ಗಂಡಸುತನ ತೋರಿಸಲು ಕತ್ತಲಾಗಬೇಕಿಲ್ಲ, ಯೋಗ್ಯತೆ ಇಲ್ಲದವರ ಜತೆ ಫೈಟ್​ ಮಾಡೋಲ್ಲ: ಕಿಚ್ಚ ಸುದೀಪ್​ ಖಡಕ್​ ಟ್ವೀಟ್​

ಬೆಂಗಳೂರು: ನಟ ಕಿಚ್ಚ ಸುದೀಪ್​ ಅವರು ಟ್ವಿಟರ್​ ಖಾತೆಯನ್ನು ಹೆಚ್ಚಾಗಿ ತಮ್ಮ ಸಿನಿಮಾ ಪ್ರಮೋಶನ್​, ಸ್ನೇಹಿತರು, ಅಭಿಮಾನಿಗಳಿಗೆ ಜನ್ಮದಿನದ ಶುಭಾಶಯ ಹೇಳಲು ಬಳಸುತ್ತಾರೆ.

ಅಲ್ಲದೆ, ಅವರನ್ನು ಟ್ಯಾಗ್​ ಮಾಡಿ ಯಾರೇ ಟ್ವೀಟ್​ ಮಾಡಿದರೂ ಬಹುತೇಕ ಪ್ರತಿಕ್ರಿಯೆ ನೀಡುತ್ತಾರೆ. ಅದರ ಹೊರತಾಗಿ ಯಾರಿಗೋ ಟಾಂಗ್ ನೀಡಲು, ಯಾವುದೇ ಸನ್ನಿವೇಶಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಟ್ವೀಟ್​ ಮಾಡುವುದಿಲ್ಲ.

ಹೀಗಿರುವಾಗ ಸುದೀಪ್​ ಇಂದು ಮಾಡಿದ ಟ್ವೀಟ್ ಸಿಕ್ಕಾಪಟೆ ಖಡಕ್​ ಆಗಿದ್ದು, ಅದ್ಯಾಕೆ ಏಕಾಏಕಿ ಹೀಗೆ ಪೋಸ್ಟ್ ಮಾಡಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೆ, ಅವರ ಫಾಲೋವರ್ಸ್​ ಹುಬ್ಬೇರಿಸಿದೆ.

‘ಒಬ್ಬ ನಿಜವಾದ ಪುರುಷ ತಾನು ಗಂಡಸು ಎಂದು ಪ್ರೂವ್​ ಮಾಡಲು ಮದ್ಯಪಾನ ಮಾಡುವುದಿಲ್ಲ. ಹಾಗೇ ಕತ್ತಲಾಗಲಿ ಎಂದು ಕಾಯುವುದೂ ಇಲ್ಲ.’ ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ ಎಂದು ಕಿಚ್ಚ ಖಡಕ್​ ಟ್ವೀಟ್​ ಮಾಡಿದ್ದಾರೆ.

ಹಾಗೇ ತಮ್ಮ ಫೋಟೋ ಇರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಕೂಡ ನಾಲ್ಕು ಸಾಲು ಬರೆದಿದ್ದು ಗಮನ ಸೆಳೆಯುವಂತೆ ಇದೆ. ‘ಏನನ್ನೋ ಸಾಬೀತು ಮಾಡುವುದಕ್ಕೋಸ್ಕರ ನಾನು ಯಾರೆಂದರೆ ಅವರ ಜತೆಗೆ ಹೋರಾಟಕ್ಕೆ ಇಳಿಯುವುದಿಲ್ಲ. ನನ್ನ ಎದುರಾಳಿಗೆ ನನ್ನೊಂದಿಗೆ ಫೈಟ್​ ಮಾಡಲು ಯೋಗ್ಯತೆ ಇರಬೇಕು. ಅಂದಾಗ ಮಾತ್ರ ನಾನೂ ಫೈಟ್​ ಮಾಡುತ್ತೇನೆ’ ಎಂದು ಸಂದೇಶ ನೀಡಿದ್ದಾರೆ.

ಕಿಚ್ಚನ ಈ ಟ್ವೀಟ್​ಗೆ ಎಲ್ಲವೂ ಮೆಚ್ಚುಗೆಯ ಕಾಮೆಂಟ್​ಗಳೇ ಬರುತ್ತಿವೆ. ಅದೆಷ್ಟೋ ಜನ ರೀಟ್ವೀಟ್​ ಮಾಡಿಕೊಂಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಆದರೆ, ಸುದೀಪ್​ ಅವರು ಒಮ್ಮೆಲೆ ಯಾಕಿಷ್ಟು ಕಠೋರವಾಗಿ ಟ್ವೀಟ್​ ಮಾಡಿದ್ದಾರೆಂಬುದು ಗೊತ್ತಿಲ್ಲ.

ಕಿಚ್ಚ ಸುದೀಪ್​ ಸದ್ಯ ಪೈಲ್ವಾನ್​ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಸಿನಿಮಾಕ್ಕಾಗಿ ಅಭಿಮಾನಿಗಳೂ ಕುತೂಹಲದಿಂದ ಕಾಯುತ್ತಿದ್ದಾರೆ.

One Reply to “ಗಂಡಸುತನ ತೋರಿಸಲು ಕತ್ತಲಾಗಬೇಕಿಲ್ಲ, ಯೋಗ್ಯತೆ ಇಲ್ಲದವರ ಜತೆ ಫೈಟ್​ ಮಾಡೋಲ್ಲ: ಕಿಚ್ಚ ಸುದೀಪ್​ ಖಡಕ್​ ಟ್ವೀಟ್​”

Leave a Reply

Your email address will not be published. Required fields are marked *