ಬೆಳಗಾವಿ: ಜನ ಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಪತ್ರಿಕೆ ದೊರೆಯಬೇಕು ಎಂಬ ಉದ್ದೇಶದಿಂದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಆರಂಭಿಸಿರುವ ವಿಜಯವಾಣಿ ದಿನಪತ್ರಿಕೆ ನಮ್ಮ ದಿನನಿತ್ಯ ಜೀವನದ ಒಂದು ಭಾಗವಾಗಿದೆ. ಅಲ್ಲದೆ ಓದುವ ಹವ್ಯಾಸವನ್ನೂ ಇಮ್ಮಡಿಗೊಳಿಸಿದೆ.
ಬೆಳಗಾವಿ ತಾಲೂಕಿನ ಹೊನಗಾ ಕೈಗಾರಿಕಾ ಪ್ರದೇಶದಲ್ಲಿರುವ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಶುಕ್ರವಾರ ಭೇಟಿ ನೀಡಿದ ಸಹ್ಯಾದ್ರಿ ನಗರದ ಮಹಾಲಕ್ಷ್ಮೀ ಮಹಿಳಾ ಮಂಡಳದ ಸದಸ್ಯೆಯರು ಈ ರೀತಿಯಾಗೀ ತಮ್ಮ ಅನಿಸಿಕೆ ಹಂಚಿಕೊಂಡರು.
ಒಂದು ದಿನಪತ್ರಿಕೆ ಹೊರಬರಲು ಎಷ್ಟು ಜನರ ಶ್ರಮಿವಿದೆ. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ ಎಂಬುವುದು ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನೀಡಿದ ಬಳಿಕವೇ ಗೊತ್ತಾಯಿತು. ರಾಜ್ಯದಲ್ಲಿ ನಂ.1 ಸ್ಥಾನದಲ್ಲಿರುವ ವಿಜಯವಾಣಿ ದಿನಪತ್ರಿಕೆ ಕೇವಲ ಸುದ್ದಿಗೆ ಸೀಮಿತಗೊಳ್ಳದೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಅಲ್ಲದೆ, ವಿದ್ಯಾರ್ಥಿಗಳಿಗಾಗಿಯೇ ವಿದ್ಯಾರ್ಥಿ ಮಿತ್ರ ತಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಕಡ್ಡಾಯವಾಗಿ ವಿಜಯವಾಣಿ ಓದಬೇಕು. ನಾವು ಪ್ರತಿನಿತ್ಯ ದಿನಪತ್ರಿಕೆ ಖರೀದಿಸಿ ಎಲ್ಲ ವಿಷಯ ತಿಳಿದುಕೊಳ್ಳುತ್ತೇವೆ. ವಿಜಯವಾಣಿ ದಿನಪತ್ರಿಕೆ ಸುದ್ದಿ ಸಂಗ್ರಹ, ಪುಟ ವಿನ್ಯಾಸ, ಪತ್ರಿಕೆ ಪ್ರಿಂಟಿಂಗ್‌ವರೆಗೆ ಶ್ರಮಿಸುತ್ತಿರುವ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಂ.1 ಸ್ಥಾನದಲ್ಲಿರುವ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಕಾರ್ಯ ಯುವ ಸಮುದಾಯಕ್ಕೆ ಮಾದರಿಯಾಗಿದೆ. ಸಾರಿಗೆ, ಲಾಜಿಸ್ಟಿಕ್ಸ್‌ನಲ್ಲಿ ವಿಆರ್‌ಎಲ್ ಎಂದರೆ ಪ್ರತಿಯೊಬ್ಬರಿಗೂ ನಂಬಿಕೆಯ ಪ್ರತೀಕವಾಗಿದೆ. ನಮಗೆಲ್ಲ ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸುತ್ತೇವೆ ಎಂದರು.
ವಿಆರ್‌ಎಲ್ ಮೀಡಿಯಾ ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿರುವ ಡಾ.ವಿಜಯ ಸಂಕೇಶ್ವರ, ಡಾ.ಆನಂದ ಸಂಕೇಶ್ವರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಿಂಟಿಂಗ್ ಪ್ರೆಸ್ ನೋಡಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಇದು ಸದಾ ನೆನಪಿನಲ್ಲಿರುತ್ತದೆ.
| ಜ್ಯೋತಿ ಶೆಟ್ಟಿ ಸಹ್ಯಾದ್ರಿ ನಗರದ ನಿವಾಸಿವಿಆರ್ಎಲ್ ಮೀಡಿಯಾದಿಂದ ಮಕ್ಕಳಿಗಾಗಿ ಹೊರ ತಂದಿರುವ ವಿಜಯವಾಣಿ ವಿದ್ಯಾರ್ಥಿ ಮಿತ್ರ ಕಲಿಕೆಗೆ ಪೂರಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೂ ಹೆಚ್ಚಿನ ಜ್ಞಾನ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವಿಜಯವಾಣಿ ತಪ್ಪದೆ ಓದಬೇಕು.
| ಸ್ವರೂಪರಾಣಿ ಗಲಗಲಿ ಸಹ್ಯಾದ್ರಿ ನಗರ ನಿವಾಸಿ