ಮಳೆಗಾಲದಲ್ಲಿ ಸಮಸ್ಯೆಗಳನ್ನು ಎದುರಿಸಲು ಸಿದ್ಧ

blank

ವಿರಾಜಪೇಟೆ : ಪ್ರತಿವರ್ಷ ಮಳೆಗಾಲದಲ್ಲಿ ಹಲವಾರು ಬಾರಿ ವಿರಾಜಪೇಟೆ ನಗರದ ವಿವಿಧ ಭಾಗಗಳಲ್ಲಿರುವ ಕಾಲುವೆಗಳಲ್ಲಿ ಹರಿದು ಬಂದ ತ್ಯಾಜ್ಯದ ನೀರು ಹಾಗೂ ಮಳೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತಡೆಯುಂಟು ಮಾಡುತ್ತಿತ್ತು. ಇಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಒದಗಿಸಲು ಪುರಸಭೆ ಇದೀಗ ಮಳೆಗಾಲ ಆರಂಭಕ್ಕೂ ಮುನ್ನವೇ ಸರ್ವಸನ್ನದ್ಧವಾಗಿದೆ.
ಕಾಲುವೆಯ ಸಮೀಪದ ಅಂಗಡಿ-ಮುಂಗಟ್ಟುಗಳಿಗೆ ಕಾಲುವೆಯ ತ್ಯಾಜ್ಯ ನೀರು ಸೇರುವುದು ಸಾಮಾನ್ಯ ಎಂಬಂತಾಗಿತ್ತು. ಕಳೆದ ವರ್ಷ ಮಳೆಗಾಲದಲ್ಲಂತೂ ಈ ಸಮಸ್ಯೆ ಮೇಲಿಂದ ಮೇಲೆ ತಲೆದೋರಿ ಪುರಸಭೆಗೆ ದೊಡ್ಡ ಸವಾಲು ಎಂಬಂತೆ ಪರಿಣಮಿಸಿತ್ತು. ಇದೀಗ ಪುರಸಭೆಯು ಈ ಸಮಸ್ಯೆ ನಿವಾರಣೆಗೆ ಪ್ರಾಯೋಗಿಕವಾಗಿ ಮುಂದಾಗಿದ್ದು ಈ ಬಾರಿ ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಮರುಕಳಿಸದಂತೆ ಮಾಡಬೇಕಾದ ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ನಿರಂತರವಾಗಿ ಮಾಡುತ್ತಿದೆ.
ವಿರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ, ಸುಭಾಷ್‌ನಗರ, ವಿಜಯನಗರ, ನೆಹರುನಗರ, ಚೌಕಿ, ಮೊಗೇರ ಗಲ್ಲಿ ಮುಂತಾದ ಕಡೆ ಬಿದ್ದ ಮಳೆ ನೀರು ರಸ್ತೆ ಹಾಗೂ ಚರಂಡಿಗಳ ಮೂಲಕ ಹರಿದು ಹಟ್ಟನ್ ಮಾರುಕಟ್ಟೆಯ ಬಳಿ ಕಾಲುವೆಯನ್ನು ಸೇರುತ್ತದೆ. ಇನ್ನೊಂದು ಕಡೆ ಕಾಲುವೆ ಮೇಲ್ಭಾಗದಿಂದ ಹರಿದು ಬರುವಾಗ ಜನರು ಎಸೆದಂತಹ ಪ್ಲಾಸ್ಟಿಕ್, ಇನ್ನಿತರ ತ್ಯಾಜ್ಯವನ್ನು ಸೇರಿಸಿ ಕೊಚ್ಚಿಕೊಂಡು ಬರುತ್ತದೆ.

blank

ಇನ್ನೊಂದೆಡೆ ಕಾಲುವೆ ಮುಂದಕ್ಕೆ ಸಾಗುವ ವಿಜಯನಗರದ ಭಾಗದಲ್ಲಿ 15 ಅಡಿ ಸುತ್ತಳತೆಯನ್ನು ಹೊಂದಿರುವ ಈ ರಾಜಕಣಿವೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು, ಬಳ್ಳಿ ತುಂಬಿ ಹೋಗಿದ್ದರೆ ಕಾಲುವೆಯ ಒಳಭಾಗದಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮೇಲ್ಭಾಗದ ಎತ್ತರದ ಪ್ರದೇಶದಿಂದ ಹರಿದು ಬಂದ ನೀರಿಗೆ ತಡೆಯುಂಟಾಗಿ ಪ್ರವಾಹದ ವಾತಾವರಣ ನಿರ್ಮಾಣವಾಗುತ್ತಿತ್ತು. ಮುಖ್ಯರಸ್ತೆಯ ಮೇಲೆ ನೀರು ತುಂಬುವುದು ಹಾಗೂ ಸಮೀಪದ ಅಂಗಡಿಗಳಿಗೆ ತ್ಯಾಜ್ಯ ನೀರು ಸೇರಲು ಇದುವೇ ಮೂಲ ಕಾರಣವಾಗಿತ್ತು.
ಇದೇ ರೀತಿ ನಗರದ ವಿವಿಧ ಕಡೆಗಳಲ್ಲಿ ಬೆಟ್ಟ ಪ್ರದೇಶಗಳಿದ್ದು ಅಲ್ಲಿ ಬಿದ್ದ ಮಳೆಯ ನೀರು ರಭಸವಾಗಿ ಹರಿದು ವಿವಿಧ ಕಡೆಗಳಲ್ಲಿನ ಕಾಲುವೆ ಸೇರುತಿತ್ತು. ನಗರದ ಒಳಗೆ ಸುಮಾರು ಹದಿನೈದು ಕಿ.ಮೀ.ನಷ್ಟು ಉದ್ದ ಇರುವ ಕಾಲುವೆಗಳಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ನೀರಿನ ಪ್ರಮಾಣ ಹೆಚ್ಚಿದಾಗ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ತೊಡಕು ಉಂಟು ಮಾಡುತ್ತಿತ್ತು.

ಸಮರ್ಪಕ ಒಳಚರಂಡಿ ನಿರ್ಮಾಣ, ನಿರ್ವಹಣೆ: ನಗರದಲ್ಲಿ ಮಳೆಗಾಲದಲ್ಲಿ ಮಟನ್ ಮಾರುಕಟ್ಟೆ ಬಳಿ ವಿರಾಜಪೇಟೆ-ಗೋಣಿಕೊಪ್ಪ ರಸ್ತೆ ಮೇಲೆ ಮಳೆಯ ನೀರು ಹಲವು ಬಾರಿ ಹರಿದು ಸಂಚಾರಕ್ಕೆ ತಡೆಯುಂಟು ಮಾಡುತ್ತಿತ್ತು. ಇದರಿಂದ ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಮೊದಲ ಹಂತದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಮಾರ್ಗದರ್ಶನದಲ್ಲಿ ಮಟನ್ ಮಾರುಕಟ್ಟೆಯ ಬಳಿ ಇದ್ದ ಹಳೆಯ ಒಳಚರಂಡಿಯನ್ನು ತೆರವುಗೊಳಿಸಿ ನೂತನ ಒಳಚರಂಡಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ನಗರದ ವಿವಿಧ ಭಾಗಗಳಲ್ಲಿ ಇರುವ ಒಳಚರಂಡಿಗಳ ಹೂಳನ್ನು ಎತ್ತುವುದರೊಂದಿಗೆ ರಸ್ತೆಯ ಎರಡೂ ಕಡೆ ಬೆಳೆದಿದ್ದ ಕಾಡುಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗಿದೆ.

Share This Article
blank

ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದಾಗುವ ಪ್ರಯೋಜನಗಳು…egg

egg: ಮನುಷ್ಯನ ಆರೋಗ್ಯಕ್ಕೆ ಮೊಟ್ಟೆ ಬಹಳ ಒಳ್ಳೆಯದು. ಹೀಗಾಗಿ ದಿನಾ ಬೆಳಗ್ಗೆ ಬೇಯಿಸಿದ ಮೊಟ್ಟೆ ತಿನ್ನುವ…

ಬೆಳಿಗ್ಗೆ ಎದ್ದು ಮೊಬೈಲ್ ನೋಡುವ ಬದಲು ಈ ಕೆಲಸಗಳನ್ನು ಮಾಡಿ, ದಿನವಿಡೀ ಉತ್ಸಾಹದಿಂದಿರಬಹುದು! Morning

Morning: ಬೆಳಿಗ್ಗೆ ಚೆನ್ನಾಗಿ ಪ್ರಾರಂಭವಾದರೆ, ಇಡೀ ದಿನ ಚೆನ್ನಾಗಿ ನಡೆಯುತ್ತದೆ. ದೇಹವನ್ನು ಆರೋಗ್ಯಕರವಾಗಿ, ಫಿಟ್ ಆಗಿ…

blank