಿಟಿಕೆ ಇಂಗು
- ಅರ್ಧ ಚಮಚ ಅರಿಶಿನ
- ಅಕ್ಕಿ ಹಿಟ್ಟು
- ಅಡುಗೆ ಎಣ್ಣೆ
ಹೆಸರುಕಾಳಿನ ಕಬಾಬ್ ಮಾಡುವ ವಿಧಾನ
ಒಂದು ಬಟ್ಟಲು ಹೆಸರು ಬೇಳೆ, ಅರ್ಧ ಕಪ್ ಕತ್ತರಿಸಿದ ಪಾಲಕ್, ಪುದೀನ ಎಲೆಗಳು, ಕೊತ್ತಂಬರಿ ಸೊಪ್ಪು, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಒಂದು ಚಮಚ ಹುರಿದ ಜೀರಿಗೆ, ಅರ್ಧ ಚಮಚ ಚಿಲ್ಲಿ ಪೌಡರ್, ಗರಂ ಮಸಾಲ ಪುಡಿ, ಒಂದು ಚಮಚ ಧನಿಯಾ, ಒಂದು ಚಿಟಿಕೆ ಇಂಗು, ಅರ್ಧ ಚಮಚ ಅರಿಶಿನ ಮತ್ತು ಅಕ್ಕಿ ಹಿಟ್ಟು ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ಮಾಡಿ. ಬಳಿಕ ಈ ಪೇಸ್ಟ್‌ನಿಂದ ಸಣ್ಣ ಉಂಡೆಗಳನ್ನು ಮಾಡಿ, ನಿಮ್ಮ ಅಂಗೈಯ ಸಹಾಯದಿಂದ ಈ ಎಲ್ಲಾ ಚೆಂಡುಗಳನ್ನು ಚಪ್ಪಟೆ ಮಾಡಿ. ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಎಲ್ಲಾ ಫ್ಲಾಟ್ ಕಬಾಬ್‌ಗಳನ್ನು ಫ್ರೈ ಮಾಡಿ. ರುಚಿಕರವಾದ ಹೆಸರುಕಾಳಿನ ಕಬಾಬ್ ಸವಿಯಲು ಸಿದ್ಧ.
ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್ ವಿಧಾನ | Recipe