More

  ಶಿಕ್ಷಣದ ಜತೆ ಸಂಸ್ಕಾರ ಅಗತ್ಯ

  ವಿಜಯವಾಣಿ ಸುದ್ದಿಜಾಲ ಹೊಸಕೋಟೆ
  ಸಮಾಜದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅತಿ ಮುಖ್ಯವಾಗಿದ್ದು, ಶಿಕ್ಷಣದಿಂದ ಜ್ಞಾನ, ಸಂಸ್ಕಾರ ದೊರೆಯುವುದರ ಜತೆಗೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕರುನಾಡ ಪ್ರಜಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ.ಎಚ್.ಎಂ.ಸುಬ್ಬರಾಜ್ ತಿಳಿಸಿದರು.
  ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಅನುಮತಿ ಪತ್ರವನ್ನು ಸ್ವೀಕರಿಸಿ ಮಾತನಾಡಿದರು.
  ಸರ್ಕಾರಿ ಶಾಲೆಗಳನ್ನು ಸಂಘ-ಸಂಸ್ಥೆಗಳು ದತ್ತು ಪಡೆಯುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬೇಕು. ಸರ್ಕಾರಿ ಶಾಲೆಗಳು ಇತೀಚಿನ ದಿನಗಳಲ್ಲಿ ಮೂಲೆ ಗುಂಪಾಗುತ್ತಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿಯಿಂದ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕೊರತೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಶಾಲೆ ಎಂಬ ಕೀಳರಿಮೆ. ಸರ್ಕಾರವೂ ಹೆಚ್ಚಿನ ಅನುದಾನ ನೀಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜತೆಗೆ ಸಂಘ-ಸಂಸ್ಥೆಗಳು ಉದ್ಯಮಗಳು ಕೈ ಜೋಡಿಸಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಶಾಲೆಗಳ ಕಾಯಕಲ್ಪಕ್ಕೆ ಮುಂದಾದಲ್ಲಿ ಬಡ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
  ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಮಾತನಾಡಿ, ಹಲವು ವರ್ಷಗಳಿಂದ ಕರುನಾಡ ಪ್ರಜಾ ಸೇವಾ ಟ್ರಸ್ಟ್ ನಗರದ ಗೌತಮ್ ಕಾಲನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಶೈಕ್ಷಣಿಕ ಪ್ರವಾಸ, ಉಚಿತ ಪಠ್ಯ ಪರಿಕರ ಹಾಗೂ ಮಕ್ಕಳಿಗೆ ಟ್ರ್ಯಾಕ್‌ಸೂಟ್‌ಗಳನ್ನು ನೀಡುತ್ತಾ ಶಾಲೆಗೆ ಸಹಕಾರ ನೀಡುತ್ತಾ ಬಂದಿದ್ದು, ಈಗ ಶಾಲೆಯನ್ನು ದತ್ತು ಪಡೆಯುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ಕೇಳಿದ್ದು, ಕೆಲ ಷರತ್ತುಗಳನ್ನು ವಿಧಿಸಿ, ಶಾಲೆಯನ್ನು ದತ್ತು ನೀಡಲಾಗಿದೆ. ಅದರ ಅನುಮತಿ ಪತ್ರ ನೀಡಿದರು.
  ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಲ್ಲಾಬಕ್ಷ್, ಗಂಗಾಧರ್, ಸೋಮಶೇಖರ್ ಇದ್ದರು.

  See also  ವಾಲ್ಮೀಕಿ ನಿಗಮ ಹಗರಣ: ಅಧಿಕಾರಿಗಳ ತಪ್ಪಿಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ನೀಡಬೇಕು: ಡಿಕೆ ಶಿವಕುಮಾರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts