ಅತೃಪ್ತರು ಬಂದ್ರು ರಾಜೀನಾಮೆ ಕೊಟ್ರು ಮತ್ತೆ ಮುಂಬೈಗೇ ಹೋದ್ರು: ಮಾತಿಗೂ ಸಿಕ್ಕಿಲ್ಲ, ಪ್ರತಿಕ್ರಿಯೆನೂ ನೀಡಿಲ್ಲ…

ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದ ಮೇರೆಗೆ ಮುಂಬೈನಿಂದ ಇಂದು ಸಂಜೆ ಆರು ಗಂಟೆಗೆ ಸ್ಪೀಕರ್​ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರೆಲ್ಲ ಮತ್ತೆ ಮರಳಿ ಮುಂಬೈಗೇ ಹೋಗಿದ್ದಾರೆ.

ಸ್ಪೀಕರ್​ ಜತೆ ಚರ್ಚೆ ಮುಗಿಯುತ್ತಿದ್ದಂತೆ ಪೊಲೀಸ್​ ಬಿಗಿ ಭದ್ರತೆಯಲ್ಲಿ ಎಚ್​ಎಎಲ್​ ವಿಮಾನನಿಲ್ದಾಣಕ್ಕೆ ತೆರಳಿ ಅಲ್ಲಿಂದ ಎರಡು ವಿಮಾನಗಳಲ್ಲಿ ಮುಂಬೈಗೆ ಹೋಗಿದ್ದಾರೆ. ಮೊದಲ ವಿಮಾನದಲ್ಲಿ ಆರು ಶಾಸಕರು, ಮತ್ತೊಂದು ವಿಮಾನದಲ್ಲಿ ಐವರು ಹೋಗಿದ್ದು ಈ ಬಾರಿ ಶಾಸಕ ಆನಂದ್​ ಸಿಂಗ್​ ಕೂಡ ಇವರೊಂದಿಗೆ ಸೇರಿಕೊಂಡಿದ್ದಾರೆ.

ಸುಪ್ರೀಂಕೋರ್ಟ್​ ಆದೇಶದಂತೆ ಅವರಿಗೆಲ್ಲ ಎಸ್ಕಾರ್ಟ್​ ನೀಡಲಾಗಿತ್ತು. ಸ್ಥಳೀಯ ಪೊಲೀಸರು ಕೂಡ ಬಿಗಿ ಭದ್ರತೆ ನೀಡಿದ್ದರು. ವಿಧಾನಸೌಧದಲ್ಲಿ ಕೂಡ ಕಾಂಗ್ರೆಸ್​, ಜೆಡಿಎಸ್​ ಮುಖಂಡರು ಅತೃಪ್ತರನ್ನು ಮಾತನಾಡಿಸಲು ಸಾಧ್ಯವಾಗಲಿಲ್ಲ. ಹಾಗೇ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿದರೆ ತೆರಳಿದ್ದಾರೆ.

ನಾಳೆಯಿಂದ ಅಧಿವೇಶನ ನಡೆಯಲಿದ್ದು ಕಲಾಪಕ್ಕೆ ಎಲ್ಲರೂ ಹಾಜರಾಗಬೇಕು ಎಂದು ವಿಪ್​ ಹೊರಡಿಸಿದ್ದರೂ ಕೂಡ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಅತೃಪ್ತರೆಲ್ಲ ಮರಳಿ ಮುಂಬೈ ಹೋಟೆಲ್​ ಗೆ ಹೋಗಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *