Video: ಓಡೋಡಿ ಬಂದು ಸ್ಪೀಕರ್​ ರಮೇಶ್​ ಕುಮಾರ್​ ಕಚೇರಿ ತಲುಪಿದ ಅತೃಪ್ತ ಶಾಸಕರು

ಬೆಂಗಳೂರು: ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಬೇಕಿದ್ದ ಅತೃಪ್ತ ಶಾಸಕರು ಸ್ವಲ್ಪ ತಡವಾಗಿ ವಿಧಾನಸೌಧಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಬಸ್​ ಇಳಿಯುತ್ತಿದ್ದಂತೆ ಓಡಿ ಹೋಗಿ ರಮೆಶ್​ ಕುಮಾರ್​ ಅವರ ಕಚೇರಿ ತಲುಪಿದ್ದಾರೆ.

ಮುಂಬೈನಲ್ಲಿ ಬೀಡು ಬಿಟ್ಟಿದ್ದ ಅತೃಪ್ತ ಶಾಸಕರು ವಿಶೇಷ ವಿಮಾನದಲ್ಲಿ ಗುರುವಾರ ಸಂಜೆ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ, ಅವರು ವಿಧಾನಸೌಧ ತಲುಪುವಷ್ಟರಲ್ಲಿ 6 ಗಂಟೆ ಮೀರಿತ್ತು. ಸರಿಯಾಗಿ 6 ಗಂಟೆ 3 ನಿಮಿಷಕ್ಕೆ ಕೆಂಗಲ್ ಗೇಟ್ ಗೆ ಶಾಸಕರು ಆಗಮಿಸಿದರು. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಬಸ್​ ಇಳಿದ ತಕ್ಷಣ ಭೈರತಿ ಬಸವರಾಜು ಓಡೋಡಿ ಸ್ಪೀಕರ್​ ಕಚೇರಿ ತಲುಪಿದರು. ಇವರ ಬೆನ್ನಲ್ಲೇ ಉಳಿದ ಅತೃಪ್ತ ಶಾಸಕರು ಸ್ಪೀಕರ್​ ಕಚೇರಿ ತಲುಪಿದರು. ಆ ನಂತರ ಎಲ್ಲಾ ಶಾಸಕರು ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದಾರೆ.

ರಮೇಶ್​ ಕುಮಾರ್​, ಎಚ್​. ವಿಶ್ವನಾಥ್​, ಬಿ.ಸಿ. ಪಾಟೀಲ್​, ಮಹೇಶ್​ ಕುಮಟಳ್ಳಿ, ಶಿವರಾಮ್​ ಹೆಬ್ಬಾರ್​, ಭೈರತಿ ಬಸವರಾಜ್​, ಗೋಪಾಲಯ್ಯ, ಮುನಿರತ್ನ, ನಾರಾಯಣಗೌಡ ಮತ್ತು ಎಸ್​.ಟಿ. ಸೋಮಶೇಖರ್​ ಸ್ಪೀಕರ್​ ಮುಂದೆ ಹಾಜರಾಗಿದ್ದಾರೆ.

ಇಂದು ಸಂಜೆ 7 ಗಂಟೆಗೆ ಸ್ಪೀಕರ್​ ಸುದ್ದಿಗೋಷ್ಠಿ ಕರೆದಿದ್ದು, ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಾಹಿತಿ ನೀಡಲಿದ್ದಾರೆ.

Leave a Reply

Your email address will not be published. Required fields are marked *