ಗ್ರೀನ್​ವಿುಸ್ಟ್ ಬಡಾವಣೆಗೆ ಹೆಚ್ಚಿದ ಬೇಡಿಕೆ

ಆದ್ಯ ಪ್ರಾಪರ್ಟೀಸ್​ನಿಂದ ತುಮಕೂರು ರಸ್ತೆ ನೆಲಮಂಗಲ ಹತ್ತಿರದ ರೈಲ್ವೆ ಗೊಲ್ಲಹಳ್ಳಿಯಲ್ಲಿ ಅಭಿವೃದ್ಧಿಪಡಿಸಲಾಗಿರುವ ‘ಗ್ರೀನ್ ಮಿಸ್ಟ್’ ಬಡಾವಣೆಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಎಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಬಡಾವಣೆಯಲ್ಲಿ ಅತೀ ಕಡಿಮೆ ಬೆಲೆಗೆ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ.

ತುಮಕೂರು ರಸ್ತೆಯಲ್ಲಿ ಅದರಲ್ಲಿಯೂ ನೆಲಮಂಗಲ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆಯಿದೆ. ಮುಂದೆ ಈ ಪ್ರದೇಶ ವೇಗದ ಅಭಿವೃದ್ಧಿ ಕಾಣುವ ನಿರೀಕ್ಷೆ ಇರುವುದೇ ಈ ಪರಿಯ ಬೇಡಿಕೆಗೆ ಕಾರಣವಾಗಿದೆ. ಆದ್ದರಿಂದ ಹಲವಾರು ಬಿಲ್ಡರ್​ಗಳ ದೃಷ್ಟಿ ಈ ಭಾಗದತ್ತ ನೆಟ್ಟಿದೆ.

ಇದೀಗ ‘ಆದ್ಯ ಪ್ರಾಪರ್ಟೀಸ್’ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಂಡು ಇಲ್ಲಿ ‘ಗ್ರೀನ್ ಮಿಸ್ಟ್’ ಬಡಾವಣೆಯನ್ನು ನಿರ್ವಿುಸಿದೆ. 50ಕ್ಕೂ ಅಧಿಕ ನಿವೇಶನಗಳು ಮಾರಾಟಕ್ಕೆ ಲಭ್ಯವಿದ್ದು, ಬುಕ್ಕಿಂಗ್ ಆರಂಭಗೊಂಡಿದೆ.

ಮೂಲಸೌಕರ್ಯದ ಮಧ್ಯೆ ಬಡಾವಣೆ: ‘ಗ್ರೀನ್ ಮಿಸ್ಟ್’ ಬಡಾವಣೆಯಲ್ಲಿ ಸಕಲ ಸೌಲಭ್ಯಗಳಿವೆ. ಕುಡಿಯುವ ನೀರು, ಒಳಚರಂಡಿ, ಸುಸಜ್ಜಿತ ರಸ್ತೆಗಳನ್ನು ಬಡಾವಣೆ ಹೊಂದಿದೆ. ಸುತ್ತಮುತ್ತಲಿನ ಪ್ರದೇಶವೂ ಸಂಪೂರ್ಣ ಅಭಿವೃದ್ಧಿ ಹೊಂದಿರುವುದರಿಂದ ವಾಸಯೋಗ್ಯ ಬಡಾವಣೆ ಇದಾಗಿದೆ. ಆದ್ದರಿಂದ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕೆಂದು ಬಯಸುವವರು ಇಲ್ಲಿ್ಲ ನಿಶ್ಚಿಂತೆಯಿಂದ ಮನೆ ಮಾಡಬಹುದಾಗಿದೆ.

ಬಡಾವಣೆಯ ಮುಖ್ಯರಸ್ತೆ ಹಾಗೂ ಒಳಭಾಗದ ರಸ್ತೆಗಳು ತಲಾ 40 ಅಡಿ ವಿಸ್ತೀರ್ಣ ಹೊಂದಿದ್ದು, ಪ್ರತಿ ನಿವೇಶನಕ್ಕೂ ಪ್ರತ್ಯೇಕ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದೆ.

ಬಡಾವಣೆಯಿಂದ ರೈಲು ನಿಲ್ದಾಣವು ಕೂಗಳತೆಯಲ್ಲಿದ್ದು, ಅಂತಾರಾಷ್ಟ್ರೀಯ ಹಾಕಿ ಮೈದಾನವೂ ಹತ್ತಿರದಲ್ಲಿದೆ. ಟಾಟಾ ಸೇರಿ ಇತರ ಹಲವು ಅಪಾರ್ಟ್​ವೆುಂಟ್​ಗಳ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಆದ್ದರಿಂದಲೇ ‘ಗ್ರೀನ್ ಮಿಸ್ಟ್’ ಬಡಾವಣೆ, ಹೂಡಿಕೆಗೂ ಪ್ರಶಸ್ತ ಎಂದು ಹೇಳಲಾಗುತ್ತಿದೆ.

ಕೈಗೆಟಕುವ ದರದಲ್ಲಿ ನಿವೇಶನ: ‘ಆದ್ಯ ಪ್ರಾಪರ್ಟೀಸ್’ ತನ್ನ ಈ ಬಡಾವಣೆಯಲ್ಲಿ ಕಡಿಮೆ ದರದಲ್ಲಿ, ಮಧ್ಯಮ ವರ್ಗದವರಿಗೂ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಮಾರಾಟ ಮಾಡುತ್ತಿದೆ.

20/30ಅಡಿ ನಿವೇಶನಗಳು 3.50 ಲಕ್ಷ ರೂಪಾಯಿಗಳಿಗೆ ಲಭ್ಯವಿದ್ದು, 30/40ಅಡಿ ನಿವೇಶನಗಳು 7 ಲಕ್ಷ ರೂಪಾಯಿಗಳಿಗೆ ಲಭ್ಯ ಇವೆ. ಈ ಹಿನ್ನೆಲೆಯಲ್ಲಿ, ರಾಜಧಾನಿ ಸುತ್ತಮುತ್ತಲೂ ಅತ್ಯಂತ ಕಡಿಮೆ ಬಂಡವಾಳದಲ್ಲಿ ಮನೆ ಮಾಡುವ ಹಲವರ ಕನಸು ನನಸಾಗಿಸುವ ಅವಕಾಶವನ್ನು ‘ಆದ್ಯ ಪ್ರಾಪರ್ಟೀಸ್’ ಒದಗಿಸಿ ಕೊಟ್ಟಿದೆ.

ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯೂ ಇರುವುದರಿಂದ ಬಡಾವಣೆಯನ್ನು ಸಂರ್ಪಸುವುದು ಸಹ ಅತ್ಯಂತ ಸುಲಭವಾಗಿದೆ. ಯಶವಂತಪುರ ಕೂಡ ಈ ಬಡಾವಣೆಗೆ ಹತ್ತಿರವಾಗುತ್ತದೆ. ಗೊರಗುಂಟೆಪಾಳ್ಯದಿಂದ ಕೇವಲ 25 ನಿಮಿಷ ದೂರದಲ್ಲಿ ಈ ಬಡಾವಣೆ ಇದೆ. ಮಕ್ಕಳ ಶಿಕ್ಷಣಕ್ಕಾಗಿ ಬಡಾವಣೆಗೆ ಹತ್ತಿರದಲ್ಲಿಯೇ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೂ ಲಭ್ಯವಿವೆ.

ಮಾಹಿತಿಗೆ ಸಂಪರ್ಕಿಸಿ

ವಿಶಿಷ್ಟ ಮಾದರಿಯಲ್ಲಿ ‘ಗ್ರೀನ್ ಮಿಸ್ಟ್’ ಬಡಾವಣೆಯನ್ನು ನಿರ್ವಿುಸಿರುವ ‘ಆದ್ಯ ಪ್ರಾಪರ್ಟೀಸ್’ ಭವಿಷ್ಯದಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಿದ್ಧತೆಯಲ್ಲಿದೆ. ‘ಗ್ರೀನ್​ವಿುಸ್ಟ್’ ಬಡಾವಣೆಯನ್ನೂ ಅತ್ಯಂತ ವಿಶೇಷವಾಗಿ ರೂಪಿಸಲಾಗಿದ್ದು, ಹಲವಾರು ವಿಶೇಷತೆಗಳನ್ನು ಈ ಬಡಾವಣೆ ಹೊಂದಿದೆ. ಮಾಹಿತಿಗೆ ಮೊ: 90351 00099 ಸಂರ್ಪಸಿ.